Advertisement
ಆರೋಗ್ಯ ಕೇಂದ್ರ ಮಾಹಿತಿಈ ಆರೋಗ್ಯ ಕೇಂದ್ರವು ಯಡ್ತಾಡಿ, ಶಿರಿಯಾರ, ವಡ್ಡರ್ಸೆ ಗ್ರಾ.ಪಂ.ನ ಕಾವಡಿ, ಅಚಾÉಡಿ, ಬನ್ನಾಡಿ, ವಡ್ಡರ್ಸೆ, ಯಡ್ತಾಡಿ, ಹೇರಾಡಿ, ಶಿರಿಯಾರ ಗ್ರಾಮಗಳ ಅತ್ಯಂತ ದೊಡ್ಡ ವ್ಯಾಪ್ತಿಯನ್ನು ಒಳಗೊಂಡಿದೆ, ಆಸ್ಪತ್ರೆ ವ್ಯಾಪ್ತಿಯಲ್ಲಿ ಸುಮಾರು 19 ಸಾವಿರ ಜನಸಂಖ್ಯೆ ಇದೆ. ಸಾೖಬ್ರಕಟ್ಟೆ ಮುಖ್ಯ ಪೇಟೆಯಲ್ಲಿ ಪ್ರಾ.ಆ. ಕೇಂದ್ರವಿದ್ದು, ಯಡ್ತಾಡಿ, ಕಾವಡಿ, ಶಿರಿಯಾರ, ವಡ್ಡರ್ಸೆ, ಹೇರಾಡಿ, ಬನ್ನಾಡಿಯಲ್ಲಿ ಉಪಕೇಂದ್ರಗಳಿವೆ. ಪ್ರಸ್ತುತ ಪ್ರತಿ ದಿನ 40ರಿಂದ 50 ಮಂದಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಾರೆ.
ಸಾಂಕ್ರಾಮಿಕ ರೋಗಗಳ ಪರೀಕ್ಷೆ, ರಕ್ತ, ಮೂತ್ರ ಪರೀಕ್ಷೆ ನಡೆಸುವ ವ್ಯವಸ್ಥೆ, ರೋಗಿಗಳಿಗೆ ತುರ್ತು ಚಿಕಿತ್ಸೆಗೆ ವ್ಯವಸ್ಥೆ, ಮಲೇರಿಯಾ, ಎಚ್1ಎನ್1, ಡೆಂಗ್ಯೂ ಮುಂತಾದ ಸಾಂಕ್ರಾಮಿಕ ಕಾಯಿಲೆಗಳಿಗೆ ಔಷಧ ಸಂಗ್ರಹವಿದೆ. ಮುನ್ನೆಚ್ಚರಿಕೆ ಕ್ರಮಗಳು
ಸಾಂಕ್ರಾಮಿಕ ರೋಗಗಳ ಕುರಿತು ವಿವಿಧ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಹಾಗೂ ಆಶಾ ಕಾರ್ಯಕರ್ತೆಯರು, ನರ್ಸ್‌ಗಳು ಮನೆ-ಮನೆಗೆ ಭೇಟಿ ನಡೆಸಿ ಶುಚಿತ್ವದ ಕುರಿತು ಮಾಹಿತಿ, ಕರಪತ್ರಗಳನ್ನು ಹಂಚುತ್ತಾರೆ. ಶುಚಿತ್ವದ ಕೊರತೆ ಕಂಡುಬಂದಲ್ಲಿ ಸ್ಥಳೀಯ ಗ್ರಾ.ಪಂ.ಗಳಿಗೆ ಮಾಹಿತಿ ರೋಗ ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ.
Related Articles
ಹೇರಾಡಿ, ಬನ್ನಾಡಿ, ವಡ್ಡರ್ಸೆ ಉಪ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ ಹಾಗೂ ಯಡ್ತಾಡಿ ಹಾಗೂ ವಡ್ಡರ್ಸೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿ ಇದೆ. ಪ್ರಮುಖವಾಗಿ ಪ್ರಾ.ಆ. ಕೇಂದ್ರದಲ್ಲಿ ನೀರಿನ ಸಮಸ್ಯೆ ಇದೆ.
Advertisement
ವೈದ್ಯರ ಲಭ್ಯತೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಗ್ಗೆ 9ರಿಂದ ಅಪರಾಹ್ನ 1 ಹಾಗೂ ಅಪರಾಹ್ನ 1.45ರಿಂದ 4.30ರ ವರೆಗೆ ತರೆದಿರುತ್ತದೆ. ಈ ಸಂದರ್ಭ ಹಿರಿಯ ವೈದ್ಯಾಧಿಕಾರಿಗಳು ಹಾಗೂ ಕಿರಿಯ ಆರೋಗ್ಯ ಸಹಾಯಕರು ಸೇವೆಗೆ ಲಭ್ಯವಿರುತ್ತಾರೆ ಜತೆಗೆ ಉಪಕೇಂದ್ರಗಳಲ್ಲಿ ಕಿರಿಯ ಆರೋಗ್ಯ ಸಹಾಯಕಿಯರು ಸೇವೆ ನೀಡುತ್ತಾರೆ. 1.30 ಕೋ.ರೂ.ವೆಚ್ಚದಲ್ಲಿ ನೂತನ ಕಟ್ಟಡ
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಬಾರ್ಡ್ ಯೋಜನೆಯಡಿ 1.30 ಕೋ.ರೂ. ಅನುದಾನದಲ್ಲಿ ನೂತನ ಕಟ್ಟಡ ಮಂಜೂರಾಗಿದ್ದು ಇದೀಗ ಕಾಮಗಾರಿ ನಡೆಯುತ್ತಿದೆ. ನೂತನ ಕೇಂದ್ರ ಆರಂಭಗೊಂಡ ಮೇಲೆ 3ಬೆಡ್‌ಗಳ 2 ವಾರ್ಡ್, ಹೆರಿಗೆ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ. ಹೊರ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮುಂತಾದ ಸೌಕರ್ಯಗಳು ಲಭ್ಯವಾಗಲಿವೆ. ರೋಗದ ಕುರಿತು ಇರಲಿ ಎಚ್ಚರ
ಮಳೆಗಾಲದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಜ್ವರ ಇನ್ನಿತರ ಸಮಸ್ಯೆ ಕಂಡು ಬಂದರೆ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಸಮಸ್ಯೆಯ ಬಗ್ಗೆ ತಿಳಿಯಲು, ರೋಗ ಹರಡದಂತೆ ತಡೆಗಟ್ಟಲು ಸಾಧ್ಯ.
– ಡಾ| ಜಯಶೀಲ ಆಚಾರ್,ಹಿರಿಯ ವೈದ್ಯಾಧಿಕಾರಿಗಳು – ರಾಜೇಶ ಗಾಣಿಗ ಅಚ್ಲಾಡಿ