Advertisement
ನಗರದ ಹೊರವಲಯದ ಯಡಪುರದಲ್ಲಿ ನಿರ್ಮಾಣ ಮಾಡಲಾಗಿರುವ 450 ಹಾಸಿಗೆಗಳ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ (ಸಿಐಎಂಎಸ್) ಬೋಧನಾ ಆಸ್ಪತ್ರೆಯನ್ನು ಮಧ್ಯಾಹ್ನ3.30 ಕ್ಕೆ ಉದ್ಘಾಟಿಸುವರು. ರಾಜ್ಯಪಾಲರಾದ ತಾವರಚಂದ್ ಗೆಹ್ಲೋಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಜನರಿಗೆ ಶೀಘ್ರವಾಗಿ ತಲುಪಿಸುವ ಗುರಿ ಹೊಂದಿದೆ ಮತ್ತು ಇದು ಜಿಲ್ಲೆಯ ಏಕೈಕ ತೃತೀಯ ಹಂತದ ಆರೋಗ್ಯ ವ್ಯವಸ್ಥೆ ಹೊಂದಿರುವ ಕೇಂದ್ರವಾಗಿದೆ. ಆರೋಗ್ಯ ರಕ್ಷಣೆ ವಿತರಣಾ ವ್ಯವಸ್ಥೆಯು ಜಿಲ್ಲೆಯ ಎಲ್ಲರಿಗೂ ಕೈಗೆಟುಕುವಂತೆ ಹೊಸ ಬೋಧನಾ ಆಸ್ಪತ್ರೆಯು ಮಾಡಲಿದೆ.
Related Articles
Advertisement
ಭಾರತೀಯ ವೈದ್ಯಕೀಯ ಮಂಡಳಿಯ ಮಾರ್ಗಸೂಚಿಗಳ ಅನ್ವಯ ರಾಜ್ಯ ಸರ್ಕಾರವು 2018-19ನೇ ಸಾಲಿನಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ನಿರ್ಮಿಸಲು ಅನುಮೋದನೆ ನೀಡಿತ್ತು. 450 ಹಾಸಿಗೆಗಳ ಬಹುಮಹಡಿ (ನೆಲ+ನಾಲ್ಕು), ಸಿಮ್ಸ್ ಬೋಧನಾ ಆಸ್ಪತ್ರೆ 30,728 ಚ.ಮಿ. ವಿಸ್ತೀರ್ಣ ಹೊಂದಿದ್ದು, ಇದನ್ನು 166.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಈ ಹೊಸ ಬೋಧನಾ ಆಸ್ಪತ್ರೆಯಲ್ಲಿ ಒಂಬತ್ತು ಆಧುನಿಕ ಆಪರೇಷನ್ ಥಿಯೇಟರ್‌ಗಳು, ಸುಸಜ್ಜಿತ 50 ಹಾಸಿಗೆ ಐಸಿಯು ವಾರ್ಡ್‌ಗಳು, 20 ಕೆಎಲ್ ದ್ರವ ಆಮ್ಲಜನಕ ಸಂಗ್ರಹ ಟ್ಯಾಂಕ್, 2,000 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಜನರೇಟರ್‌ಗಳು, ಕೇಂದ್ರಿತ ವೈದ್ಯಕೀಯ ಗ್ಯಾಸ್ ಪೈಪ್‌ಲೈನ್ ವ್ಯವಸ್ಥೆ, ಹೊರರೋಗಿಗಳು(ಒಪಿಡಿ) ಮತ್ತು ಒಳರೋಗಿಗಳು (ಐಪಿಡಿ) ವಿಭಾಗಗಳಲ್ಲದೆ 30 ಹಾಸಿಗೆಗಳ ತುರ್ತು ವಿಭಾಗ ಕೂಡ ಇವೆ