Advertisement

ಬೌದ್ಧ ಧರ್ಮದ ಅವಶೇಷಗಳನ್ನು ರಕ್ಷಿಸಿ

05:00 AM Jun 23, 2020 | Lakshmi GovindaRaj |

ಯಳಂದೂರು: ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ರಾಮಮಂದಿರದ ಜಾಗದಲ್ಲಿ ದೊರೆತಿರುವ ಬೌದ್ಧ ಧರ್ಮದ ಕುರುಹುಗಳನ್ನು ರಕ್ಷಿಸುವಂತೆ ಒತ್ತಾಯಿಸಿ ದಸಂಸ ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ದಸಂಸ ಜಿಲ್ಲಾ ಸಂಚಾಲಕ ರಾಜಣ್ಣ ಮಾತನಾಡಿದರು.

Advertisement

ಸರ್ವೋಚ್ಚ ನ್ಯಾಯಾಲಯ ಬಾಬರಿ ಮಸೀದಿ- ರಾಮಮಂದಿರ ವಿವಾದ ಬಗೆಹರಿಸಿ, ಅಲ್ಲಿ ರಾಮ ಮಂದಿರ ನಿರ್ಮಿಸಲು ತೀರ್ಪು ನೀಡಿತ್ತು. ಈ ನಿಟ್ಟಿನಲ್ಲಿ ರಾಮಮಂದಿರ ನಿರ್ಮಾಣದ ವೇಳೆ ಆ ಸ್ಥಳದಲ್ಲಿ ಬೌದ್ಧ ಧರ್ಮದ ಅವಶೇಷಗಳು, ಕಲಾಕೃತಿಗಳು, ಕುರುಹುಗಳು ದೊರೆತಿವೆ. ಇದರಿಂದ ಇಲ್ಲಿ ಬೌದ್ಧವಿಹಾರ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಅವುಗಳನ್ನು ಸಂರಕ್ಷಿಸಬೇಕು  ಎಂದು ಆಗ್ರಹಿಸಿದರು.

ದಸಂಸ ಕಂದಹಳ್ಳಿ ನಾರಾಯಣ ಮಾತನಾಡಿ, ರಾಮಮಂದಿರ ನಿರ್ಮಿಸುವ ಸ್ಥಳವನ್ನು ಮತ್ತೂಮ್ಮೆ ಉತನನ ನಡೆಸಬೇಕು. ರಾಮಮಂದಿರ ನಿರ್ಮಾಣ ಮಾಡುತ್ತಿ ರುವ ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ರಾಯ್‌  ಹಾಗೂ ಇದಕ್ಕೆ ಅನುಕೂಲ ಮಾಡಿಕೊಟ್ಟಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದರು. ಪ್ರತಿಭಟನೆಯಲ್ಲಿ ರಾಮಪುರ ರಂಗಸ್ವಾಮಿ, ಮದ್ದೂರು ಚಕ್ರವರ್ತಿ, ಹೊನ್ನೂರು ರೇವಣ್ಣ, ಚಂದ್ರು,  ರಾಜಣ್ಣ, ನಂಜುಂಡ ಸ್ವಾಮಿ, ಮಂಜು, ನಾರಾಯಣಸ್ವಾಮಿ, ನಿಂಗರಾಜು, ಕುಮಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next