Advertisement

ಸುರತ್ಕಲ್‌ ವ್ಯಾಪ್ತಿಯಲ್ಲಿ ಒಳಚರಂಡಿ ಇನ್ನೂ ಮರೀಚಿಕೆ!

10:56 AM Apr 18, 2022 | Team Udayavani |

ಸುರತ್ಕಲ್‌: ಏಳೆಂಟು ವರ್ಷಗಳ ಹಿಂದೆ ಎಡಿಬಿ ಯೋಜನೆಯಡಿ ನಗರದಲ್ಲಿ ನಿರ್ಮಾಣವಾದ ಒಳಚರಂಡಿ ಕಾಮಗಾರಿಗೆ ಬರೋಬ್ಬರಿ 218 ಕೋಟಿ ರೂ. ವಿನಿಯೋಗಿಸಿದ ಬಳಿಕವೂ ಸುರತ್ಕಲ್‌ ವಲಯ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಜನರ ಪಾಲಿಗೆ ಮರೀಚಿಕೆಯಾಗಿದೆ. ಆದರೆ ಪಾಲಿಕೆಯಿಂದ ಒಳಚರಂಡಿ ತೆರಿಗೆ ಹಾಕಲಾಗುತ್ತಿದೆ. ಅಲ್ಲದೆ ಸುರತ್ಕಲ್‌ ಭಾಗದಲ್ಲಿ ಮೂಲಸೌಕರ್ಯ ಕೊರತೆಯಿದ್ದರೂ ಇತ್ತೀಚೆಗೆ ದಿಢೀರ್‌ ತೆರಿಗೆ ಏರಿಕೆ ಮಾಡಿ ಪಾಲಿಕೆ ಶಾಕ್‌ ನೀಡಿದೆ.

Advertisement

ಈ ಹಿಂದೆ ದ.ಕ. ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಸುರತ್ಕಲ್‌ನ ಮಾಧವ ನಗರದಲ್ಲಿನ ಸಂಸ್ಕರಣೆ ಘಟಕ ವನ್ನು ಎಡಿಬಿಯಿಂದ ಯಾವುದೇ ಪ್ರಾಯೋ ಗಿಕ ಪರಿಶೀಲಿಸದೆ ಪಾಲಿಕೆ ತೆಕ್ಕೆಗೆ ತೆಗೆದು ಕೊಂಡು ಉದ್ಘಾಟಿಸಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದರು.

ಇಂದು ಸ್ಥಳೀಯ ನಿವಾಸಿಗಳು ಸಂಸ್ಕರಣ ಘಟಕದ ಲೋಪದಿಂದ ಸಮಸ್ಯೆ ಎದುರಿಸುವಂತಾಗಿದೆ. ಶೇ. 90ರಷ್ಟು ವಿಫಲವಾದ ಈ ಯೋಜನೆಯನ್ನು ಅಮೃತ್‌ ಯೋಜನೆಯಿಂದ ಅನುದಾನ ಮೀಸಲಿಟ್ಟು ದುರಸ್ತಿ ಕಾರ್ಯಅಲ್ಲಲ್ಲಿ ಕೈಗೊಳ್ಳ ಲಾಗಿದೆಯಾದರೂ ಅನುದಾನ ಮಾತ್ರ ಸಾಲುತ್ತಿಲ್ಲ.ಸುರತ್ಕಲ್‌ ಜಂಕ್ಷನ್‌ನ ಪ್ರಮುಖ ಹೊಟೇಲ್‌ ಉದ್ಯಮಗಳಿಗೆ ಇಂದಿಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಪಾಲಿಕೆಗೆ ಸಾಧ್ಯವಾಗಿಲ್ಲ. ಒಂದು ಬಾರಿ ಸಂಪರ್ಕ ಕಲ್ಪಿಸಿದ ವೇಳೆ ವೆಟ್‌ವೆಲ್‌, ಪಿಟ್‌ಗಳ ಲೋಪದಿಂದ ತಗ್ಗು ಪ್ರದೇಶದಲ್ಲಿ ಸೋರಿಕೆ ಯಾದ ಕಾರಣ, ಸ್ಥಳೀಯ ಬಾವಿಗಳ ನೀರು ಮಲೀನವಾಗಿ ಉಪಯೋಗಕ್ಕಿಲ್ಲ ದಂತಾಗಿದೆ. ಬಳಿಕ ಪಾಲಿಕೆಯೇ ಜನರ ಪ್ರತಿಭಟನೆಗೆ ತಲೆಬಾಗಿ ಸಂಪರ್ಕ ಕಡಿತಗೊಳಿಸಿತು. ಹಲವೆಡೆ ಪಿಟ್‌ ಗಳನ್ನು ಮಣ್ಣು ಇಲ್ಲವೆ ಜಲ್ಲಿ ಕಲ್ಲು ಹಾಕಿ ಮುಚ್ಚಲಾಗಿದೆ.

ಕಳಪೆ ಕಾಮಗಾರಿ

ಗುಡ್ಡೆಕೊಪ್ಲದ ವೆಟ್‌ವೆಲ್‌ ಕಳಪೆ ಕಾಮಗಾರಿಯಿಂದ ಬಿರುಕು ಬಿಟ್ಟು ಉಪಯೋಗಕ್ಕಿಲ್ಲದಂತಾಗಿದೆ. ಜಾಗ ಖರೀದಿ, ವೆಟ್‌ ವೆಲ್‌ ನಿರ್ಮಾಣಕ್ಕೆ ಲಕ್ಷಾಂತರ ರೂ. ವೆಚ್ಚ ಮಾಡಿದ್ದು, ನೀರಿನಲ್ಲಿ ಹುಣಿಸೆಕಾಯಿ ತೊಳೆದಂತಾಗಿದೆ. ಮಾಧವ ನಗರದ ಸಂಸ್ಕರಣೆ ಘಟಕದ ಸುತ್ತಮುತ್ತ ಸೋರಿಕೆಯಾಗಿ ತಗ್ಗಿನ ಪ್ರದೇಶದಲ್ಲಿ ಒಳಚರಂಡಿ ನೀರು ಶೇಖರಣೆಯಾಗುತ್ತಿದ್ದು, ಸುಳ್ಳೆ ಕಾಟ, ದುರ್ವಾಸನೆ ಬೀರುತ್ತಿದೆ. ಈ ಸಮಸ್ಯೆಗೆ ಸದ್ಯಕ್ಕೆ ಪರಿಹಾರ ಕಂಡುಕೊಳ್ಳಲಾಗಿಲ್ಲ.

Advertisement

ಸೋರಿಕೆ ತಡೆಗೆ ಆದ್ಯತೆ ನೀಡಲಿ

ಅಮೃತ್‌ ಯೋಜನೆಯಡಿ ಹಲವು ಕಡೆ ಪೈಪ್‌ ಅಳವಡಿಕೆ ನಡೆಯುತ್ತಿದೆ. ಆದರೆ ಪ್ರಮುಖ ಸಂಸ್ಕರಣ ಘಟಕಗಳ ದುರಸ್ತಿ, ತುರ್ತು ಕಾಮಗಾರಿ, ಸೋರಿಕೆ ಆಗದಂತೆ ಕ್ರಮ ಕೈಗೊಳ್ಳಲು ಪಾಲಿಕೆ ಆದ್ಯತೆ ನೀಡಿ 2023ರ ಒಳಗಾಗಿ ಒಳಚರಂಡಿ ಸಂಪರ್ಕ ಕಲ್ಪಿಸುವುದೇ ಕಾದು ನೋಡಬೇಕಿದೆ.

ಬೇಡಿಕೆ ಪರಿಗಣಿಸಿ ಒಳಚರಂಡಿ ಸಂಪರ್ಕ

ಸುರತ್ಕಲ್‌ ಭಾಗದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಒಳಚರಂಡಿ ಜೋಡಣೆ ಪ್ರಮುಖ ಬೇಡಿಕೆ. ಈಗಾಗಲೇ ಮಾಡಲಾದ ಸೌಲಭ್ಯಗಳನ್ನು ದುರಸ್ತಿಗೊಳಿಸಲು ಕುಡ್ಸೆಂಪ್‌ ಮೂಲಕ ಅನುದಾನ ಮೀಸಲಿಟ್ಟು ಕಾಮಗಾರಿಗೆ ಮುಂದಾಗಿದ್ದೇವೆ. ಸ್ಥಳೀಯರ ಬೇಡಿಕೆ ಪರಿಗಣಿಸಿ ಒಳಚರಂಡಿ ಸಂಪರ್ಕ ಕಲ್ಪಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಪಾಲಿಕೆ ಮಾಡುತ್ತಿದೆ. -ಪ್ರೇಮಾನಂದ ಶೆಟ್ಟಿ ಮೇಯರ್‌, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next