Advertisement
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂದಾಯ ಇಲಾಖೆ, ಗ್ರಾಪಂ ಅಧಿಕಾರಿಗಳು ಬಡಜನರಿಗೆ ಸರ್ಕಾರ ಮಂಜೂರು ಮಾಡುವ ಮನೆಗಳ ಮಂಜೂರಾತಿಗೆ25 ಸಾವಿರ ರೂ.ನಿಂದ 1 ಲಕ್ಷ ರೂ. ಲಂಚಪಡೆಯುತ್ತೀರಿ ಅನ್ನುವ ಆರೋಪ ಜನರಿಂದಷ್ಟೇಅಲ್ಲ, ಮಾಧ್ಯಮಗಳಿಂದಲೂ ತಿಳಿದು ಬಂದಿದೆ ಎಂದು ಹೇಳಿದರು.
Related Articles
Advertisement
ಇನ್ಸ್‌ಪೆಕ್ಟರ್‌ಗಳು ಗೈರು: ಸಭೆ ಆರಂಭಕ್ಕೂ ಮುನ್ನಸರ್ಕಲ್‌ಇನ್ಸ್‌ಪೆಕ್ಟರ್‌ಗಳು, ಎಸ್‌ಐ ಸಭೆಗೆಗೈರಾಗಿದ್ದರಿಂದ ಕೆಂಡಮಂಡಲರಾದ ಶಾಸಕರು, ಇನ್ಸ್‌ಪೆಕ್ಟರ್ ಸಭೆಗೆ ಆಗಮಿಸುವ ತನಕ ಪ್ರಗತಿ ಪರಿಶೀಲನಾ ಸಭೆ ನಡೆಸುವುದಿಲ್ಲ ಎಂದು ಪಟ್ಟುಹಿಡಿದರು.
ರಾಜ್ಯಪಾಲರ ಬಂದೂಬಸ್ತ್ಗೆ ಸಿದ್ಧತೆನಡೆಸುತ್ತಿದ್ದ ಸರ್ಕಲ್‌ಇನ್ಸ್‌ಪೆಕ್ಟರ್ ಬಸವರಾಜು ಎಸ್ಪಿಆದೇಶದಂತೆ ತಡವಾಗಿ ಸಭೆಗೆ ಆಗಮಿಸಿದರು.
ಶಾಸಕರ ಆದೇಶಕ್ಕೆ ಬೆಲೆ ಇಲ್ಲವೆ: ಬಳಿಕ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು, ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿ ಸಿದಂತೆಶಾಸಕನಾಗಿ ನಾನು ಹೇಳಿದರೆ ಸ್ಪಂದಿಸುತ್ತಿಲ್ಲ. ಬೇರೆ ಯಾರೋ ಹೇಳಿದರೆ ಬಿಟ್ಟು ಕಳುಸುತ್ತೀರಿ, ಶಾಸಕರ ಆದೇಶಕ್ಕೆ ಬೆಲೆ ಇಲ್ಲವೆ ಎಂದು ವಾಗ್ಧಾಳಿ ನಡೆಸಿದರು.
ಸಭೆಯಲ್ಲಿ ತಹಶೀಲ್ದಾರ್ ನರಗುಂದ, ಸರಗೂರು ತಹಶೀಲ್ದಾರ್ ಚಲುವರಾಜು, ಇಒಜೆರಾಲ್ಡ್ ರಾಜೇಶ್, ಪುರಸಭೆ ಉಪಾಧ್ಯಕ್ಷೆ ಗೀತಾಗಿರೀಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ತಾಲೂಕು ಅಧಿ ಕಾರಿಗಳು ಉಪಸ್ಥಿತರಿದ್ದರು.