Advertisement

ಹವಾಮಾನ ವೈಪರೀತ್ಯ ಕೃಷಿಗೆ ತೊಂದರೆ

06:53 PM Jan 23, 2021 | Team Udayavani |

ಶಿರಸಿ: ಹವಾಮಾನ ವೈಪರೀತ್ಯ ತಾಳಿಕೊಂಡು ತಳಿ ಸಂರಕ್ಷಿಸಿ ಬೆಳೆಸಬೇಕಾಗಿದೆ ಎಂದು ತೋಟಗಾರಿಕಾ ವಿವಿ ವಿಸ್ತರಣಾ ನಿರ್ದೇಶಕ ವಿ.ಎಸ್‌. ಕೋಟೆಕಾಲ ಹೇಳಿದರು.

Advertisement

ಅವರು ತೋಟಗಾರಿಕಾ ಮಹಾವಿದ್ಯಾಲಯ, ತೋಟಗಾರಿಕಾ ಇಲಾಖೆ, ಸಂಬಾರ ಪದಾರ್ಥ ಅಭಿವೃದ್ಧಿ ಮಂಡಳಿ, ಟಿಎಂಎಸ್‌ ಶಿರಸಿ ಏರ್ಪಡಿಸಿದ ಹವಾಮಾನ ವೈಪರಿತ್ಯದಲ್ಲಿ ಬೇಸಾಯ ಸವಾಲುಗಳು ಹಾಗೂ ಪರಿಹಾರಗಳ ಕುರಿತು ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮಾತನಾಡಿದರು. ಹವಾಮಾನ ವೈಪರೀತ್ಯವೇ ಕೃಷಿಗೆ ತೊಂದರೆಯಾಗಿದೆ. ಇದಕ್ಕೆ ಔದ್ಯೋಗಿಕ ಕ್ರಾಂತಿ ಕಾರಣವಾಗಿದೆ. ವಿಜ್ಞಾನಿಗಳು ತಳಿ ಸಂಶೋಧನೆ ಜೊತೆಗೆ ಹವಾಮಾನ ವೈಪರೀತ್ಯ ತಡೆದುಕೊಳ್ಳುವ ಔಷಧ ತಯಾರಿಸಬೇಕು ಎಂದರು.

ಎಲ್ಲ ಕಡೆ ಹವಾಮಾನ ವೈಪರೀತ್ಯದಿಂದ ಸಮಸ್ಯೆ ಆಗಿದೆ. ಅತಿ ಮಳೆ, ಬರಗಾಲ, ಆಳಿಕಲ್ಲು ಮಳೆ, ಅತಿ ಉಷ್ಣಾಂಶ, ಚಳಿ ಕಾಣುತ್ತದೆ. ಆದರೆ ರೈತರಿಗೆ ದಿಕ್ಕು ತೋಚದಂತಾಗಿದೆ ಎಂದರು.

ಇದನ್ನೂ ಓದಿ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಜನಸೇವಾ ಯೋಜನೆ

ಹುಬ್ಬಳ್ಳಿ ಸಂಬಾರ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದಪ್ಪ, ಕಾಳುಮೆಣಸಿನ ಕಷ್ಟದ ಸವಾಲುಗಳನ್ನು ಎದುರಿಸಲು ಸಕಾಲಕ್ಕೆ ಚಿಕಿತ್ಸೆ ಮಾಡಬೇಕು ಎಂದರು. ಸಂಶೋಧನಾ ವಿಭಾಗದ ಡಿ.ಆರ್‌. ಪಾಟೀಲ, ಡೀನ್‌ ಎನ್‌.ಕೆ. ಹೆಗಡೆ, ಡಾ| ಮಂಜು ಎಂ.ಜೆ, ಶಾಂತಪ್ಪ, ಕಿಶೋರ ಹೆಗಡೆ ಇತರರು ಇದ್ದರು.

Advertisement

ಸುಧೀಶ ಕುಲಕರ್ಣಿ ಸ್ವಾಗತಿಸಿದರು. ಶಿವಾನಂದ ಹೊಂಗಲ್ಲ ನಿರ್ವಹಿಸಿದರು. ವಿಶ್ವೇಶ್ವರ ಹೆಗಡೆ ಕೋಟೆಮನೆ, ವಿ.ಎಂ. ಹೆಗಡೆ, ಸದಾನಂದ ಬೆಂಗಳೂರು, ರಮಾಕಾಂತ ಹೆಗಡೆ, ಗಣಪತಿ ಹೆಗಡೆ, ವಿಶ್ವನಾಥ ಹೆಗಡೆ ಇತರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ತೋಟಗಾರಿಕಾ ಸಂಶೋಧನೆಗಳು ರೈತರಿಗೆ ತಲುಪಬೇಕು ಎಂದು ವಿಸ್ತರಣಾಧಿಕಾರಿ ಕೋಟೆಕಾಲ ಹೇಳಿದರು. ತೋಟಗರಿಕಾ ಮಹಾವಿದ್ಯಾಲಯಕೆ ಭೂಮಿ ಕೊರತೆ ಇದೆ. ಭೂಮಿ ಸಿಕ್ಕರೆ ಇನ್ನಷ್ಟು ಸಂಶೋಧನೆಗೆ ಅನುಕೂಲ ಆಗುತ್ತದೆ ಎಂದು ಡೀನ್‌ ಡಾ| ಎನ್‌.ಕೆ. ಹೆಗಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next