ಮೈಸೂರು: ಜಾಗತೀಕರಣ, ಖಾಸಗೀಕರಣ ಹಾಗೂ ಉದಾರೀಕರಣದಿಂದ ಸಮಾಜದಲ್ಲಿ ಬದ ಲಾವಣೆಯಾಗಿದ್ದರೂ ಸಾಮಾಜಿಕವಾಗಿ, ಆರ್ಥಿಕ ವಾಗಿ ಸಮಾಜ ಎಷ್ಟು ಅಭಿವೃದ್ಧಿಯಾಗಿದೆ ಎಂಬು ದನ್ನು ಪ್ರಶ್ನಿಸಬೇಕಿದೆ ಎಂದು ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ಸಿ.ಬಸವರಾಜು ಹೇಳಿದರು.
ಮೈಸೂರು ವಿವಿ ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಸಮಾಜಶಾಸ್ತ್ರ ಅಧ್ಯಾಪಕರ ಸಂಘ, ಸಮಾಜಶಾಸ್ತ್ರ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ನಗರದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗತೀಕರಣ ಮತ್ತು ಅಭಿವೃದ್ಧಿಯ ಸಾಮಾಜಿಕ ಆಯಾಮ ಗಳು ಪ್ರಕ್ರಿಯೆಗಳು ಹಾಗೂ ಕಾಳಜಿಗಳು ವಿಷಯ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಮಾಜ ಜಾಗತೀಕರಣ, ಖಾಸಗೀಕರಣ, ಉದಾರೀ ಕರಣದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬದ ಲಾವಣೆಯಾಗಿದ್ದರೂ ಅಷ್ಟೇ ಸಮಸ್ಯೆಗಳು ಉದ್ಭವಿ ಸಿವೆ. ಹೀಗಾಗಿ ಸಮಾನತೆ, ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿಯಂತಹ ಸಮಸ್ಯೆಗಳ ಜತೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂಬುದನ್ನು ಪ್ರಶ್ನಿಸಬೇಕಿದೆ.
ಅಲ್ಲದೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂವಿಧಾನದ ಆಶಯದಡಿಯಲ್ಲಿ ಪ್ರಶ್ನಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಜ್ಞಾನ ಖಾಸಗಿ ಕಂಪನಿ ಪಾಲಾಗದಿರಲಿ: ಶಿಕ್ಷಣಕ್ಷೇತ್ರವು ಖಾಸಗೀಕರಣದಿಂದ ಹೊರತಾಗಿ ಸಾರ್ವತ್ರಿಕವಾಗಬೇಕಿದ್ದು, ಇದರಿಂದ ಪ್ರತಿಯೊಬ್ಬ ರಿಗೂ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಿದೆ. ಖಾಸಗೀಕರಣದಿಂದ ಪ್ರತಿಭಾವಂತರು ಮಾತ್ರ ವೃತ್ತಿ ಅವಲಂಬಿಸಿ ವಿದೇಶಗಳಿಗೆ ಹೋಗಿದ್ದಾರೆ.
ಹೀಗಾಗಿ ಇವರುಗಳ ಬೌದ್ಧಿಕ ಸಂಪತ್ತು ನಮ್ಮ ದೇಶಕ್ಕೆ ಬದ ಲಾಗಿ ಬೇರೆ ದೇಶಗಳಿಗೆ ಉಪಯೋಗ ಆಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ, ಸಂಶೋಧಕರಲ್ಲಿ ಸಮಾಜ ಕಟ್ಟಲು ಜಾnನವನ್ನು ಒದಗಿಸುವ ಜತೆಗೆ ಆ ಜಾnನವು ವಿದೇಶ ಅಥವಾ ಖಾಸಗಿ ಕಂಪನಿಗಳ ಲಾಭಕ್ಕೊಳಗಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಪೊ›.ಕೆ. ಸುಮಿತ್ರಾ ಬಾಯಿ, ಗೋವಾ ವಿವಿ ಸಮಾಜಶಾಸ್ತ್ರ ವಿಭಾಗ ಅಧ್ಯಕ್ಷ ಪೊ›. ಗಣೇಶ್ ಸೋಮಯಾಜಿ, ಮೈಸೂರು ವಿವಿ ಪಿಎಂಇಬಿ ನಿರ್ದೇಶಕ ಪೊ›.ಯಶವಂತ ಡೋಂಗ್ರೆ, ಡಾ.ಬಿ.ಟಿ.ವಿಜಯ್, ಡಾ.ಎಸ್.ಯಶೋಧಾ ಹಾಜರಿದ್ದರು.