Advertisement

Indian Railways ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಿಂದ ಮನೆ ಬಾಗಿಲಿಗೆ ಔಷಧ ಸೇವೆ?

12:38 AM Dec 31, 2024 | Team Udayavani |

ಹೊಸದಿಲ್ಲಿ: ಭಾರತೀಯ ರೈಲ್ವೇ ಇಲಾಖೆಯ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಿಂದ ಔಷಧವನ್ನು ಮನೆ ಬಾಗಿಲಿಗೆ ತಲುಪಿಸಲು ಆನ್‌ಲೈನ್‌ ಫಾರ್ಮಸಿ ಸೇವೆ ನೀಡುವ ಸಂಸ್ಥೆಗಳೊಂದಿಗೆ ಮಾತುಕತೆಗೆ ರೈಲ್ವೇ ಇಲಾಖೆ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

Advertisement

ಈ ಉಪಕ್ರಮಕ್ಕಾಗಿ 2025ರ ಜನವರಿಯಲ್ಲಿ ಟೆಂಡರ್‌ ಕರೆಯಲಾಗುವುದು ಎನ್ನಲಾಗಿದೆ. ಈ ಉಪಕ್ರಮವು ಯಶ ಕಂಡಲ್ಲಿ ಇದನ್ನು ಎಲ್ಲ ಸರಕಾರಿ ಸ್ವಾಮ್ಯದ ಆಸ್ಪತ್ರೆಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯದ ಜತೆ ಮಾತುಕತೆ ನಡೆದಿದೆ ಎನ್ನಲಾ ಗಿದೆ. ರೈಲ್ವೇ ಇಲಾಖೆಯ ವ್ಯಾಪ್ತಿಯಲ್ಲಿ ದೇಶದಲ್ಲಿ ಪ್ರಸ್ತುತ 129 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1 ಕೋಟಿಯಷ್ಟು ರೈಲ್ವೆ ಸಿಬ್ಬಂದಿ ಇಲ್ಲಿ ಲಾಭ ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next