ಬಂಗಾರಪೇಟೆ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಮತ್ತು ಕೃಷಿ ಸಲಕರಣೆಗಳ ಬೆಲೆ ಏರಿಕೆಯನ್ನು ಕೂಡಲೇ ಕಡಿಮೆ ಮಾಡಬೇಕು, ಜನಸಾಮಾನ್ಯರಿಗೆ ಮತ್ತು ರೈತರಿಗೆ ಹೊರೆಯಾಗುತ್ತಿರುವ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ವಾಪಸ್ ಪಡೆಯಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.
ಪಟ್ಟಣದ ರೈಲ್ವೆ ಜಂಕ್ಷನ್‌ಗೆ ಮುತ್ತಿಗೆ ಹಾಕಿ ಪ್ರತಿ ಭಟನೆ ಮಾಡಿ ಮಾತನಾಡಿದ ಅವರು, ದೆಹಲಿ ಚಲೋ ರೈತರ ಕರೆ ನೀಡಿರುವ ರೈಲ್ ರೊಕೋ ಚಳವಳಿಗೆ ಬೆಂಬಲವಾಗಿ ರೈತ ಸಂಘದಿಂದ ಪೊರಕೆ, ಗ್ಯಾಸ್, ಪೈಪ್‌ಗ್ಳ ಸಮೇತ ರೈಲ್ವೆ ರೊಕೊ ಮಾಡಿ ಪ್ರತಿಭಟನೆ ಮಾಡಿದರೂ ದೇಶವನ್ನಾಳುವ ಸರ್ಕಾರ ಗಳು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದರು.
ಕೃಷಿ ಕ್ಷೇತ್ರಕ್ಕೆ ಕಂಟಕ: ಕೇಂದ್ರ ಸರ್ಕಾರ ಕೆಲ ಉದ್ಯಮಿ ಗಳು ಹಾಗೂ ಕಾರ್ಪೊರೆಟ್ ಪರವಾಗಿ ಆಡಳಿತ ನಡೆಸುತ್ತಿದೆ ಎಂದು ದೂರಿದರು. ಅಚ್ಛೇ ದಿನ್ ಅಚ್ಛೇ ದಿನ್ ಎಂದು ಹೇಳುತ್ತಾ ಕೃಷಿ ಕ್ಷೇತ್ರವನ್ನು ಸಂಪೂರ್ಣ ವಾಗಿ ನಾಶ ಮಾಡುವ ಜೊತೆಗೆ ನಿರುದ್ಯೋಗ ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜು ನಾಥ್ ಮಾತನಾಡಿ, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳಿಂದ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರ ನಾಶ ವಾಗಲಿದೆ.
ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಅಗತ್ಯ ವಸ್ತು ಗಳನ್ನು ಏರಿಕೆ ಮಾಡಿ ಕೃಷಿ ಹೆಸರಿನಲ್ಲಿ ರೈತರ ಭವಿಷ್ಯ ವನ್ನು ಉದ್ಯಮಿಗಳು, ಕಾರ್ಪೊರೇಟ್ ಕಂಪನಿಗಳ ಕೈಯಲ್ಲಿಡಲು ಹೊರಟಿದೆ ಎಂದು ದೂರಿದರು. ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಅಧ್ಯಕ್ಷ ಐತಾಂಡಹಳ್ಳಿ ಮುನ್ನ, ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಕಿರಣ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಈಕಂಬಳ್ಳಿ ಮಂಜು ನಾಥ, ಜಮೀರ್‌ಪಾಷ, ನಳಿನಿ, ಭಾಗ್ಯ, ಚೌಡಮ್ಮ, ಚಲಪತಿ, ವಟ್ರಕುಂಟೆ ಆಂಜಿನಪ್ಪ, ಅನಿಲ್, ವಿನೋದ್, ಜಗದೀಶ್, ಜಾವೀದ್‌ಪಾಷ, ಗೌಸ್ ಪಾಷ, ಮಂಗಸಂದ್ರ ತಿಮ್ಮಣ್ಣ, ಮಹಮದ್ ಬುರಾನ್, ಮಹಮದ್ ಶೋಯೀಬ್, ಕಣ್ಣೂರು ಮಂಜುನಾಥ, ತೆರ್ನಹಳ್ಳಿ ಆಂಜಿನಪ್ಪ, ಸುಪ್ರಿಂಚಲ ಇದ್ದರು.