Advertisement

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

12:51 AM Nov 16, 2024 | Team Udayavani |

ಹೊಸದಿಲ್ಲಿ: ದೇಶದ ಪ್ರಗತಿಗೆ ಐಟಿ ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡುವುದು ಅಗತ್ಯ! ಈ ವಾದವನ್ನು ನಾನು ಎಂದಿಗೂ ಬದಲಿಸುವುದಿಲ್ಲ. ನಾನು ಸಾಯುವವರೆಗೂ ಈ ವಾದಕ್ಕೆ ಬದ್ಧನಾಗಿದ್ದೇನೆ ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

Advertisement

2023ರ ನವೆಂಬರ್‌ನಲ್ಲಿ 70 ಗಂಟೆ ಕೆಲಸದ ವಾರದ ಕುರಿತು ಹೇಳಿಕೆ ನೀಡಿ, ಮೂರ್ತಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ವಿಚಾರವನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ ಭಾರತದಲ್ಲಿನ ಸಂಸ್ಥೆಗಳು ವಾರದಲ್ಲಿ 6 ದಿನಗಳು ಕೆಲಸ ಮಾಡುತ್ತಿದ್ದ ಪ್ರವೃತ್ತಿಯನ್ನು 1986ರಲ್ಲಿ 5 ದಿನಗಳಿಗೆ ಬದಲಿಸಿದ್ದರ ಬಗ್ಗೆಯೂ ಮೂರ್ತಿ ಅಸ ಮಾಧಾನ ವ್ಯಕ್ತ ಪಡಿಸಿದ್ದಾರೆ.

ಔದ್ಯೋಗಿಕ ಜೀವನ ಹಾಗೂ ಒತ್ತಡ ನಿರ್ವಹಣೆ ಎಂಬ ವಿಷಯದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದಿರುವ ಅವರು, “ನಾವು ಬದುಕನ್ನು ರೂಪಿಸಿಕೊಳ್ಳಬೇಕು ಬಳಿಕ ದಲ್ಲಿ ಜೀವನ ಮತ್ತು ಒತ್ತಡ ನಿರ್ವ ಹಣೆಯ ಬಗ್ಗೆ ಚಿಂತಿಸಬೇಕು’ ಎಂದು 25 ವರ್ಷಗಳ ಹಿಂದೆ ಹಣಕಾಸು ತಜ್ಞ ಕೆ.ವಿ.ಕಾಮತ್‌ ಹೇಳಿದ್ದರು ಎಂಬುದನ್ನು ಸ್ಮರಿಸಿದ್ದಾರೆ. ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ದುಡಿಯುತ್ತಾರೆ. ರಾಷ್ಟ್ರದ ಜನತೆ ಕೂಡ ಹೀಗೆ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next