Advertisement

ಪ್ರಗತಿಯೇ ಮೂಲ ಮಂತ್ರ: ಕಂದಕೂರ

02:25 PM Sep 11, 2022 | Team Udayavani |

ಸೈದಾಪುರ: ಅಧಿಕಾರದಲ್ಲಿ ಇದ್ದರೂ, ಇಲ್ಲದಿದರೂ ಕೂಡ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎಂದು ಗುರುಮಠಕಲ್‌ ಮತಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅಭಿಪ್ರಾಯಪಟ್ಟರು.

Advertisement

ಸಮೀಪದ ಮಾಧ್ವಾರ ಗ್ರಾಮದಲ್ಲಿ 2022-23ನೇ ಸಾಲಿನ ಲೆಕ್ಕ ಶೀರ್ಷಿಕೆ ಅಪೇಂಡಿಕ್ಸ್‌-ಇ ಯೋಜನೆ ಅಡಿಯಲ್ಲಿ ಗುರುಮಠಕಲ್‌ ತಾಲೂಕಿನ ಮುಧೋಳ್‌- ಯಲಗೇರಾ ರಸ್ತೆ (ರಾಜ್ಯ ಹೆದ್ದಾರಿ-127) ಕಿ.ಮೀ. 50ರಿಂದ 58ರವರೆಗಿನ ಆಯ್ದ ಭಾಗಗಳಲ್ಲಿನ ರಸ್ತೆ ಸುಧಾರಣೆ ಕಾಮಾಗಾರಿ (10 ಕೋಟಿ ರೂ.) ಮತ್ತು ಕೆಕೆಆರ್‌ಡಿಬಿ ಮೈಕ್ರೋಯೋಜನೆ ಅಡಿಯಲ್ಲಿ ಸ್ಟೇಷನ್‌ ಸೈದಾಪುರದಿಂದ ರಾಚನಳ್ಳಿ ಕ್ರಾಸ್‌ವರೆಗೆ (2 ಕೋಟಿ ರೂ.) ರಸ್ತೆ ಸುಧಾರಣೆ ಕಾಮಾಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.

ನಾನು ಜನಿಸಿದ ಗುರುಮಠಕಲ್‌ ಮತಕ್ಷೇತ್ರದ ಜನರ ಋಣವನ್ನು ವಿವಿಧ ಅಭಿವೃದ್ಧಿ ಕಾಮಾಗಾರಿಗಳ ಮೂಲಕ ತೀರಿಸುತ್ತೇನೆ. ನನ್ನ ಮತಕ್ಷೇತ್ರದ ಜನರ ಅಭಿವೃದ್ಧಿಗಾಗಿ ಹಗಲಿರುಳುನ್ನೆದೇ ಶ್ರಮಿಸುತ್ತೇನೆ. ಕಾರ್ಯಕರ್ತರೇ ನನಗೆ ಬೆಳ್ಳಿ-ಬಂಗಾರ. ಇನ್ನುಳಿದ 7 ತಿಂಗಳಲ್ಲಿ ಗ್ರಾಮಗಳ ಅಭಿವೃದ್ಧಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡುತ್ತೇನೆ. ಕೆಲಸ ಮಾಡಿದವರಿಗೆ ನಿಮ್ಮ ಮತ ನೀಡಿ ಆಶೀರ್ವದಿಸಬೇಕು ಎಂದರು.

ಸಹಾಯಕ ನಿರ್ವಾಹಕ ಅಧಿಕಾರಿ ಶ್ರೀಧರ, ಸಹಾಯಕ ಎಂಜಿನಿಯರ್‌ ಪರಶುರಾಮ, ಗೋಪಾಲ ಮಾಧ್ವಾರ, ಪ್ರಕಾಶ ನೀರಟಿ, ಬಸಣ್ಣ, ಪಾಪಣ್ಣ, ಅನಂತಪ್ಪ ಯದ್ಲಾಪುರ, ಮಹಾದೇವಪ್ಪ ಯಲಸತ್ತಿ, ಅಮರನಾಥರಡ್ಡಿಗೌಡ ಸಣ್ಣಸಂಬರ್‌, ವಿರೂಪಾಕ್ಷ ಸಾಹುಕಾರ ಕುಂಟಿಮರಿ, ರಾಘವೇಂದ್ರರೆಡ್ಡಿ ವಡವಟ್‌, ಶಂಕ್ರಪ್ಪ ಸಾಹುಕಾರ, ಅನಂತರೆಡ್ಡಿ ವಡವಟ್‌, ಶಂಕರೆಡ್ಡಿ ಯಲಸತ್ತಿ, ಮಲ್ಲಣ್ಣ ಜೈಗ್ರಾಮ, ಗುರುನಾಥರೆಡ್ಡಿಗೌಡ ವಡವಟ್‌, ಶ್ರೀನಿವಾಸ ಮಾಧ್ವಾರ, ರಾಜು ಉಡುಪಿ, ದೇವು ಘಂಟಿ, ಲಕ್ಷ್ಮಣ ಕೂಡ್ಲೂರು, ಅಲ್ಲಾವುದ್ದೀನ್‌ ನೀಲಹಳ್ಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next