Advertisement
ಯುವಜನರನ್ನು ಕಾಡುವ ಪ್ರಶ್ನೆಯೆಂದರೆ ಸಾಧಿಸುವುದು ಹೇಗೆ? ಎಂಬುದು. ನಮ್ಮಲ್ಲಿ ಸಾಧನೆಯ ತುಡಿತ ಇದ್ದೇ ಇರುತ್ತದೆ. ಹಾಗೆಂದು ಪಡಬೇಕಾದ ಪರಿಶ್ರಮದ ಪ್ರಮಾಣ, ನಡೆಯಬೇಕಾದ ಹಾದಿ ಬಗ್ಗೆ ಸ್ಪಷ್ಟತೆ ಇರದು. ಅಂಕ ಕಡಿಮೆಯಾಯಿತು, ನನ್ನ ಮನೆಯಲ್ಲಿ ಕೇಳಿದ್ದನ್ನು ಕೊಡಿಸುವುದಿಲ್ಲ, ಅವರೆಲ್ಲಾ ಹಾಗಿ ದ್ದಾರೆ, ನಾನು ಮಾತ್ರ ಹೀಗೆ..ಇಂಥ ಕೆಲವು ನೇತ್ಯಾತ್ಮಕ ಅಂಶಗಳು ನಮ್ಮ ಸುತ್ತಲೂ ಗಿರಕಿ ಹೊಡೆ ಯು ತ್ತಲೇ ಇರುತ್ತವೆ. ಮನಸ್ಸು ಗೊಂದಲಕ್ಕೆ ಒಳ ಗಾಗುತ್ತದೆ. ಆದರೆ ಲಕ್ಷಾಂತರ ಮಂದಿ ಇವು ಗಳನ್ನೇ ಮೆಟ್ಟಿಲಾಗಿಸಿಕೊಂಡು ಏರಿ ಇಂದು ನೆಮ್ಮದಿ ಯಿಂದ ಬದುಕುತ್ತಿದ್ದಾರೆ. ಇದು ಅಕ್ಷರಶಃ ಸತ್ಯ.
“ಇಂದು ಹುಟ್ಟಿ, ನಾಳೆ ಸತ್ತರೆ ಬದುಕಿಗೆ ಅರ್ಥ ಸಿಗದು. ಕಡಿಮೆ ಅವಧಿಯ ಈ ಜೀವನದಲ್ಲಿ ಏನಾದರೂ ಸಾಧನೆ ಮಾಡಿದಾಗ ಮಾತ್ರ ಸಾರ್ಥಕ್ಯ. ಸಾಧಕರ ಸಾಲಿನಲ್ಲಿ ಗುರುತಿಸಿಕೊಳ್ಳಬೇಕಾದರೆ ಹುಟ್ಟು ಮತ್ತು ಸಾವಿನ ಮಧ್ಯೆ ಸಾಧನೆಯ ಆ ಘಳಿಗೆಗೂ ಮೊದಲು ಕಾಡುವ ಆಲೋಚನೆಗಳು, ಸೋಲುಗಳನ್ನು ಸವಾಲಾಗಿ ಸ್ವೀಕರಿಸಬೇಕು’ ಎನ್ನುತ್ತಾರೆ ರಾಬಿನ್ ಶರ್ಮಾ. ಸವಾಲು ಎದುರಿಸಿ
ಯಾವುದೇ ಕೆಲಸವಾಗಲಿ, ಅದರಲ್ಲಿ ದಶಕಗಳ ಅನುಭವವೇ ನಿಮಗಿರಲಿ; ಹೊಸತನ ಅನುಭವಿಸಿ. ಸದಾ ಅಪ್‌ಡೇಟ್ ಆಗಿದ್ದಾಗ ಮಾತ್ರ ವಿಭಿನ್ನ ಸಾಧನೆ ಮಾಡಬಹುದು. ಸೋಲು ಗೆಲುವಿನ ಲೆಕ್ಕಾಚಾರಕ್ಕಾಗಿ ನಿಮ್ಮ ಹತ್ತಿರ ಸದಾ ಒಂದು ಪುಟ್ಟ ಡೈರಿ ಇಟ್ಟುಕೊಂಡಿರಿ. ನಿಮ್ಮ ದಿನನಿತ್ಯದ ಕೆಲಸಗಳಲ್ಲಿ ಆಗಬಹುದಾದ ಬೆಳವಣಿಗೆಗಳನ್ನು ಬರೆದಿಟ್ಟುಕೊಳ್ಳಿ. ಮುಂದೊಂದು ದಿನ ಇವುಗಳ ಮೇಲೆ ಬೆಳಕು ಚೆಲ್ಲಿದಾಗ ನಿಮ್ಮ ಬೆಳವಣಿಗೆಯ ಬಗ್ಗೆ ಆತ್ಮ ವಿಮರ್ಶೆ ಸಾಧ್ಯ.
Related Articles
ಗುಣಾತ್ಮಕ ಚಿಂತನೆಯೊಂದಿದ್ದರೆ ಎಂಥದೇ ಕಠಿನ ಸವಾಲನ್ನು ಕೂಡ ಸುಲಲಿತವಾಗಿ ಬಗೆಹರಿಸಬಹುದು. ನಾನು ಮಾಡಬಲ್ಲೆ ಎಂಬ ಒಂದು ಪುಟ್ಟ ಆತ್ಮ ವಿಶ್ವಾಸವೇ ನಿಮ್ಮನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎನ್ನುತ್ತಾರೆ ರಾಬಿನ್ ಶರ್ಮಾ.
Advertisement
ನಿಮ್ಮ ದಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆಯೇ?ನೀವು ಸರಿಯಾದ ಮಾರ್ಗದಲ್ಲಿದ್ದರೆ ಅಳುಕೇತಕ್ಕೆ? ಜನ ನಿಮ್ಮತ್ತ ಕಲ್ಲು ತೂರಿದರೆ, ಅದನ್ನು ಹಿಂದಿರುಗಿ ಎಸೆಯಬೇಡಿ. ಬದಲಾಗಿ ಅವನ್ನೇ ಬಳಸಿ ಸ್ಮಾರಕ ನಿರ್ಮಿಸಿ. ಅದೇ ಎಲ್ಲದಕ್ಕೂ ಉತ್ತರ. “ದ ಬೆಸ್ಟ್ ಲೀಡರ್ì ಆರ್ ದ ಮೋಸ್ಟ್ ಎಜುಕೇಟೆಡ್ ಲರ್ನರ್’ ಎಂಬುದು ರಾಬಿನ್ ಶರ್ಮಾರ ಮಾತು. ಮಕ್ಕಳು ಗೀಳಿನಿಂದ ಹೊರಬರಲು ಹೆತ್ತವರು ಹೇಗೆ ಸಹಕರಿಸಬೇಕು? ಗೀಳಿಗೆ ತುತ್ತಾದ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು. ಅವರ ಆಸಕ್ತಿ, ಭಯ, ನಿರಾಶೆ, ಒತ್ತಡಗಳನ್ನು ತಿಳಿದುಕೊಳ್ಳಲು ಸ್ನೇಹಿತರ ರೀತಿ ವರ್ತಿಸಬೇಕು. ಆಗ ಮಾತ್ರ ಅವರ ಸಮಸ್ಯೆ, ಮನಸ್ಸಿನೊಳಗಿನ ತುಮುಲವನ್ನು ತಿಳಿಯಲು ಸಾಧ್ಯ. ಮಕ್ಕಳ ಎಲ್ಲ ಆಗು-ಹೋಗುಗಳ ಕುರಿತು ಹೆತ್ತವರು ತಿಳಿದುಕೊಳ್ಳಬೇಕು. ದಿನದಲ್ಲಿ ಒಂದು ಬಾರಿಯಾದರೂ ಅವರಿಗೆ ಸಮಯವನ್ನು ಮೀಸಲಿಟ್ಟು, ಮುಕ್ತವಾಗಿ ಮಾತನಾಡಲು ಹೆತ್ತವರು ಪ್ರಯತ್ನಿಸಬೇಕು. ಗೀಳು ಸಂತ್ರಸ್ತರಾದ ಮಕ್ಕಳ ಹೆತ್ತವರಿಗೆ ಶಾಲಾ- ಕಾಲೇಜುಗಳಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಆದಷ್ಟು ಮೊಬೈಲ್, ವೀಡಿಯೋ ಗೇಮ್, ಟಿವಿಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಅವರ ಆಸಕ್ತಿಯನ್ನು ಕ್ರೀಡೆ, ನೃತ್ಯ, ಹಾಡು, ಪುಸ್ತಕ ಓದುವಿಕೆ ಕಡೆಗೆ ತಿರುಗಿಸಬೇಕು. ಅದಕ್ಕೆ ಸೂಕ್ತ ವಾತಾವರಣ ನಿರ್ಮಿಸಿ ಪ್ರೇರೇಪಿಸಬೇಕು. ಮಕ್ಕಳು ಹೆತ್ತವರನ್ನೇ ನೋಡಿ ಬೆಳೆಯುವುದರಿಂದ ಅವರೆದುರು ಮನೆಯ ಸಮಸ್ಯೆಗಳನ್ನೆಲ್ಲ ತೋರ್ಪಡಿಸಬಾರದು. ಆ ಗೀಳಿಗೆ ಕಾರಣವೇನೆಂದು ಮೊದಲು ಪತ್ತೆ ಹಚ್ಚಿದರೆ ಅರ್ಧ ಸಮಸ್ಯೆಗೆ ಪರಿಹಾರ ಸಿಕ್ಕಂತೆ. ಸ್ಫೂರ್ತಿಗಾಗಿ ಈ ವೀಡಿಯೋ ನೋಡಿ ರಾಬಿನ್ ಶರ್ಮಾ ಅವರು ಜೀವನ ಹಾಗೂ ಸವಾಲುಗಳ ಕುರಿತಾಗಿ ಸಾಕಷ್ಟು ಪುಸ್ತಕ ಬರೆದಿದ್ದಾರೆ. ಉಪನ್ಯಾಸ
ನೀಡಿದ್ದಾರೆ. ಅವರ ಮಾತುಗಳಲ್ಲಿನ ಜೀವನೋತ್ಸಾಹ ತುಂಬುವಂಥ ಒಂದಷ್ಟು ಅಂಶಗಳು ನಮ್ಮ ಬದುಕಿಗೂ ಹೊಸ ಚೈತನ್ಯ, ಸ್ಫೂರ್ತಿ ತುಂಬಬಲ್ಲವು.ಸಾಧನೆಗೆ ಪೂರಕವಾಗಬಲ್ಲ ಐದು ಕಾರ್ಯಗಳನ್ನು ಬಹಳ ಚೆನ್ನಾಗಿ ವೀಡಿಯೋ ಒಂದರಲ್ಲಿ ವಿವರಿಸಿದ್ದಾರೆ. ಅದನ್ನು ನೋಡಲು ಈ ಲಿಂಕ್ ಕ್ಲಿಕ್ಕಿಸಿ. ನಿಮ್ಮ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಖನ್ನತೆ, ಆತಂಕ, ಉದ್ವಿಗ್ನತೆಯ ಲಕ್ಷಣ ಕಂಡುಬಂದರೆ ಈ ನಂಬರ್‌ಗೆ ವಾಟ್ಸ್ ಆ್ಯಪ್ ಮಾಡಿ ಸಮಸ್ಯೆ ಹೇಳಿಕೊಳ್ಳಿ. ಪರಿಣತರೊಂದಿಗೆ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ.
9964169554 *ಕಾರ್ತಿಕ್ ಅಮೈ