Advertisement

ಇಯರ್‌ ಬ್ಯಾಕ್‌ ಪದ್ಧತಿ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ

04:13 PM Sep 02, 2017 | Team Udayavani |

ರಾಯಚೂರು: ಈಯರ್‌ ಬ್ಯಾಕ್‌ ಪದ್ಧತಿ ಹಿಂಪಡೆದು ಹಳೇ ಮಾದರಿಯಲ್ಲಿ ಪರೀಕ್ಷೆ ನಡೆಸುವಂತೆ ಆಗ್ರಹಿಸಿ
ಎಐಡಿಎಸ್‌ಒನಿಂದ ರಾಜ್ಯಾದ್ಯಂತ ಕರೆ ನೀಡಿದ್ದ ವಿಟಿಯು ಇಂಜಿನಿಯರಿಂಗ್‌ ಕಾಲೇಜುಗಳ ಬಂದ್‌ ಕರೆಗೆ ನಗರದಲ್ಲೂ
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ವಿಟಿಯು ವ್ಯಾಪ್ತಿಯ ವಿವಿಧ ಇಂಜಿನಿಯರಿಂಗ್‌ ಕಾಲೇಜ್‌ ವಿದ್ಯಾರ್ಥಿಗಳು ನಗರದ ಚಂದ್ರಮೌಳೇಶ್ವರ ವೃತ್ತದಿಂದ
ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ವಿಟಿಯು ಕುಲಪತಿಗೆ ಮನವಿ
ಸಲ್ಲಿಸಿದರು.

ಹಳೆ ವಿದ್ಯಾರ್ಥಿಗಳಿಗೆ ಇಯರ್‌ ಬ್ಯಾಕ್‌ ಹಾಗೂ ಕ್ರಿಟಿಕಲ್‌ ವ್ಯವಸ್ಥೆ ಜಾರಿಗೊಳಿಸಿರುವುದು ಸರಿಯಲ್ಲ. ವಿಟಿಯು ಜಾರಿಗೊಳಿಸಿದ ಸಿಬಿಎಸ್‌ ಪಠ್ಯಕ್ರಮದಿಂದ ಹಳೇ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. 2010 ಹಾಗೂ ಅದಕ್ಕೂ ಮುಂಚಿನ ವಿದ್ಯಾರ್ಥಿಗಳು ಹಳೇ ಮಾದರಿ ಪಠ್ಯಕ್ರಮದಲ್ಲಿ ಓದುತ್ತಿದ್ದು, ದಿಢೀರ್‌ ಸಿಬಿಸಿಎಸ್‌ ಜಾರಿಗೊಳಿಸಿದರೆ ಎರಡು ಮಾದರಿಗಳಲ್ಲಿ ಪರೀಕ್ಷೆ ಎದರಿಸಬೇಕಿದ್ದು ಸಮಸ್ಯೆಯಾಗಲಿದೆ ಎಂದರು.

ಹಳೇ ಹಾಗೂ ಸಿಬಿಸಿಎಸ್‌ ಮಾದರಿ ಪರೀಕ್ಷೆಗಳನ್ನು ಬರೆದು ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪುನಃ
ಒಂದೆ ಸೆಮಿಸ್ಟರ್‌ನಲ್ಲಿ ನಡೆಸುವುದರಿಂದ ಪರೀಕ್ಷೆ ಸಿದ್ಧತೆಗೆ ಸಮಯವಿಲ್ಲದಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ
ಸಪ್ಲಿಮೆಂಟರಿ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು.

ಸಿಬಿಸಿಎಸ್‌ ಪಠ್ಯಕ್ರಮ ಹಳೇ ಮಾದರಿಗಿಂತ ಕಠಿಣವಾಗಿದ್ದು, ಹಳೇ ವಿದ್ಯಾರ್ಥಿಗಳ ಪಾಲಿಗೆ ತೊಡಕಾಗಿದೆ.
ಉನ್ನತ ಶಿಕ್ಷಣ ಇಲಾಖೆ ಹಳೇ ಮಾದರಿಯಲ್ಲಿ ಬೊಧಿಸಲು ಆದೇಶಿಸಿದೆಯಾದರೂ ಅನೇಕ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆಯಿಂದ ಆಗುತ್ತಿಲ್ಲ. ಸರ್ಕಾರ ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೂಡಲೇ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಎಐಡಿಎಸ್‌ಒ ಸಂಚಾಲಕ ಮಹೇಶ ಚೀಕಲಪರ್ವಿ, ವಿದ್ಯಾರ್ಥಿ ಮುಖಂಡರಾದ ಶ್ರೀನಿವಾಸ, ನವೀನ, ಅಕ್ಷಯ
ಸೇರಿ ವಿವಿಧ ಇಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next