Advertisement

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

06:49 PM Nov 24, 2024 | Team Udayavani |

ಬೆಳಗಾವಿ: ಇಲ್ಲಿಯ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಶೌರ್ಯ ಎಂಬ ಹೆಸರಿನ ಹುಲಿ ಅನಾರೋಗ್ಯದಿಂದ ಮೃತಪಟ್ಟಿದೆ.

Advertisement

12 ರಿಂದ13 ವರ್ಷದ ಶೌರ್ಯ ಎಂಬ ಗಂಡು ಹುಲಿಯು ರಕ್ತದಲ್ಲಿ ಕಂಡುಬರುವ ಮೈಕೋಪ್ಲಾಸ್ಮಾ ಬೇಬಿಸಿಯೋಸಿಸ್ ಎಂಬ ಅತೀವಿರಳ ರೋಗದಿಂದ ಬಳಲುತ್ತಿತ್ತು.

ಕಳೆದ 21 ದಿನಗಳಿಂದ ವನ್ಯಜೀವಿ ವೈದ್ಯ ತಜ್ಞರ ಸಲಹೆಯಂತೆ ಉಪಚಾರ ನೀಡಲಾಗುತ್ತಿತ್ತು, ಬಹು ಅಂಗಾಂಗಗಳ ವೈಫಲ್ಯದಿಂದ ರವಿವಾರ ಬೆಳಗ್ಗೆ 9.40 ಕ್ಕೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ನಂತರ ಮರಣೊತ್ತರ ಪರೀಕ್ಷೆ ಮಾಡಿ ನಿಯಮಾನುಸಾರ ಮೃತ ದೇಹವನ್ನು ಅಂತ್ಯಕ್ರಿಯೆ ಮಾಡಲಾಗಿದೆ.

ಈ ಪ್ರಕ್ರಿಯೆಯಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಮರಿಯ ಕ್ರಿಷ್ಟು ರಾಜಾ,ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ನಾಗರಾಜ ಬಾಳೆಹೊಸುರ, ವಲಯ ಅರಣ್ಯ ಅದಿಕಾರಿ ಪವನ ಕುರನಿಂಗ, ಮೃಗಾಲಯದ ವೈದ್ಯರಾದ ಡಾ| ನಾಗೇಶ ಹುಯಿಲ್‌ಗೋಳ, ಪಶುವೈದ್ಯಕೀಯ ಇಲಾಖೆಯ ಡಾ| ಪ್ರಶಾಂತ ಕಾಂಬಳೆ ಮತ್ತು ಮೃಗಾಲಯದ ಸಿಬಂದಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next