Advertisement
ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಗಂಗಾವತಿ ಹಾಗೂ ಕಾರಟಗಿಯಲ್ಲಿ ರೋಡ್ ಶೋ, ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡು ವಾಕ್ಸಮರ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬಸವಣ್ಣನ ನೆಲದಲ್ಲಿ ನಿಂತು ಮಾತನಾಡುತ್ತಾರೆ. ಆದರೆ ಹೇಳಿದಂತೆ ಯಾವುದನ್ನೂ ಮಾಡುತ್ತಿಲ್ಲ. ಲೋಕಸಭೆಯಲ್ಲೂ ಕಾಯಕವೇ ಕೈಲಾಸ ಎನ್ನುವ ಬಸವಣ್ಣನ ಸಿದ್ಧಾಂತ ಪ್ರಸ್ತಾಪ ಮಾಡುತ್ತಾರೆ. ಯಾವುದೇ ಕಾಯಕ ಮಾಡುತ್ತಿಲ್ಲ. ಎನ್‌ಡಿಎ ಸರ್ಕಾರ ಕೇವಲ 10 ಕೋಟಿ ಬಂಡವಾಳ ಶಾಹಿಗಳ, ಕೋಟ್ಯಧಿಧೀಶರ ಪರವಾಗಿ ಕೆಲಸ ಮಾಡುತ್ತಿದೆ. ಬಡ ಜನರ, ರೈತಪರ, ಅವರ ಕಲ್ಯಾಣಕ್ಕೆ ಹಣ ನೀಡುತ್ತಿಲ್ಲ ಎಂದು ಆರೋಪಿಸಿದರು.
ದೇಶದ ಖಜಾನೆಯಲ್ಲಿ ಯಾವುದೇ ಹಣದ ಕೊರತೆಯಿಲ್ಲ. ಆದರೆ ಪ್ರಧಾನಿ ರೈತರ ಬೆಳೆಗೆ ಬೆಂಬಲ ಬೆಲೆ ಕೊಡುತ್ತಿಲ್ಲ. ಬಡವರಿಗೆ ಸಹಾಯ ಮಾಡುತ್ತಿಲ್ಲ. ಪ್ರಧಾನಿ ಮೋದಿ ಅವರು ದೇಶಾದ್ಯಂತ ಪ್ರವಾಸ ಮಾಡುವ ವೇಳೆ ದಲಿತರಿಗೆ, ಆದಿವಾಸಿಗಳಿಗೆ ಸಹಾಯ ಮಾಡುತ್ತೇನೆ ಎಂದು ಭಾಷಣ ಮಾಡಿ ಭರವಸೆ ನೀಡುತ್ತಿದ್ದಾರೆ. ಆದರೆ ಅವರ ಬಜೆಟ್‌ನಲ್ಲಿ ದಲಿತರು, ಆದಿವಾಸಿಗಳಿಗೆ ಕೇವಲ 55 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.
Related Articles
Advertisement
ಪ್ರಧಾನಿ ಮೋದಿ ಲೋಕಸಭೆಯಲ್ಲಿ ಇತ್ತಿಚೆಗೆ 1 ಗಂಟೆ 45 ನಿಮಿಷ ಮಾತನಾಡಿದರು. ಆದರೆ ಬಡವರ, ಮಹಿಳೆಯರ, ಮಕ್ಕಳ, ಆರೋಗ್ಯದ ಬಗ್ಗೆ ಮಾತನಾಡಲಿಲ್ಲ. ಬರಿ ಕಾಂಗ್ರೆಸ್ ಸರ್ಕಾರ ಹಾಗಿತ್ತು. ಹೀಗಿತ್ತು ಎನ್ನುವ ಗತಕಾಲದ ಮಾತನ್ನಾಡಿದ್ದಾರೆ. ಜನತೆ ಪ್ರಧಾನಿಯನ್ನು ಲೋಕಸಭೆಗೆ ಕಾಂಗ್ರೆಸ್ ವಿರುದ್ಧ ಭಾಷಣ ಮಾಡಲು ಆಯ್ಕೆ ಮಾಡಿ ಕಳಿಸಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಲು ಆಯ್ಕೆ ಮಾಡಿ ಕಳಿಸಿದ್ದಾರೆ. ಭಾಷಣದಲ್ಲೇ ಕಾಲ ಕಳೆದಿದ್ದೀರಾ ಉಳಿದ ಕಡಿಮೆ ಅವ ಧಿಯಲ್ಲಾದರೂ ಕೆಲಸ ಮಾಡಿ ಎಂದು ರಾಹುಲ್ ಅವರು ಮೋದಿಗೆ ಟಾಂಗ್ ನೀಡಿದರು.