Advertisement
ಎನ್.ಎಂ.ಬಿರಾದಾರ ವಿಜಯಪುರ ಜಿಲ್ಲೆಯ ಆಗಿನ ಸಿಂದಗಿ, ಈಗಿನ ದೇವರಹಿಪ್ಪರಗಿ ತಾಲೂಕಿನ ತಿಳಗೂಳ ಎಂಬ ಪುಟ್ಟ ಗ್ರಾಮದವರು. ಮೂಲತಃ ಕೃಷಿ ಕುಟುಂಬದ ಬಿರಾದಾರ ಅವರಿಗೆ ತಂದೆ ಮಡಿವಾಳಪ್ಪಗೌಡ, ತಾಯಿ ನೀಲಮ್ಮ ಬಿರಾದಾರ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಸಿದರು. ಪೋಷಕರ ಆಸೆ, ಆಶಯದಂತೆ ಚೆನ್ನಾಗಿ ವಿದ್ಯೆ ಕಲಿತರು. ಎಫ್‌ಡಿಎ ಪರೀಕ್ಷೆ ಬರೆದು, ಪಾಸಾಗಿ ಸರ್ಕಾರಿ ನೌಕರಿ ಪಡೆದು, ನಂತರ ಹೊರಬಂದು ಅವರಲ್ಲಿ ಚಿಗುರೊಡೆದಿದ್ದೇ ಕೋಚಿಂಗ್ ಕ್ಲಾಸ್ ಎಂಬ ಮೊಳಕೆ. ಸಿಂದಗಿಯಲ್ಲಿ ಮೊದಲಿಗೆ ಕೇವಲ 8 ವಿದ್ಯಾರ್ಥಿ ಗಳಿಂದ ಚಾಣಕ್ಯ ಕರಿಯರ್ ಅಕಾಡೆಮಿ ಶುರು ಮಾಡಿದ ಬಿರಾದಾರ ಅವರು ನಂತರ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಸ್ಥಳಾಂತರಿಸಿದರು. ಅಲ್ಲಿಂದ ಆರಂಭವಾದ ಬಿರಾದಾರ ಅವರ ‘ಚಾಣಕ್ಯ’ ಪಯಣ ತಿರುಗಿ ನೋಡಿದ್ದೇ ಇಲ್ಲ.
Related Articles
Advertisement
ಉಚಿತ ಕೋಚಿಂಗ್: ಚಾಣಕ್ಯ ಕರಿಯರ್ ಅಕಾಡೆಮಿ ಮೂಲಕ ಎನ್.ಎಂ. ಬಿರಾದಾರ ಅವರು ಮಾಜಿ ಸೈನಿಕರಿಗೆ ಉಚಿತ ಕೋಚಿಂಗ್ ಕೊಡುತ್ತಾರೆ. 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಪರಾಕ್ರಮ, ಬಲಿದಾನಕ್ಕೆ ಗೌರವವಾಗಿ ಈ ಕಾರ್ಯ ಮಾಡುತ್ತಿದ್ದಾರೆ. ಪ್ರತಿ ವರ್ಷ ಸುಮಾರು 200ಕ್ಕೂ ಹೆಚ್ಚು ಮಾಜಿ ಸೈನಿಕರು ‘ಚಾಣಕ್ಯ’ದಲ್ಲಿ ತರಬೇತಿ ಪಡೆದಿದ್ದಾರೆ. ಹಲವು ಮಾಜಿ ಯೋಧರು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇದಲ್ಲದೇ ವಿಶೇಷ ಚೇತನರು, ವಿಧವೆಯರು, ದೇವದಾಸಿ ಮಕ್ಕಳು, ಅನಾಥ ಮಕ್ಕಳು, ಪೊಲೀಸ್ ಬ್ಯಾಚಿನ ವಿದ್ಯಾರ್ಥಿನಿಯರು ಸಹ ಉಚಿತ ತರಬೇತಿ ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
– ರಾಜ್ಯದಲ್ಲೇ ಮುಂಚೂಣಿಯಲ್ಲಿ
– ನಿಂಗನಗೌಡ ಮಡಿವಾಳಪ್ಪಗೌಡ ಬಿರಾದಾರ ರೂವಾರಿ
– ಸಾವಿರಾರು ಯುವಕರಿಗೆ ಮಾರ್ಗದರ್ಶನ ಚಾಣಕ್ಯ ಪ್ರಕಾಶನ: ಎನ್.ಎಂ.ಬಿರಾದಾರ ಶ್ರಮದಿಂದ ಚಾಣಕ್ಯ ಅಕಾಡೆಮಿ ರಾಜ್ಯದಲ್ಲೇ ಅತ್ಯಂತ ಯಶಸ್ವಿ ಕೋಚಿಂಗ್ ಸೆಂಟರ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಆದರೆ ಅವರು ಕೋಚಿಂಗ್ ನೀಡುವುದು ಮಾತ್ರವಲ್ಲ ಅದರಿಂದ ಹೊರಗೆ ಉಳಿದ ವಿದ್ಯಾರ್ಥಿಗಳ ಬಗ್ಗೆಯೂ ಚಿತ್ತ ಹರಿಸಿದರು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ಎಂಬ ಜೀವನದ ಅಗ್ನಿ ಪರೀಕ್ಷೆಯನ್ನು ಪ್ರತಿಯೊಬ್ಬರು ಜಯಿಸಲಿ ಎಂಬ ಎನ್‌ಎಂಬಿ ಅವರ ಮನೋಭಾವ ತೋರಿಸುತ್ತದೆ. ಕೋಚಿಂಗ್ ಪಡೆಯಲು ಸಾಧ್ಯವಾಗದ ಯುವಕರಿಗಾಗಿಯೇ ಸ್ಪರ್ಧಾ ಚಾಣಕ್ಯ ಮಾಸಪತ್ರಿಕೆ ಆರಂಭಿಸಿದರು. ಉದ್ಯೋಗಾಕಾಂಕ್ಷಿ ಗಳಿಗಾಗಿ ಜಾಬ್ ನ್ಯೂಸ್ ಹೆಸರಿನಲ್ಲಿ ಪಾಕ್ಷಿಕ ಪತ್ರಿಕೆ ಶುರು ಮಾಡಿದರು. ಜಾಬ್ ನ್ಯೂಸ್ ಆಯಾ ಉದ್ಯೋಗಗಳ ಸಮಗ್ರ ಮಾಹಿತಿ ಒದಗಿಸುತ್ತದೆ. ಇದರ ಹೊರತಾಗಿಯೂ ಸಾಹಿತ್ಯ, ಸಾಹಿತ್ಯಯೇತರ 60ಕ್ಕೂ ಹೆಚ್ಚು ಕೃತಿಗಳನ್ನು ಚಾಣಕ್ಯ ಪ್ರಕಾಶನದಿಂದ ಹೊರ ತಂದಿದ್ದಾರೆ. ದೀಪದ ದಾರಿ, ಚಾಣಕ್ಯ ಕಣಜ, ಸ್ಪರ್ಧಾ ಮಾರ್ಗ ಪುಸ್ತಕಗಳು ಮತ್ತು ನಾನಾ ಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕ ತಾವು ಲೇಖಕರೂ ಹೌದು ಎಂಬುದನ್ನು ನಿರೂಪಿಸಿದ್ದಾರೆ. ಎನ್‌ಎಂಬಿ ಅವರ ಚಾಣಕ್ಯ ಕಣಜ ಪುಸ್ತಕವು ರಾಜ್ಯದಲ್ಲಿ ಅಂದಾಜು 3ಲಕ್ಷ ಪ್ರತಿಗಳು ಮಾರಾಟಗೊಂಡ ಏಕೈಕ ಪುಸ್ತಕ ಎಂಬುವುದು ಮತ್ತೂಂದು ವಿಶೇಷ.
ಹುಟ್ಟಿದ ಸ್ಥಳ, ವರ್ಷ: 1973, ತಿಳಗೂಳ ಗ್ರಾಮ, ದೇವರಹಿಪ್ಪರಗಿ ತಾಲೂಕು, ವಿಜಯಪುರ ಜಿಲ್ಲೆ ಶೈಕ್ಷಣಿಕ ಅರ್ಹತೆ: ಎಂಕಾಂ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಚಾಣಕ್ಯ ಕರಿಯರ್ ಅಕಾಡೆಮಿ ಸ್ಥಾಪನೆ: ಸಿಂದಗಿಯಲ್ಲಿ ಪ್ರಾರಂಭ, 2000ಕ್ಕೆ ವಿಜಯಪುರಕ್ಕೆ ಸ್ಥಳಾಂತರ ಪ್ರಧಾನ ಸಂಪಾದಕರು: ಸ್ಪರ್ಧಾ ಚಾಣಕ್ಯ (ಮಾಸ ಪತ್ರಿಕೆ),ಜಾಬ್ ನ್ಯೂಸ್ (ಪಾಕ್ಷಿಕ ಪತ್ರಿಕೆ) ಲೇಖಕರು: ದೀಪದ ದಾರಿ, ಚಾಣಕ್ಯ ಕಣಜ, ಸ್ಪರ್ಧಾ ಮಾರ್ಗ ಪ್ರಕಾಶನ: ಸಾಹಿತ್ಯ, ಸಾಹಿತ್ಯಯೇತರ 60ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ. ವಿಳಾಸ: ಚಾಣಕ್ಯ ಕರಿಯರ್ ಅಕಾಡೆಮಿ, ಮಲಘಾಣ ಬಿಲ್ಡಿಂಗ್, ಮೀನಾಕ್ಷಿ ಚೌಕ್, ವಿಜಯಪುರ – 25ನೇ ವಸಂತಗಳನ್ನು ಪೂರೈಸಿದ ಚಾಣಕ್ಯ ಸಂಸ್ಥೆ
– 1999ರಲ್ಲಿ ಆರಂಭವಾದ ಹೆಮ್ಮೆಯ ಸಂಸ್ಥೆ
– ಮೊದಲಿಗೆ ಕೇವಲ 8 ವಿದ್ಯಾರ್ಥಿಗಳಿಂದ ಶುರು
– ನಂತರ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಸ್ಥಳಾಂತರ ಆರ್ಥಿಕ ಕೊಡುಗೆ
ವಿಜಯಪುರದಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯಲು ಬರುತ್ತಿದ್ದು, ಇದರಿಂದ ಹೊಟೇಲ್, ಸ್ಟೇಷನರಿ, ಬುಕ್‌ಸ್ಟಾಲ್, ಝೆರಾಕ್ಸ್ ಇತ್ಯಾದಿ ಅಂಗಡಿಯವರಿಗೆ ಉತ್ತಮ ವ್ಯಾಪಾರವೂ ಆಗುತ್ತಿದೆ. ಜಿಲ್ಲೆಯ ಆರ್ಥಿಕ ಬೆಳವಣೆಯಲ್ಲಿಯೂ ಅಕಾಡೆಮಿ ಕೈಜೋಡಿಸಿದೆ ಎಂದರೆ ಅತಿಶಯೋಕ್ತಿ ಎನಿಸದು. ಈ ಕೆಳಗಿನ ಕೋರ್ಸ್‌ಗಳಿಗೆ ನಮ್ಮಲ್ಲಿ ತರಬೇತಿ ನೀಡಲಾಗುವುದು
– KAS, PSI, PDO, TET+ CET, FDA, SDA, BANKING, POLICE
– TET-CET-HSTR ONLINE CLASSES
ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು ಮಲಘಾಣ ಬಿಲ್ಡಿಂಗ್, ಮಿನಾಕ್ಷಿ ಚೌಕ್, ವಿಜಯಪುರ.
Tel: 08352-222197, 240197
Cell: 7795397159, 9900056218