Advertisement
ಪಟ್ಟಣದ ನಾಗರಿಕರಿಂದ ಹಸಿಕಸವನ್ನು ಪುರಸಭೆ ಕಸದ ವಾಹನದವರು ಸ್ವೀಕರಿಸದೇ ಇರಲು ಸಾಧ್ಯವಿಲ್ಲ. ಹಸಿಕಸವನ್ನು ಒಣಕಸವಾಗಿ ಪರಿವರ್ತಿಸುವ ತಾಂತ್ರಿಕತೆ ಈಗಾಗಲೇ ಶಿವಮೊಗ್ಗದ ವಾರ್ಡೊಂದರಲ್ಲಿ ಸರಕಾರ ಪ್ರಾಯೋಗಿಕವಾಗಿ ಅಳವಡಿಸಿದ್ದು ಸಾಧ್ಯತೆಗಳ ವರದಿಯ ನಂತರವೇ ರಾಜ್ಯಾದ್ಯಂತ ಅಳವಡಿಸಬಹುದು. ಅಲ್ಲಿಯವರೆಗೆ ಸಮಸ್ಯೆಗೆ ತಾತ್ಕಾಲಿಕ ಉಪಶಮನ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಮುಖ್ಯಾಧಿಕಾರಿ ಎಂ.ಕೆ. ಸುರೇಶ ತಿಳಿಸಿದರು.
Related Articles
Advertisement
ಇಲ್ಲಿನ ಹಸಿಕಸ ಗೊಬ್ಬರ ಪರಿವರ್ತಿಸುವ ವ್ಯವಸ್ಥೆಗೆ ಮೇಲ್ಚಾವಣಿ ಒದಗಿಸಿ ಸರಿಪಡಿಸಿದರೆ ವಾಸನೆ ಬರುವುದೂ ಇಲ್ಲ. ಸಮಸ್ಯೆಯೂ ಇಲ್ಲ, ಈಗಾಗಲೇ 14ನೇ ಹಣಕಾಸು ಯೋಜನೆಯಡಿ 5 ಲಕ್ಷ ಅನುದಾನವನ್ನು ಈ ಕಾರ್ಯಕ್ಕೆ ಬಳಸಿ ಕೊಳ್ಳುವತ್ತ ಕಾರ್ಯಪ್ರವೃತ್ತರಾಗಿದ್ದೆವು. ಸಮಿತಿ ಸಮ್ಮತಿಸಿದರೆ ಅನಿವಾರ್ಯ ತಾತ್ಕಾಲಿಕ ವ್ಯವಸ್ಥೆಯಾಗಿ ಈಗಿರುವ ಉದ್ಯಾನವನದ ವಿಲೇವಾರಿ ಜಾಗದಲ್ಲೇ ಮರುಬಳಕೆ ಮಾದರಿಯಲ್ಲಿ ಶೆಡ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದ ಸಂದರ್ಭದಲ್ಲಿ ಹೊನ್ನಾವರ ತ್ಯಾಜ್ಯ ವಿಲೇವಾರಿ ಘಟಕದವರು ಕೇವಲ ಒಣಕಸಕ್ಕೆ ಅವಕಾಶ ಕೊಟ್ಟಿದ್ದಾರೆ. ನಮ್ಮ ಹಸಿಕಸವನ್ನು ಅಲ್ಲಿಗೆ ಒಯ್ಯಲಾಗದು. ಎಲ್ಲರ ಸಹಕಾರದಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ. ಸದ್ಯ ಉದ್ಯಾನವನದಲ್ಲಿ ಶೆಡ್‌ನಡಿ ಹಸಿಕಸ ವಿಲೇವಾರಿ ನಡೆಯಲಿ, ಪರ್ಯಾಯ ಮಾರ್ಗಗಳ ಬಗ್ಗೂ ಪ್ರಯತ್ನ ಮುಂದುವರೆಯಲಿ ಎಂದು ವಿಷಯಕ್ಕೆ ತೆರೆ ಎಳೆದರು.
ಒಳಚರಂಡಿ ಯೋಜನೆಯವರ ಅಧ್ವಾನವನ್ನು ಸರಿಪಡಿಸುವ ಕಾಳಜಿ ಜಿಲ್ಲಾಧಿಕಾರಿಗಳಿಗೂ ಇದ್ದಂತಿಲ್ಲ. ಯೋಜನೆಯನ್ನು ರದ್ದು ಮಾಡಿಸುವುದೇ ಕ್ಷೇಮ ಎಂಬ ಮಾತು ಕೇಳಿಬಂತು. ವಾಕರಸಾ ಬಸ್ ನಿಲ್ದಾಣದ ಎದುರು ಗಟಾರ ಸ್ವಚ್ಛತೆಗೆ ಕ್ರಮವಾಗಬೇಕು. ಒಳರಸ್ತೆಗಳ ನಿರ್ವಹಣೆ ಸರಿಯಾಗಿ ನಡೆಯಲಿ, ಮಳೆಗಾಲದಲ್ಲಿ ಜಾರದಂಥ ಇಂಟರ್ ಲಾಕ್‌ಗಳನ್ನೇ ಅಳವಡಿಸಬೇಕು ಎಂಬ ಸಲಹೆಗಳು ಬಂದವು. ವಿವಿಧ ಯೋಜನೆಯಡಿ ಕಾಮಗಾರಿ ನಿರ್ವಹಣೆ, ಹೊರಗುತ್ತಿಗೆಯಡಿ ಚಾಲಕರ ಪೂರೈಕೆ, ಮರಾಕಲ್ ಜಂಟಿ ನೀರು ಯೋಜನೆಯ ಸಾಂತಗಲ್ ಕ್ಲೋರಿನೇಷನ್ ಘಟಕ ನವೀಕರಿಸುವ ಕುರಿತು, ಕಟ್ಟಡ ಪರವಾನಿಗೆ ಅನುಮೋದನೆ ಕುರಿತು ಚರ್ಚೆ ನಡೆಯಿತು.