Advertisement

TB ಔಷಧದೊಂದಿಗೆ ಪೌಷ್ಟಿಕ ಆಹಾರ ಸೇವನೆಯಿಂದ ಕ್ಷಯ ರೋಗ ನಿವಾರಣೆ: ಡಾ| ಕಿಶೋರ್‌ ಕುಮಾರ್‌

11:25 PM Aug 16, 2023 | Team Udayavani |

ಮಂಗಳೂರು: ನಿಗದಿತ ಔಷಧದ ಜತೆಗೆ ಪೌಷ್ಟಿಕಾಂಶಯುಕ್ತ ಆಹಾರಗಳ ಸೇವನೆಯಿಂದ ಕ್ಷಯ ರೋಗವನ್ನು ಆದಷ್ಟು ಶೀಘ್ರ ನಿರ್ಮೂಲ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಕಿಶೋರ್‌ ಕುಮಾರ್‌ ಹೇಳಿದರು.

Advertisement

ನಗರದ ಜಿ.ಪಂ. ಸಭಾಂಗಣದಲ್ಲಿ ಕೆಐಒಸಿಎಲ್‌ ವತಿಯಿಂದ ನಿ-ಕ್ಷಯ್‌ ಮಿತ್ರದಡಿ ಜಿಲ್ಲೆಯ ಒಟ್ಟು 535 ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಪೊಟ್ಟಣಗಳನ್ನು ವಿತರಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರವು 2025ಕ್ಕೆ ಕ್ಷಯ ಮುಕ್ತ ಭಾರತವನ್ನು ಮಾಡುವ ಗುರಿ ಹೊಂದಿದೆ. ಈ ಕಾರ್ಯಕ್ರಮಕ್ಕೆ ನಿ-ಕ್ಷಯ್‌ ಮಿತ್ರ ಸಹಕಾರಿಯಾಗಿದೆ. “ನಿ-ಕ್ಷಯ್‌ ಮಿತ್ರ’ ಎಂದರೆ ಕ್ಷಯರೋಗ ವನ್ನು ಕೊನೆಗಾಣಿಸಲು ಮಾಡುವ ಜೊತೆಗಾರ ಎಂದರ್ಥ ಎಂದರು.

ಈ ಯೋಜನೆಯಲ್ಲಿ ಕ್ಷಯರೋಗಿಗೆ ಕನಿಷ್ಠ 6 ತಿಂಗಳಿನಿಂದ ಮೂರು ವರ್ಷದವರೆಗೆ ಪೌಷ್ಟಿಕ ಆಹಾರ ವಿತರಣೆ, ರೋಗ ನಿರ್ಣಯಕ್ಕೆ ಸಹಾಯ ಮಾಡುವುದು, ಉದ್ಯೋಗ ಕೊಡಿಸುವುದು ಕಡ್ಡಾಯವಾಗಿರು ತ್ತದೆ. ಖಾಸಗಿ ಸಂಸ್ಥೆಯವರು, ಕೈಗಾರಿಕೋದ್ಯಮಿಗಳು, ರಾಜಕಾರಣಿ ಗಳು, ಸೇವಾ ಸಂಸ್ಥೆಯವರು ಹಾಗೂ ಇನ್ನಿತರರು ವೈಯಕ್ತಿಕವಾಗಿಯೂ ಈ ಯೋಜನೆಗೆ ಕೈ ಜೋಡಿಸಬಹುದಾಗಿದೆ. ಇದರಿಂದ ಅವರಿಗೆ ಆದಾಯ ತೆರಿಗೆ ವಿನಾಯಿತಿ ಮತ್ತು ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಜನರ ಜವಾಬ್ದಾರಿಯೂ ಇದೆ
ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್‌ ಕೆ. ಮಾತನಾಡಿ, ಕ್ಷಯರೋಗ ನಿವಾರಣೆಗೊಳಿಸುವ ಜವಾಬ್ದಾರಿ ಬರೀ ಆರೋಗ್ಯ ಇಲಾಖೆ ಯದ್ದಲ್ಲ. ಇದರಲ್ಲಿ ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಜವಾಬ್ದಾರಿಯೂ ಇದೆ ಎಂದು ತಿಳಿಸಿದರು.

Advertisement

ಕೆಐಒಸಿಎಲ್‌ ಸಂಸ್ಥೆಯ ಅಧ್ಯಕ್ಷ ಟಿ. ಸಾಮಿನಾಥನ್‌ ಮಾತನಾಡಿ, ಈ ರೀತಿಯ ಸೇವೆಗಳಿಗೆ ನಮ್ಮ ಸಂಸ್ಥೆಯು ಸದಾ ಮುಂದಿದ್ದು, ಈ ಹಿಂದೆಯೂ ಸಹ ಕೋವಿಡ್‌ ಸಮಯದಲ್ಲಿ ಆಕ್ಸಿಜನ್‌ ಪ್ಲಾಂಟ್‌ ಒದಗಿಸಿದೆ ಹಾಗೂ ವೆನಾÉಕ್‌ ಆಸ್ಪತ್ರೆಗೆ ಮೆಡಿಕಲ್‌ ಉಪಕರಣಗಳನ್ನು ನೀಡಿದೆ. ಪೌಷ್ಟಿಕ ಆಹಾರದ ವಿತರಣೆಯಿಂದ ಕ್ಷಯ ಮುಕ್ತ ಸಮಾಜ ಮಾಡಲು ಸಹಕಾರಿಯಾಗಬಹು ದೆಂದು ತಿಳಿಸಿದರು.

ಕೆಐಒಸಿಎಲ್‌ ನಿರ್ದೇಶಕರು, ಸಿಆರ್‌ ಎಸ್‌ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿ ಭಾಗವಹಿಸಿದ್ದರು. ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ| ಬದ್ರುದ್ದೀನ್‌ ಎಂ.ಎನ್‌. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next