ವಾಷಿಂಗ್ಟನ್: ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಮತ್ತು ವಾಸಿಸಲು ಅನುಮತಿ ನೀಡುವ ಗ್ರೀನ್ ಕಾರ್ಡ್‌ಗಳ ಅರ್ಜಿಗಳನ್ನು ಇನ್ನು 6 ತಿಂಗಳೊಳಗೆ ಪ್ರಕ್ರಿಯೆ ನಡೆಸಲು ಅಧ್ಯಕ್ಷ ಜೋ ಬೈಡೆನ್ ಅವರಿಗೆ ಶಿಫಾರಸು ಮಾಡಲು ಅಧ್ಯಕ್ಷೀಯ ಸಮಿತಿಯು ಮತ ಹಾಕಿದೆ.
ಏಷ್ಯನ್ ಅಮೆರಿಕನ್ನರು, ಸ್ಥಳೀಯ ಹವಾಯಿಯನ್ನರು, ಫೆಸಿಪಿಕ್ ದ್ವೀಪದ ನಾಗರಿಕರ ಅಧ್ಯಕ್ಷೀಯ ಸಮಿತಿಯು ಈ ಬಗ್ಗೆ ಮತ ಹಾಕಿದೆ.
ಸಮಿತಿಯ ಸಭೆಯ ಸಮಯದಲ್ಲಿ ಭಾರತೀಯ ಮೂಲದ ಅಮೆರಿಕ ವಾಸಿ ಅಜಯ್ ಜೈನ್ ಭುಟೋರಿಯಾ ಈ ವಿಚಾರ ಪ್ರಸ್ತಾಪಿಸಿದ್ದು, ಅದಕ್ಕೆ ಸಮಿತಿಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಪರವಾಗಿ ಮತ ಹಾಕಿದ್ದಾರೆ.
ಇದನ್ನೂ ಓದಿ:ಅಫ್ಘಾನಿಸ್ತಾನ: ಮಾನವ ಹಕ್ಕು ಆಯೋಗ ವಿಸರ್ಜನೆ!
ಈ ಶಿಫಾರಸನ್ನು ಜೋ ಬೈಡೆನ್ ಅವರಿಗೆ ಸಲ್ಲಿಸಲಾಗುವುದು. ಅದನ್ನು ಅನುಮತಿಸುವುದು ಅಧ್ಯಕ್ಷರ ನಿರ್ಧಾರವಾಗಿರಲಿದೆ.