Advertisement
ಲಕ್ಷಾಂತರ ಮಂದಿ ಬಂದು ಹೋಗುವ ಬಸ್ ನಿಲ್ದಾಣದಲ್ಲಿ ಸಮರ್ಪಕವಾದ ಮೂಲ ಭೂತ ಸೌಕರ್ಯಗಳು ಇಲ್ಲದೆ ಬೆಟ್ಟಕ್ಕೆ ಬರುವ ಭಕ್ತರು ನಿತ್ಯ ಕಿರಿಕಿರಿ ಅನುಭವಿ ಸುವಂತಾಗಿದೆ. ನಿಲ್ದಾಣದಲ್ಲಿ ಮಹಿಳೆಯ ರಿಗೆ ಹಾಗೂ ಪುರುಷರಿಗೆ ತಲಾ ನಾಲ್ಕು ಶೌಚಾಲಗಳಿದ್ದು ಸಾಲದ್ದಾಗಿದೆ. ಪ್ರಾಧಿ ಕಾರಕ್ಕೆ ಸೇರಿದ ಶೌಚಾಲಯ ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದೆ. ಇನ್ನೂ ಕುಡಿಯುವ ನೀರಿನ ವ್ಯವಸ್ಥೆ ವಿಸ್ತರಿಸ ಬೇಕಾಗಿದೆ. ದೂರದೂರಿಂದ ಲಗೇಜ್ ಸಮೇತ ಬರುವ ಭಕ್ತಾದಿಗಳಿಗೆ ಲೆಗೇಜ್ ಇಡಲು ಸೂಕ್ತ ವ್ಯವಸ್ಥೆ ಸಹ ಇಲ್ಲವಾಗಿದೆ.
Related Articles
Advertisement
ವಿಶೇಷ ದಿನಗಳಲ್ಲಿ ಸ್ಥಳೀಯ ಪರದಾಟ: ವಿಶೇಷ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಬಸ್‌ಗಳು ಬೆಂಗಳೂರು, ಮೈಸೂರು, ಚಾಮರಾಜನಗರ ಇನ್ನಿತರೆ ಮುಖ್ಯ ನಗರಗಳಿಗೆ ತೆರಳುವವರನ್ನು ಮಾತ್ರ ಹತ್ತಿಸಿ ಕೊಳ್ಳುವುದರಿಂದ ಹನೂರು, ಕೊಳ್ಳೇಗಾಲ ತಾಲೂಕಿನ ಕೇಂದ್ರ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ಅನುಮತಿ ಇರುವ ಗ್ರಾಮಗಳ ಜನತೆಯನ್ನು ಹತ್ತಿಸಿಕೊಳ್ಳದೇ ಇರುವುದರಿಂದ ಸ್ಥಳೀಯರು ಪರದಾಡುವಂತಾಗಿದೆ.
ಹನೂರು ಕೇಂದ್ರ ಸ್ಥಾನಕ್ಕೆ ಪ್ರತ್ಯೇಕ ಬಸ್ ಸೌಲಭ್ಯ ಬೇಕು:
ವರ್ಷದ ಬಹುತೇಕ ತಿಂಗಳು ಮಾದಪ್ಪನ ಕ್ಷೇತ್ರದಲ್ಲಿ ವಿಶೇಷ ಪೂಜೆ, ಉತ್ಸವ, ರಥೋತ್ಸವ ಜರುಗುವುದರಿಂದ ಹನೂರು ಭಾಗದಿಂದಲೂ ಅಪಾರ ಭಕ್ತರು ಬೆಟ್ಟಕ್ಕೆ ಹೋಗಿ ಬರುವುದು ಸಂಪ್ರದಾಯ. ಮಲೆಮಹದೇಶ್ವರ ಬೆಟ್ಟಕ್ಕೆ ವಿಶೇಷ ದಿನಗಳಂದು ಬರುವ ಮತ್ತು ಹೋಗುವ ಬಸ್‌ಗಳು ಸ್ಥಳೀಯರನ್ನು ಹತ್ತಿಸಿಕೊಳ್ಳದ ಹಿನ್ನೆಲೆಯಲ್ಲಿ ಹನೂರು ಕೇಂದ್ರ ಸ್ಥಾನಕ್ಕೆ ಬರುವ ಮತ್ತು ಹೋಗುವ ಬಸ್‌ಗಳನ್ನು ಪ್ರತ್ಯೇಕವಾಗಿ ನಿಯೋಜಿಸಬೇಕೆಂದು ಹನೂರು ವಿಧಾನಸಭಾ ಕ್ಷೇತ್ರದ ಮಾದಪ್ಪನ ಭಕ್ತರು ಮತ್ತು ಜನತೆ ಒತ್ತಾಯವಾಗಿದೆ.
ಬಸ್ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ: ಬಹುಶಃ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕಾರ್ಯಗಳು ಶ್ರೀ ಮಲೆಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೀಮಿತವಾ ಗಿರುವಂತಿದ್ದು, ಇವರುಗಳ ಚಿತ್ತ ಬಸ್ ನಿಲ್ದಾಣಗಳತ್ತಲೂ ಹರಿಸಬೇಕಾಗಿದೆ. ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ತಮಿಳುನಾಡಿನಿಂದಲೂ ಅಪಾರ ಪ್ರಮಾಣದ ಭಕ್ತರು, ಪ್ರವಾಸಿಗರು ಬರುವುದರಿಂದ
ಬಸ್ ನಿಲ್ದಾಣವನ್ನೇ ಅಪ್‌ಗ್ರೇಡ್ ಮಾಡಿ, ಸೂಕ್ತ, ಹೋಟೆಲ್, ಪ್ರಯಾಣಿಕರ ಲೆಗೇಜ್ ರೂಮ್, ಸುಸಜ್ಜಿತ ಹೆಚ್ಚುವರಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಬಸ್‌ಗಳು ನಿಲ್ಲುವ ಸ್ಥಳ ವಿಸ್ತರಣೆ, ಹೆಚ್ಚುವರಿ ಬಸ್‌ಗಳು ಬಸ್ ಹತ್ತಲು ಸರತಿ ಸಾಲು, ಪೊಲೀಸ್ ಬಂದೋ ಬಸ್ತ್, ಹೆಚ್ಚುವರಿ ಸಿಸಿ ಕ್ಯಾಮೆರಾ ಇನ್ನಿತರೆ ಸೌಕರ್ಯಗಳನ್ನು ಒದಗಿಸಲು ಶೀಘ್ರ ಪ್ರಾಧಿಕಾರ ಮುಂದಾಗಬೇಕಿದೆ.
ಮಲೆಮಹದೇಶ್ವರ ಬೆಟ್ಟಕ್ಕೆ ವಿಶೇಷ ದಿನಗಳಂದು ಬರುತ್ತಿರುತ್ತೇವೆ. ಆದರೆ ಸಮರ್ಪಕ ಬಸ್ ಸೌಕರ್ಯ ಸಿಗುತ್ತಿಲ್ಲ. ಬಸ್‌ಗಳು ಹಾಗೂ ಶೌಚಾಲಯದ ತೊಂದರೇನೆ ಹೆಚ್ಚು.-ಮಹಾದೇವಸ್ವಾಮಿ, ಮಂಡ್ಯ, ಪ್ರಯಾಣಿಕ
ಮಾದಪ್ಪನ ದೇವರ ದರ್ಶನ ಪಡೆದು ಮುಂಜಾನೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಹನೂರಿಗೆ ತೆರಳಲು ಹೋದರೆ ಬಸ್‌ನವರು ಮೈಸೂರು, ಬೆಂಗಳೂರು ಮಾತ್ರ ಎನ್ನುತ್ತಾರೆ. ಹನೂರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು. -ನಂದಿನಿ, ಪ್ರಯಾಣಿಕರು
ಫಿಲ್ಟರ್ ನೀರಿನ ವ್ಯವಸ್ಥೆ ಇಲ್ಲದಿದ್ದರೂ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸಲಾಗುತ್ತಿದೆ. ಶುಚಿತ್ವಕ್ಕೆ ಒತ್ತು ನೀಡಲಾಗುವುದು. ಶಕ್ತಿ ಯೋಜನೆ ಬಳಿಕ ಹೆಚ್ಚುವರಿ ಬಸ್‌ಗಳ ಸೇವೆ ಒದಗಿಸಲಾಗಿದೆ. ಹನೂರು-ಕೊಳ್ಳೇಗಾಲ ಜನತೆಯ ಅನುಕೂಲಕ್ಕೆ ಮುಕ್ಕಾಲು ಗಂಟೆಗೊಮ್ಮೆ ಬಸ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಶೌಚಾಲಯ ಇನ್ನಿತರೆ ಸೌಕರ್ಯಗಳನ್ನು ಒದಗಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು.-ಚಿನ್ನಪ್ಪ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನಿಯಂತ್ರಕರು. ಮ.ಮ.ಬೆಟ್ಟ.
– ರಮೇಶ್ ಗುಂಡಾಪುರ