Advertisement

ಪರೀಕ್ಷಾ ಕೇಂದ್ರದಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ

06:32 AM Jul 03, 2020 | Lakshmi GovindaRaj |

ತುಮಕೂರು: ರಾಜ್ಯದಲ್ಲಿ ಕೋವಿಡ್‌-19 ಸಂಕಷ್ಟದಲ್ಲಿಯೂ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು, ಈ ಬಾರಿ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು  ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದರು.

Advertisement

ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವಿವಿಧ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಮಾತನಾಡಿದರು. ಎಸ್‌ಎಸ್‌ಎಲ್‌ಸಿ  ಪರೀಕ್ಷೆಯ 5ನೇ ಕನ್ನಡ ಭಾಷಾ ವಿಷಯವಿದ್ದು, ರಾಜ್ಯದಲ್ಲಿ ಈವರೆಗೆ ಶೇ.98ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇದೆ ಎಂದರು.

ಉತ್ಸಾಹದಿಂದ ಪರೀಕ್ಷೆ ಬರೆದ ಮಕ್ಕಳು: ಪರೀಕ್ಷೆ ಆರಂಭವಾದ ದಿನದಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರಕ್ಕೆ ಭೇಟಿ ನೀಡಿದ್ದೇನೆ. ಈಗ ತುಮಕೂರು ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.

ಮಕ್ಕಳ ಸುರಕ್ಷತೆಗೆ ಆದ್ಯತೆ: ಶಿಕ್ಷಣ ಇಲಾ ಖೆಯು ಯಾವುದೇ ಪರೀಕ್ಷಾ ಕೇಂದ್ರವನ್ನು ಕೇವಲ ಪರೀಕ್ಷಾ ಕೇಂದ್ರವಾಗಿರಬಾರದು, ಅದು ಮಕ್ಕಳ ಸುರಕ್ಷತಾ ಕೇಂದ್ರವಾಗಿರಬೇಕು. ಮಕ್ಕಳಿಗೆ ಪರೀಕ್ಷಾ ಕೇಂದ್ರದಲ್ಲಿ ಸುರಕ್ಷತಾ ಮನೋಭಾವ  ಬರಬೇಕು. ಮನೆಯಲ್ಲಿ ಸುರಕ್ಷಿತವಾಗಿರುವಂತೆ ಕೇಂದ್ರದಲ್ಲಿ ಸುರಕ್ಷತೆ ಯಿಂದ ನೋಡಿಕೊಳ್ಳುವುದು ನಮ್ಮ ಜವಾ ಬ್ದಾರಿ ಎಂಬ ಸಂಕಲ್ಪ ಮಾಡಿದ್ದೇವೆ ಎಂದರು.

ಮಠಕ್ಕೆ ಭೇಟಿ, ಪರಿಶೀಲನೆ: ಪವಿತ್ರ ಕ್ಷೇತ್ರವಾದ ಶ್ರೀ ದ್ಧಗಂಗಾ  ಮಠದಲ್ಲಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮಠಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತಹ ಮಕ್ಕಳಿಗೆ ಅವರ ಸ್ವಂತ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರೂ ಸಹ ಮಕ್ಕಳು ಮಠದ  ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತೇವೆ ಎಂದು ಬಂದಿದ್ದಾರೆ. ಮಕ್ಕಳ ಉತ್ಸಾಹ, ಆತ್ಮವಿಶ್ವಾಸ ಕಂಡು ಸಂತಸವಾಗಿದೆ ಎಂದರು.

Advertisement

ವಿವಿಧ ಶಾಲೆಗೆ ಭೇಟಿ: ಸಚಿವರು ತುಮಕೂರು ನಗರದ ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆ, ವಿದ್ಯಾ ಪ್ರೌಢಶಾಲೆ, ಬಸವೇಶ್ವರ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಜಿ.ಬಿ.  ಜ್ಯೋತಿಗಣೇಶ್‌, ವಿಧಾನ ಪರಿಷತ್‌ ಸದಸ್ಯ ವೈ.ಎನ್‌. ನಾರಾಯಣ ಸ್ವಾಮಿ, ಚಿದಾನಂದ ಎಂ.ಗೌಡ, ಡಿಡಿಪಿಐ ಎಂ.ಆರ್‌. ಕಾಮಾಕ್ಷಿ, ಬಿಇಓ ಹನುಮ ನಾಯಕ್‌ ಇದ್ದರು.

ಈವರೆಗೆ 32 ವಿದ್ಯಾರ್ಥಿಗಳು ಕೋವಿಡ್‌-19 ಪ್ರಕರಣದಿಂದ ಪರೀಕ್ಷೆಗೆ ಹಾಜರಾಗಿಲ್ಲ. ಅವರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಆಗಸ್ಟ್‌ ತಿಂಗಳಿನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಫ್ರೆಶರ್ಗಳಾಗಿ ಗುರುತಿಸಿ ಪರೀಕ್ಷೆ ಬರೆಯಲು  ಅವಕಾಶ ಕಲ್ಪಿಸಲಾಗಿದೆ. 
-ಎಸ್‌.ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next