Advertisement

ಕಂಠೀರವದಲ್ಲಿ ಪ್ರೊ ಕಬಡ್ಡಿ ಕಲರವ : ಬೆಂಗಳೂರಿನಲ್ಲಿ ಇಂದಿನಿಂದ ಪ್ರೊ ಕಬಡ್ಡಿ ಸೀಸನ್‌-9

01:01 AM Oct 07, 2022 | Team Udayavani |

ಬೆಂಗಳೂರು  ಕ್ರೀಡಾ ಜಗತ್ತು ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಕ್ಷಣಗಣನೆ ಯಲ್ಲಿರುವಾಗಲೇ ಪ್ರೊ ಕಬಡ್ಡಿ 9ನೇ ಸೀಸನ್‌ ದೌಡಾಯಿಸಿ ಬಂದಿದೆ. ಬೆಂಗಳೂರಿನ “ಶ್ರೀ ಕಂಠೀರವ ಸ್ಟೇಡಿಯಂ’ನಲ್ಲಿ ಶುಕ್ರವಾರದಿಂದ ಕಬಡ್ಡಿ ಕಲರವ ಕೇಳಿಬರಲಿದೆ. ಕೊರೊನಾ ವೇಳೆ ಮುಚ್ಚಿದ ಸ್ಟೇಡಿಯಂನಲ್ಲಿ ಸಾಗಿದ ಪಂದ್ಯಾವಳಿ, 3 ವರ್ಷಗಳ ಬಳಿಕ ವೀಕ್ಷಕರಿಗೆ ತೆರೆಯಲ್ಪಡುವುದೊಂದು ವಿಶೇಷ. ಹೀಗಾಗಿ ಕಬಡ್ಡಿ ಕ್ರೇಜ್‌ ದೊಡ್ಡ ಮಟ್ಟದಲ್ಲೇ ಹಬ್ಬಲಿದೆ ಎಂಬ ನಿರೀಕ್ಷೆ ದಟ್ಟವಾಗಿದೆ.

Advertisement

ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಾವಳಿ ಬೆಂಗ ಳೂರು ಸೇರಿದಂತೆ 3 ಕೇಂದ್ರಗಳಲ್ಲಿ ನಡೆ ಯಲಿದೆ. ಉಳಿದೆರಡು ತಾಣಗಳೆಂದರೆ ಪುಣೆ ಮತ್ತು ಹೈದರಾಬಾದ್‌. ಕಳೆದ ವರ್ಷ ಬೆಂಗಳೂರಿನಲ್ಲೇ ಪ್ರೊ ಕಬಡ್ಡಿ ನಡೆದಿದ್ದರೂ, ಸಂಪೂರ್ಣ ಜೈವಿಕ ಸುರûಾ ವಲಯವನ್ನು ರಚಿಸಲಾಗಿತ್ತು. ಹಾಗಾಗಿ ಆರಂಭದಲ್ಲಿ ಮಾಧ್ಯಮಗಳಿಗೂ ಪ್ರವೇಶ ನೀಡಿರಲಿಲ್ಲ. ಈಗ ಅಂತಹ ಪರಿಸ್ಥಿತಿಯಿಲ್ಲ.
ಈ ಸಂಬಂಧ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಎಲ್ಲ 12 ತಂಡಗಳ ನಾಯಕರು ಪಾಲ್ಗೊಂಡಿದ್ದರು. ಜತೆಗೆ ಪ್ರೊ ಕಬಡ್ಡಿ ಮಾಲಕ ಸಂಸ್ಥೆ ಮಾಶಲ್‌ ನ್ಪೋರ್ಟ್ಸ್ನ ಆಯುಕ್ತ ಅನುಪಮ್‌ ಗೋಸ್ವಾಮಿ ಕೂಡ ಇದ್ದರು.

ಕೂಟದ ಮೊದಲ 3 ದಿನ ತಲಾ 3 ಪಂದ್ಯಗಳು ನಡೆಯಲಿವೆ. ಇದರೊಂದಿಗೆ ಮೂರೇ ದಿನಗಳಲ್ಲಿ ಎಲ್ಲ 12 ತಂಡಗಳ ಆಟವನ್ನೂ ಸವಿಯಬಹುದಾಗಿದೆ.

7.30ಕ್ಕೆ ಆರಂಭವಾಗಲಿರುವ ಕೂಟದ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಮತ್ತು ಯು ಮುಂಬಾ ಸೆಣಸಲಿವೆ. “ನಾವು ಹಾಲಿ ಚಾಂಪಿಯನ್ಸ್‌. ಈ ಸೀಸನ್‌ನಲ್ಲೂ ಉತ್ತಮ ಸಾಧನೆಯನ್ನು ಕಾಯ್ದುಕೊಂಡು ಬರುವ ವಿಶ್ವಾಸವಿದೆ. ಹಿಂದೆ ಕೇವಲ ಆಟಗಾರನಾಗಿದ್ದೆ. ಈಗ ನಾಯಕತ್ವದ ಜವಾಬ್ದಾರಿಯೂ ಇದೆ. ಇಂಥ ಜವಾಬ್ದಾರಿಗಳಿಂದಲೇ ಆಟಗಾರನೊಬ್ಬ ಹೆಚ್ಚು ಬಲಿಷ್ಠನಾಗಬಲ್ಲ ಎಂಬ ವಿಶ್ವಾಸ ನನ್ನದು’ ಎಂಬುದು ದಬಾಂಗ್‌ ಡೆಲ್ಲಿ ನಾಯಕ ನವೀನ್‌ ಕುಮಾರ್‌ ಅವರ ಅನಿಸಿಕೆ. ನವೀನ್‌ ಅವರೇ ಡೆಲ್ಲಿ ತಂಡದ ಶಕ್ತಿ.
ಯು ಮುಂಬಾ ಯುವ ಆಟಗಾರರನ್ನೇ ಹೊಂದಿರುವ ಪಡೆ. ಕಳೆದ ಸೀಸನ್‌ನಲ್ಲಿ 60 ಟ್ಯಾಕಲ್‌ ಅಂಕ ಗಳಿಸಿದ ರೈಟ್‌ ಕಾರ್ನರ್‌ ಪ್ಲೇಯರ್‌ ರಿಂಕು ಮುಂಬಾದ ಪ್ರಧಾನ ಆಟಗಾರ. ರೈಡರ್‌ ಗುಮಾನ್‌ ಸಿಂಗ್‌ ಅವರನ್ನು ತಂಡ ಹೆಚ್ಚು ಅವಲಂಬಿಸಿದೆ. ಡಿಫೆನ್ಸ್‌ ವಿಭಾಗದಲ್ಲಿ ಸುರೀಂದರ್‌ ಸಿಂಗ್‌ ಇದ್ದಾರೆ. ಇರಾನ್‌ನ ಹೈದರ್‌ ಅಲಿ ಇಕ್ರಾಮಿ (ರೈಡರ್‌) ಮತ್ತು ಗೊಲಾಮ ಅಬ್ಟಾಸ್‌ (ಆಲ್‌ರೌಂಡರ್‌) ಸಾಮರ್ಥ್ಯ ಇನ್ನಷ್ಟೇ ಅರಿವಿಗೆ ಬರಬೇಕಿದೆ.

ಸೆಹ್ರಾವತ್‌ ಇಲ್ಲದ ಬೆಂಗಳೂರು
ಆತಿಥೇಯ ಬೆಂಗಳೂರು ಬುಲ್ಸ್‌ ಸ್ಟಾರ್‌ ಆಟಗಾರ ಪವನ್‌ ಸೆಹ್ರಾವತ್‌ ಅವರ ಪವರ್‌ ಕಳೆದುಕೊಂಡಿದೆ. ವಿಕಾಸ್‌ ಖಂಡೋಲ ಈ ನಿರ್ವಾತವನ್ನು ತುಂಬ ಬಲ್ಲರೇ ಎಂಬುದೊಂದು ಪ್ರಶ್ನೆ. ಅವರು ಈ ಕೂಟದ 2ನೇ ದುಬಾರಿ ಆಟಗಾರ. ತಂಡದ ರಕ್ಷಣಾ ವಿಭಾಗ ಬಲಿಷ್ಠ. ಬುಲ್ಸ್‌ ಉಳಿಸಿಕೊಂಡ 10 ಆಟಗಾರರಲ್ಲಿ 9 ಮಂದಿ ಡಿಫೆಂಡರ್ ಎಂಬುದು ತಂಡದ ಹೆಗ್ಗಳಿಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next