Advertisement
ನಗರದ ಹೊರ ವಲಯದ ನಿರ್ಮಿತಿ ಕೇಂದ್ರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇಲಾಖೆ ಸಹಯೋಗದೊಂದಿಗೆ ಶ್ರಮ ಸಾಮರ್ಥ್ಯ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ 30 ದಿನಗಳ ತರಬೇತಿ ಹಾಗೂ ಟೂಲ್ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಮಾಸಿಕ ವೇತನ: ಜಿಪಂ ಯೋಜನಾ ನಿರ್ದೇಶಕರಾದ ಗಿರಿಜಾ ಶಂಕರ್ ಮಾತನಾಡಿ, ಅಸಂಘಟಿತ ಕಾರ್ಮಿಕ ವಲಯಕ್ಕೆ ಈ ತರಬೇತಿಯಿಂದ ಬಹಳಷ್ಟು ಪ್ರಯೋಜನವಾಗಲಿದೆ. 30 ದಿನಗಳ ತರಬೇತಿಗೆ ಫಲಾನುಭವಿಗಳು ತಪ್ಪದೇ ಭಾಗವಹಿಸಬೇಕು.
ತರಬೇತಿಯ ನಂತರ ಫಲಾನುಭವಿಗಳ ಮಕ್ಕಳ ಶಿಕ್ಷಣಕ್ಕೆ ಬೇಕಾದ ವಿದ್ಯಾರ್ಥಿ ವೇತನ, ಮಕ್ಕಳ ಮದುವೆಗೆ ಹಣ ಸಹಾಯ, ಮಾಸಿಕ ವೇತನ ಪಡೆದುಕೊಳ್ಳಬಹುದು. ಇದರಿಂದ ತರಬೇತಿ ಪೂರ್ಣಗೊಳಿಸಿದ ಪ್ರತಿಯೊಬ್ಬ ಅಭ್ಯರ್ಥಿಯು ಇತರರನ್ನು ನೋಂದಾಯಿಸಿ ಅವರು ಕೂಡ ಸೌಲಭ್ಯ ಪಡೆದುಕೊಳ್ಳಲು ಸಹಕರಿಸಿ ಆ ಮೂಲಕ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಪ್ರಸಾದ್ ಎಂ., ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೃಷ್ಣೇಗೌಡ, ನಿರ್ದೇಶಕರಾದ ನರಸಿಂಹಮೂರ್ತಿ ಸೇರಿದಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಜಿಲ್ಲೆಯ ನೋಂದಾಯಿತ ಕಾರ್ಮಿಕರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
20 ಸಾವಿರ ಬೆಲೆ ಬಾಳುವ ಟೂಲ್ ಕಿಟ್: 30 ದಿನಗಳ ವೃತ್ತಿ ಕೌಶಲ್ಯ ಹಾಗೂ ನೈಪುಣ್ಯತೆ ತರಬೇತಿಯಲ್ಲಿ ಭಾಗವಹಿಸಿರುವ ಕಾರ್ಮಿಕರಿಗೆ ಜೀವನ ಕೌಶಲ್ಯ, ಆರೋಗ್ಯ ಹಾಗೂ ರಕ್ಷಣೆಯ ಬಗ್ಗೆ ತಿಳುವಳಿಕೆ ಮೂಡಿಸುವುದರ ಜೊತೆಗೆ 20 ಸಾವಿರ ಬೆಲೆ ಬಾಳುವ ಟೂಲ್‌ಕಿಟ್, ಸುರತಕ್ಷತಾ ಕಿಟ್, ಕೌಶಲ್ಯ ಪ್ರಮಾಣ ಪತ್ರ ಮತ್ತು ಉದ್ಯೋಗಾವಕಾಶವನ್ನು ಫಲಾನುಭವಿಗಳು ಪಡೆಯಲಿದ್ದಾರೆ. ತರಬೇತಿಯಲ್ಲಿ ಅಭ್ಯರ್ಥಿಗೆ ಕೂಲಿ ನಷ್ಟ ಪರಿಹಾರಕ್ಕೆ ದಿನಕ್ಕೆ 240 ರೂ. ಮತ್ತು ಪ್ರಯಾಣ ದರ, ಉಪಹಾರ ಹಾಗೂ ಊಟ ನೀಡಲಾಗುತ್ತದೆ ಎಂದು ಕಾರ್ಮಿಕ ನಿರೀಕ್ಷಕ ಸೋಮಶೇಖರ್ ತಿಳಿಸಿದರು.