Advertisement
ನಿಯಮದ ಪ್ರಕಾರ ಕೇವಲ ಬಟ್ಟೆಯಿಂದ ಕೂಡಿದ ಬ್ಯಾನರ್ಗಳನ್ನು ಅಳವಡಿಸಲು ಮಾತ್ರ ಅವಕಾಶ. ಆದರೆ ನಗರದಲ್ಲಿ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ನಗರದ ಬಿಜೈ, ಲಾಲ್ಬಾಗ್, ಪಂಪ್ವೆಲ್, ಕೆಪಿಟಿ, ಬಲ್ಲಾಳ್ಬಾಗ್, ಹಂಪನಕಟ್ಟೆ, ಕ್ಲಾಕ್ಟವರ್ ಸಮೀಪ, ಪಿವಿಎಸ್, ನಂತೂರು, ಪಡೀಲ್, ಕುಲಶೇಖರ, ಉರ್ವ ಸ್ಟೋರ್, ಕೆ.ಎಸ್. ರಾವ್ ರಸ್ತೆ ಸಹಿತ ಹಲವು ಕಡೆಗಳಲ್ಲಿ ಪ್ಲಾಸ್ಟಿಕ್ನ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳು ಕಾಣಸಿಗುತ್ತವೆ.
ಪಾಲಿಕೆ ಅಧಿಕಾರಿಗಳು ಹೇಳುವ ಪ್ರಕಾರ ನಗರದಲ್ಲಿ ಬಟ್ಟೆಯಿಂದ ಕೂಡಿದ ಬ್ಯಾನರ್ಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಉಳಿದ ಬ್ಯಾನರ್ಗಳೆಲ್ಲ ಅನಧಿಕೃತ. ಸಾರ್ವಜನಿಕರು ಜಾಹೀರಾತು ಅಳವಡಿಸಬೇಕಾದರೆ ಪಾಲಿಕೆಯ ಕಂದಾಯ ವಿಭಾಗದಿಂದ ಅನುಮತಿ ಪಡೆದುಕೊಳ್ಳಬೇಕು. 6×5 ಅಳತೆಯ ಬಟ್ಟೆ ಬ್ಯಾನರ್ ಅನ್ನು 200 ರೂ.ನಂತೆ 15 ದಿನಗಳವರೆಗೆ ನಗರದಲ್ಲಿ ಅಳವಡಿಸಲು ಅವಕಾಶ ಇದೆ. ಬ್ಯಾನರ್ ಅನ್ನು ಪಾಲಿಕೆಗೆ ತಂದು ಅಲ್ಲಿ ಮುದ್ರೆ (ಸೀಲ್) ಹಾಕಿಸಿಕೊಳ್ಳಬೇಕು. ಯಾವುದೇ ಅಪಾಯಕಾರಿಯಲ್ಲದ ಪ್ರದೇಶದಲ್ಲಿ ಬ್ಯಾನರ್ ಅಳವಡಿಸಬೇಕು ಎಂಬ ನಿಯಮ ಪಾಲಿಸಬೇಕು. ಅವಧಿ ಮೀರಿದರೂ ತೆರವು ಮಾಡದ ಬ್ಯಾನರ್ಗಳು ಅನಧಿಕೃತವಾಗುತ್ತದೆ.
Related Articles
ನಗರವನ್ನು ಸುಂದರವನ್ನಾಗಿಸುವ ನಿಟ್ಟಿನಲ್ಲಿ ನಗರದ ಕೆಲವೊಂದು ಜಂಕ್ಷನ್ಗಳಲ್ಲಿ ಟ್ರಾಫಿಕ್ ಐಲ್ಯಾಂಡ್ ನಿರ್ಮಾಣ ಮಾಡಲಾಗಿದೆ. ಈ ಐಲ್ಯಾಂಡ್ಗಳು ಸದ್ಯ ಬ್ಯಾನರ್ ಅಳವಡಿಸುವ ತಾಣವಾಗಿ ಮಾರ್ಪಾಡಾಗಿದೆ. ನಗರದ ಪಂಪ್ವೆಲ್, ಕೆ.ಎಸ್. ರಾವ್ ರಸ್ತೆ ಸಹಿತ ಹಲವು ಕಡೆಗಳಲ್ಲಿನ ಟ್ರಾಫಿಕ್ ಐಲ್ಯಾಂಡ್ಗಳಲ್ಲಿ ರಸ್ತೆ ಸೂಚಕ ಫಲಕ ಹೊರತುಪಡಿಸಿ ಬ್ಯಾನರ್ಗಳೇ ತುಂಬಿಕೊಂಡಿದೆ. ಇದು ವಾಹನ ಸವಾರರಿಗೂ ಕಿರಿ ಕಿರಿ ಉಂಟಾಗುತ್ತಿದೆ.
Advertisement
ಪಾಲಿಕೆ ಎದುರೇ ಫ್ಲೆಕ್ಸ್ !ಅನಧಿಕೃತ ಬ್ಯಾನರ್, ಫ್ಲೆಕ್ಸ್ ಅಳವಡಿಸಿದರೆ ದುಬಾರಿ ದಂಡ ವಿಧಿಸುತ್ತಿರುವ ಪಾಲಿಕೆಯ ಎದುರಲ್ಲೇ ಬ್ಯಾನರ್ಗಳು ರಾರಾಜಿಸುತ್ತಿದೆ. ಅದರಲ್ಲೂ ಸಚಿವರು ಸಹಿತ ಸರಕಾರಿ ಕಾರ್ಯಕ್ರಮಗಳು ಬ್ಯಾನರ್ಗಳು ಇದ್ದು, ಇವುಗಳನ್ನು ಅಳವಡಿಸಲು ಅನುಮತಿ ನೀಡಿದ್ದು ಹೇಗೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.