Advertisement

AI: ಕೌಶಲ್ಯಾಭಿವೃದ್ಧಿಗಾಗಿ ಐಟಿಐ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ: ಚೌಧರಿ

09:38 PM Oct 29, 2024 | Team Udayavani |

ನವದೆಹಲಿ: ದೇಶದಲ್ಲಿನ ಐಟಿಐ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಪ್ರಮುಖ ಹೆಜ್ಜೆಯಾಗಿ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ದೇಶದ 14681 ಐಟಿಐಗಳಲ್ಲಿ ಕೃತಕ ಬುದ್ಧಿಮತ್ತೆ(ಎಐ) ಕುರಿತಾಗಿ 7.5 ಗಂಟೆಗಳ ಮೊಡ್ನೂಲ್‌ ಅನ್ನು ಪರಿಚಯಿಸಿದೆ.

Advertisement

ಈ “ಎಐ ಪರಿಚಯ’ ಮೊಡ್ನೂಲ್‌ ಪ್ರಸ್ತುತ ಇರುವ 120 ಗಂಟೆಗಳ ಉದ್ಯೋಗ ಅರ್ಹತೆ ಕೌಶಲಗಳ ಪಠ್ಯಕ್ರಮದ ಭಾಗವಾಗಿರಲಿದೆ. ಈ ಬಗ್ಗೆ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಜಯಂತ್‌ ಚೌಧರಿ, “ಈ ಮಾಡ್ನೂಲ್‌ ಕೃತಕ ಬುದ್ಧಿಮತ್ತೆಯ ಮೂಲಭೂತ ಅಂಶಗಳನ್ನು ಪರಿಚಯಿಸುತ್ತದೆ.

ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸುವ ಜತೆಗೆ ನೈಜ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆಯ ಸಾಧ್ಯತೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ’ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next