Advertisement

ಭಿಲಾಯಿ: ಆಧುನೀಕರಿಸಿದ ಸ್ಟೀಲ್‌  ಘಟಕ ಉದ್ಘಾಟನೆ

11:43 AM Jun 15, 2018 | Team Udayavani |

ಭಿಲಾಯಿ: ಛತ್ತೀಸ್‌ಗಢದ ಭಿಲಾಯಿಯಲ್ಲಿ ಆಧುನಿಕ ಮತ್ತು ವಿಸ್ತರಿತ ಸ್ಟೀಲ್‌ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಲೋಕಾರ್ಪಣೆ ಮಾಡಿ ದ್ದಾರೆ. 

Advertisement

ಭಾರತೀಯ ಸ್ಟೀಲ್‌ ಪ್ರಾಧಿಕಾರವು 18 ಸಾವಿರ ಕೋಟಿ ರೂ. ವೆಚ್ಚ ಮಾಡಿ ಈ ಘಟಕವನ್ನು ಅಭಿವೃದ್ಧಿಪಡಿಸಿದೆ. ಹೀಗಾಗಿ ಸ್ಟೀಲ್‌ ಉತ್ಪಾದನೆ ಈಗ ವಾರ್ಷಿಕ 2.1 ಕೋಟಿ ಟನ್‌ಗೆ ಏರಿಕೆಯಾಗಿದೆ. ಇದು ನವ ಭಾರತಕ್ಕೆ ಅಡಿಪಾಯವಾಗಿದೆ ಎಂದು ಪ್ರಧಾನಿ ಮೋದಿ ಉದ್ಘಾಟನೆ ವೇಳೆ ಹೇಳಿದ್ದಾರೆ. ಭಿಲಾಯಿ ಘಟಕವು ಸ್ಟೀಲ್‌ ಉತ್ಪಾನೆ ಮಾಡಿದ್ದಷ್ಟೇ ಅಲ್ಲ, ಜನರ ಜೀವನ ಮಟ್ಟವನ್ನೂ ಸುಧಾರಿಸಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಹಿಂಸೆಗೆ ಅಭಿವೃದ್ಧಿಯೇ ಉತ್ತರ. ನಮ್ಮ ಸರ್ಕಾರವು ವಿಶ್ವಾಸದ ವಾತಾವರಣವನ್ನು ರೂಪಿಸಲು ಶ್ರಮಿ ಸುತ್ತಿದೆ. ಅಭಿವೃದ್ಧಿಯಿಂದಾಗಿ ಮೂಡುವ ವಿಶ್ವಾಸವು ಯಾವುದೇ ಹಿಂಸೆಯನ್ನು ಕೊನೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ 22 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನೂ ಪ್ರಧಾನಿ ಉದ್ಘಾಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next