Advertisement

ಹಣಕ್ಕಿಂತ ಆದರ್ಶಕ್ಕೆ ಆದ್ಯತೆ ನೀಡಿ: ನ್ಯಾ|ಪಾಟೀಲ

11:08 AM Jan 13, 2018 | |

ಕಲಬುರಗಿ: ಭವ್ಯ ಭಾರತ ದೇಶದಲ್ಲಿ ಯುವಕರೇ ದೇಶದ ಶಕ್ತಿ. ಹೀಗಾಗಿ ಯುವಕರು ಹಣದ ಕಡೆ ಪ್ರಾಮುಖ್ಯತೆ ನೀಡದೇ ಆದರ್ಶ ಮೌಲ್ಯಗಳತ್ತ ಗಮನ ನೀಡಿ ಆ ಹಾದಿಯಲ್ಲಿ ಮುನ್ನಡೆದು ಬಲಿಷ್ಠ ಭಾರತಕ್ಕೆ ಕೈ ಜೋಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ವಿ. ಪಾಟೀಲ ಕರೆ ನೀಡಿದರು.

Advertisement

ನಗರದ ಸರ್ವಜ್ಞ ಹಾಗೂ ಜಸ್ಟಿಸ್‌ ಶಿವರಾಜ ಪಾಟೀಲ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ
ರಾಷ್ಟ್ರೀಯ ಯುವ ದಿನಾಚರಣೆ, ಸ್ವಾಮಿ ವಿವೇಕಾನಂದರ ಹಾಗೂ ನ್ಯಾಯಮೂರ್ತಿ ಡಾ| ಶಿವರಾಜ ಪಾಟೀಲ ಅವರ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ದೇಶ ಕಟ್ಟುವಲ್ಲಿ ಯುವಕರ ಪಾತ್ರ ಅಪಾರವಾಗಿದೆ. ನಾವು 1984ರಿಂದ ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ
ಆಚರಿಸುತ್ತಾ ಬಂದಿದ್ದೇವೆ. ವಿದ್ಯಾರ್ಥಿಗಳು ಆಲೋಚನೆ ಆದರ್ಶಗಳ ಕಡೆಗೆ ಹೋಗುವ, ಎಲ್ಲ ಯುವಕರನ್ನು ಪ್ರೇರೇಪಿಸುವ, ದೇಶದ ಉತ್ತಮ ಭವಿಷ್ಯ ಕಟ್ಟುವ, ಗುರಿ ಪೊರೈಸುವ ಬದ್ಧತೆಗೆ ನಾವು ಒಳಪಡಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯವಾಗಿದೆ ಎಂದರು.

ಸ್ವಾಮಿ ವಿವೇಕಾನಂದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಸಮಾಜದ ಸಂಸ್ಕೃತಿ, ಸಂಸ್ಕಾರವನ್ನು ಜಗತ್ತಿಗೆ
ತೋರಿಸಿಕೊಟ್ಟವರು. ಅಜ್ಞಾನ, ಅಂಧಕಾರದಲ್ಲಿದ್ದ ಜನರನ್ನು ಬೆಳಕಿನಡೆಗೆ ತರುವುದೇ ನಿಜವಾದ ದೇಶಪ್ರೇಮ. ಯುವಕರು ಹೃದಯವಂತಿಕೆ ಬೆಳೆಸಿಕೊಂಡು ಮಾನಸಿಕವಾಗಿ, ಬೌದ್ಧಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ನ್ಯಾಯಾ ಧೀಶ ಎಸ್‌.ಆರ್‌. ಮಾಣಿಕ್ಯ ಮಾತನಾಡಿದರು. ದೂರದರ್ಶನ ಚಂದನವಾಹಿನಿಯ ಥಟ್‌ ಅಂತ ಹೇಳಿ ಖ್ಯಾತಿಯ ಡಾ| ನಾ. ಸೋಮೇಶ್ವರ ಮಾತನಾಡಿ, ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಹಿಂದೆ ಗುರು ಇದ್ದರೆ ಮುಂದೆ ಗುರಿ ಇರುತ್ತಿತ್ತು. ಆದರೆ ಇಂದಿನ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ಸಂಸ್ಥೆಯ ಸಂಸ್ಥಾಪಕ ಪ್ರೊ| ಚನ್ನಾರಡ್ಡಿ ಪಾಟೀಲ, ಸಂಸ್ಥೆಯ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ, ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ. ಕಿರೇದಳ್ಳಿ, ವಿನುತಾ ಆರ್‌.ಬಿ. ಉಪ ಪ್ರಾಚಾರ್ಯರಾದ ಪ್ರಶಾಂತ ಕುಲಕರ್ಣಿ, ಪ್ರಥ್ವಿರಾಜಗೌಡ, ಕರುಣೇಶ ಬಿ. ಹಿರೇಮಠ ಹಾಗೂ ವಿವಿಧ ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು. ಡಾ| ಸಂತೋಷಕುಮಾರ ಸ್ವಾಗತಿಸಿ, ನಿರೂಪಿಸಿದರು. ಗುರುರಾಜ ಕುಲಕರ್ಣಿ ವಂದಿಸಿದರು. ಸರ್ವಜ್ಞ ಕಾಲೇಜಿನ ವಿದ್ಯಾರ್ಥಿಗಳು ಸ್ವಾಗತಿಸಿದರು. ನಂತರ ಸರ್ವಜ್ಞ ಚಿಣ್ಣರ ಲೋಕದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next