Advertisement

ಮುನ್ನಡೆಯ ಗಂಟು 498

08:25 AM Jul 29, 2017 | Harsha Rao |

ಗಾಲೆ: ಗಾಲೆ ಟೆಸ್ಟ್‌ ಪಂದ್ಯವನ್ನು ಭಾರತ ಭಾರೀ ದೊಡ್ಡ ಅಂತರದಿಂದ ಗೆಲ್ಲುವ ಸೂಚನೆ ನೀಡಿದೆ. 309 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಹೊರತಾಗಿಯೂ ಆತಿಥೇಯ ಶ್ರೀಲಂಕಾಕ್ಕೆ ಫಾಲೋಆನ್‌ ಹೇರದ ಕೊಹ್ಲಿ ಪಡೆ, ದ್ವಿತೀಯ ಸರದಿಯಲ್ಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ಒಟ್ಟು 498 ರನ್ನುಗಳ ಬೃಹತ್‌ ಮುನ್ನಡೆ ಗಳಿಸಿದೆ. 

Advertisement

5ಕ್ಕೆ 154 ರನ್‌ ಗಳಿಸಿದಲ್ಲಿಂದ 3ನೇ ದಿನದಾಟ ಆರಂಭಿಸಿದ ಶ್ರೀಲಂಕಾ 291ಕ್ಕೆ ತನ್ನ ಮೊದಲ ಇನ್ನಿಂಗ್ಸ್‌ ಮುಗಿಸಿತು. ಭಾರತಕ್ಕೆ ಲಭಿಸಿದ ಮುನ್ನಡೆ ಭರ್ಜರಿ 309 ರನ್‌. ಆದರೆ ಆತಿಥೇಯ ತಂಡಕ್ಕೆ ಫಾಲೋಆನ್‌ ವಿಧಿಸದೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಟೀಮ್‌ ಇಂಡಿಯಾ 3 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿದೆ. ಪಂದ್ಯವಿನ್ನೂ ಪೂರ್ತಿ 2 ದಿನ ಕಾಣಲಿಕ್ಕಿದ್ದರೂ ಮಳೆ ಭೀತಿ ಎದುರಾಗಿರುವುದರಿಂದ ಶನಿವಾರ ಕ್ಯಾಪ್ಟನ್‌ ಕೊಹ್ಲಿಯವರ ಸಂಭಾವ್ಯ ಶತಕ ಪೂರ್ತಿಯಾದೊಡನೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡುವ ಸಾಧ್ಯತೆ ಇದೆ. ಕೊಹ್ಲಿ 76 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಶುಕ್ರವಾರ ಚಹಾ ವಿರಾಮಕ್ಕೂ ಮೊದಲು ಸುರಿದ ಮಳೆಯಿಂದಾಗಿ 86 ನಿಮಿಷಗಳ ಆಟ ನಷ್ಟವಾಗಿತ್ತು. ಹೀಗಾಗಿ ಶನಿವಾರದ ಆಟವನ್ನು 15 ನಿಮಿಷ ಬೇಗ ಆರಂಭಿಸಲಾಗುವುದು. 

ಶತಕದ ಜತೆಯಾಟ: ಭಾರತದ ದ್ವಿತೀಯ ಸರದಿಯಲ್ಲಿ ಆರಂಭಕಾರ ಶಿಖರ್‌ ಧವನ್‌ (14) ಮತ್ತು ವನ್‌ಡೌನ್‌ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ (15) ವಿಕೆಟ್‌ ಬೇಗನೆ ಉರುಳಿತು. ಇವರಿಬ್ಬರೂ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿ ಮಿಂಚಿದ್ದರು. ಆದರೆ ಪ್ರಥಮ ಸರದಿಯಲ್ಲಿ ಕ್ಲಿಕ್‌ ಆಗದ ಅಭಿನವ್‌ ಮುಕುಂದ್‌ ಮತ್ತು ವಿರಾಟ್‌ ಕೊಹ್ಲಿ ದ್ವಿತೀಯ ಇನ್ನಿಂಗ್ಸಿನಲ್ಲಿ ಕ್ರೀಸಿಗೆ ಅಂಟಿಕೊಂಡು ಆಡಿದರು. 3ನೇ ವಿಕೆಟಿಗೆ 133 ರನ್‌ ಪೇರಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು.

ಜ್ವರಪೀಡಿತ ಕೆ.ಎಲ್‌. ರಾಹುಲ್‌ ಸ್ಥಾನಕ್ಕೆ ಬಂದಿದ್ದ ಅಭಿನವ್‌ ಮುಕುಂದ್‌ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 12 ರನ್‌ ಮಾಡಿ ನಿರ್ಗಮಿಸಿದ್ದರು. ಇಲ್ಲಿ ಜೀವನಶ್ರೇಷ್ಠ 81 ರನ್‌ ಬಾರಿಸಿ ಮಿಂಚಿದರು. ಇದು ಅವರ 2ನೇ ಅರ್ಧ ಶತಕ. ಮೊದಲ ಫಿಫ್ಟಿ ದಾಖಲಾದದ್ದು 2011ರಷ್ಟು ಹಿಂದೆ, ವೆಸ್ಟ್‌ ಇಂಡೀಸಿನಲ್ಲಿ. 116 ಎಸೆತ ಎದುರಿಸಿದ ಮುಕುಂದ್‌ 8 ಬೌಂಡರಿ ನೆರವಿನಿಂದ ತಮ್ಮ ಇನ್ನಿಂಗ್ಸ್‌ ಕಟ್ಟಿದರು. ಇನ್ನೇನು ದಿನದಾಟ ಮುಗಿಯಿತು ಎನ್ನುವಾಗ ಗುಣತಿಲಕ ಎಸೆತವನ್ನು ಕಾಲಿನ ಮೇಲೆಳೆದುಕೊಂಡು ಲೆಗ್‌ ಬಿಫೋರ್‌ ಆದರು. ಅಂಪಾಯರ್‌ ತೀರ್ಪನ್ನು “ರೀವ್ಯೂ’ಗೆ ನೀಡಿದರೂ ಅದು ಮುಕುಂದ್‌ಗೆ ವಿರುದ್ಧವಾಗಿಯೇ ಬಂತು. ಈ ವಿಕೆಟ್‌ ಪತನಗೊಂಡೊಡನೆಯೇ 3ನೇ ದಿನದಾಟವನ್ನು ಕೊನೆಗೊಳಿಸಲಾಯಿತು.

Advertisement

ಮೊದಲ ಸರದಿಯಲ್ಲಿ ಕೇವಲ 3 ರನ್‌ ಮಾಡಿದ್ದ ನಾಯಕ ವಿರಾಟ್‌ ಕೊಹ್ಲಿ ಶನಿವಾರ ನೂರರ ಸುಳಿವು ನೀಡಿದ್ದಾರೆ. 114 ಎಸೆತಗಳ ಈ ಕಪ್ತಾನನ ಆಟದಲ್ಲಿ 5 ಬೌಂಡರಿ ಒಳಗೊಂಡಿದೆ. ಕೊಹ್ಲಿ ಫೆಬ್ರವರಿ ಬಳಿಕ ಟೆಸ್ಟ್‌ನಲ್ಲಿ 40ರ ಗಡಿ ದಾಟಿದ್ದು ಇದೇ ಮೊದಲು. ಅಂದಿನ ಬಾಂಗ್ಲಾದೇಶ ವಿರುದ್ಧದ ಹೈದರಾಬಾದ್‌ ಟೆಸ್ಟ್‌ನಲ್ಲಿ ಕೊಹ್ಲಿ 204 ಮತ್ತು 38 ರನ್‌ ಹೊಡೆದಿದ್ದರು. ಆದರೆ ಆಸ್ಟ್ರೇಲಿಯ ವಿರುದ್ಧ 15ರ ಗಡಿ ದಾಟಿರಲಿಲ್ಲ.
ಲಂಕಾ ಪರ ಪೆರೆರ, ಕುಮಾರ ಮತ್ತು ಗುಣತಿಲಕ ಒಂದೊಂದು ವಿಕೆಟ್‌ ಉರುಳಿಸಿದರು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    600

ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌ (ನಿನ್ನೆ 5 ವಿಕೆಟಿಗೆ 154)
ಏಂಜೆಲೊ ಮ್ಯಾಥ್ಯೂಸ್‌    ಸಿ ಕೊಹ್ಲಿ ಬಿ ಜಡೇಜ    83
ದಿಲುÅವಾನ್‌ ಪೆರೆರ    ಔಟಾಗದೆ    92
ರಂಗನ ಹೆರಾತ್‌    ಸಿ ರಹಾನೆ ಬಿ ಜಡೇಜ    9
ನುವಾನ್‌ ಪ್ರದೀಪ್‌    ಬಿ ಪಾಂಡ್ಯ    10
ಲಹಿರು ಕುಮಾರ    ಬಿ ಜಡೇಜ    2
ಇತರ        5
ಒಟ್ಟು  (ಆಲೌಟ್‌)        291
ವಿಕೆಟ್‌ ಪತನ: 1-7, 2-68, 3-68, 4-125, 5-143. 
ಬೌಲಿಂಗ್‌:

ಮೊಹಮ್ಮದ್‌ ಶಮಿ        12-2-45-2
ಉಮೇಶ್‌ ಯಾದವ್‌        14-1-78-1
ಆರ್‌. ಅಶ್ವಿ‌ನ್‌        27-5-84-1
ರವೀಂದ್ರ ಜಡೇಜ        22.3-3-67-3
ಹಾರ್ದಿಕ್‌ ಪಾಂಡ್ಯ        3-0-13-1
ಭಾರತ ದ್ವಿತೀಯ ಇನ್ನಿಂಗ್ಸ್‌
ಶಿಖರ್‌ ಧವನ್‌  ಸಿ ಡಿ’ಸಿಲ್ವ ಬಿ ಪೆರೆರ  14
ಅಭಿನವ್‌ ಮುಕುಂದ್‌ ಎಲ್‌ಬಿಡಬ್ಲ್ಯು ಗುಣತಿಲಕ  81
ಚೇತೇಶ್ವರ್‌ ಪೂಜಾರ  ಸಿ ಮೆಂಡಿಸ್‌ ಬಿ ಕುಮಾರ  15
ವಿರಾಟ್‌ ಕೊಹ್ಲಿ ಬ್ಯಾಟಿಂಗ್‌  76
ಇತರ : 3
ಒಟ್ಟು  (3 ವಿಕೆಟಿಗೆ)        189
ವಿಕೆಟ್‌ ಪತನ: 1-19, 2-56, 3-189.
ಬೌಲಿಂಗ್‌:

ನುವಾನ್‌ ಪ್ರದೀಪ್‌        10-2-44-0
ದಿಲುÅವಾನ್‌ ಪೆರೆರ        12-0-42-1
ಲಹಿರು ಕುಮಾರ        11-1-53-1
ರಂಗನ ಹೆರಾತ್‌        9-0-34-0
ದನುಷ್ಕ ಗುಣತಿಲಕ        4.3-0-15-1

Advertisement

Udayavani is now on Telegram. Click here to join our channel and stay updated with the latest news.

Next