Advertisement

ಒಳ ಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆ

10:39 AM Jan 10, 2018 | |

ಸುರತ್ಕಲ್‌ : ಇಲ್ಲಿನ ಕುಳಾಯಿ, ಹೊನ್ನಕಟ್ಟೆ, ಹೊಸಬೆಟ್ಟು, ಬೈಕಂಪಾಡಿ ಮತ್ತಿತರೆಡೆ ಹೆದ್ದಾರಿ ಬದಿ ಒಳ ಚರಂಡಿ ವ್ಯವಸ್ಥೆ ಇಲ್ಲದೆ ಹೊಟೇಲು ಕೊಳಚೆ ನೀರು ಹರಿದು ದುರ್ವಾಸನೆ ಬರುತ್ತಿದೆ.

Advertisement

ಡಾಬಾಗಳ ಕಲುಷಿತ ನೀರು
ವಿವಿಧ ಫಲಾಹಾರ ಮಂದಿರ, ಡಾಬಾಗಳು ಕಲುಷಿತ ನೀರನ್ನು ಬಿಡಲು ಸರಿಯಾದ ವ್ಯವಸ್ಥೆ ಮಾಡಿಕೊಳ್ಳದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಬಳಸಿದ ನೀರು ನೇರವಾಗಿ ಅಲ್ಲಲ್ಲಿ ಇರುವ ಮಳೆ ನೀರು ಹರಿಯುವ ತೋಡುಗಳಲ್ಲಿ ನಿಲ್ಲುವುದರಿಂದ ದುರ್ವಾಸನೆಗೆ ಕಾರಣವಾಗುತ್ತಿದೆ. ಮಾತ್ರವಲ್ಲ ಸೊಳ್ಳೆ ಉತ್ಪತ್ತಿ ತಾಣವಾಗಿ ಬದಲಾಗುತ್ತಿವೆ.

ಪಾದಚಾರಿಗಳಿಗೆ ಸಂಕಷ್ಟ
ಇನ್ನು ಕೆಲವೆಡೆ ಮಾಂಸಾಹಾರ ಕ್ಯಾಂಟೀನ್‌ಗಳಿಂದ ಬರುವ ಕಲುಷಿತ ನೀರಿನ ಅಸಾಧ್ಯ ವಾಸನೆಯಿಂದ ಪಾದಚಾರಿಗಳು ಮೂಗು ಮುಚ್ಚಿ ನಡೆಯುವಂತಾಗಿದೆ.

ಹೆದ್ದಾರಿ ಇಲಾಖೆ ಎಚ್ಚೆತ್ತುಕೊಳ್ಳಲಿ
ಈ ಭಾಗಗಳು ಹೆದ್ದಾರಿ ಇಲಾಖೆಗೆ ಸೇರಿರುವುದರಿಂದ ಮಹಾನಗರ ಪಾಲಿಕೆ ಏನೂ ಮಾಡುವಂತಿಲ್ಲ. ಪಾಲಿಕೆ ವ್ಯಾಪ್ತಿ
ಯಲ್ಲಿ ಒಳಚರಂಡಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಹೀಗಾಗಿ ರಸ್ತೆ ಬದಿ ಇರುವ ವ್ಯಾಪಾರ ಕೇಂದ್ರದ ಮಾಲಕರು ಕಲುಷಿತ ನೀರು ಬಿಡಲು ತಮ್ಮದೇ ವ್ಯವಸ್ಥೆ ರೂಪಿಸಿಕೊಳ್ಳಬೇಕಾಗಿದೆ. ಆದರೆ ಅನಧಿಕೃತವಾಗಿ ಹೆದ್ದಾರಿ ಬದಿಯ ತೋಡಿಗೆ
ಬಿಡುವುದರಿಂದ ಈ ಸಮಸ್ಯೆ ಉದ್ಭವಿಸಿದೆ. 

ಕ್ರಮ ಕೈಗೊಳ್ಳಿ
ಪಾಲಿಕೆ ಆಡಳಿತಕ್ಕೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ತೆರಿಗೆ ಸಂಗ್ರಹದ ಬಗ್ಗೆ ಲೆಕ್ಕಾಚಾರ ಮಾಡುವ ಪಾಲಿಕೆ ಈ ಅವ್ಯವಸ್ಥೆಯನ್ನು ಹೆದ್ದಾರಿ ಇಲಾಖೆಯ ಗಮನಕ್ಕೆ ತಂದು ಪಾದಚಾರಿಗಳು, ಸ್ಥಳೀಯರಿಗೆ
ಓಡಾಡುವ ವಾತಾವರಣ ನಿರ್ಮಿಸಬೇಕಾಗಿದೆ. ಇನ್ನಾದರೂ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳ ಬೇಕಿದೆ. 
ವಿಜಯ್‌ ಹೊಸಬೆಟ್ಟು,
   ಸ್ಥಳೀಯ ನಿವಾಸಿ

Advertisement

ಮಾಲಿನ್ಯ ಮಾಡುವಂತಿಲ್ಲ
ಹೆದ್ದಾರಿ ಬದಿ ಡಾಬ, ಹೊಟೇಲು ಮತ್ತಿತರ ತ್ಯಾಜ್ಯ ನೀರು ರಸ್ತೆ ಬದಿ ಬಿಡುವಂತಿಲ್ಲ. ಇದಕ್ಕೆ ಅಂಗಡಿ ಮಾಲಕರು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಪರಿಸರ ಮಾಲಿನ್ಯ ಮಾಡುವಂತಿಲ್ಲ. ಹೆದ್ದಾರಿಯ ಹೊಸಬೆಟ್ಟು ಮತ್ತಿತರ ಪ್ರದೇಶಗಳ ತೋಡಿಗೆ ತ್ಯಾಜ್ಯ ನೀರು ಬಿಡುತ್ತಿರುವುದು ಅಪರಾಧ. ಇಲ್ಲದಿದ್ದಲ್ಲಿ ಪಾಲಿಕೆಯಿಂದ ಕ್ರಮ ಜರಗಿಸುವುದು
ಅನಿವಾರ್ಯವಾಗುತ್ತದೆ.
ಅಶೋಕ್‌ ಶೆಟ್ಟಿ,
  ಕಾರ್ಪೊರೇಟರ್‌

Advertisement

Udayavani is now on Telegram. Click here to join our channel and stay updated with the latest news.

Next