Advertisement
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ಮೊದಲ ಮೂರು ದಿನಗಳ ಭೇಟಿಗಾಗಿ ಗೋವಾಕ್ಕೆ ಆಗಮಿಸಿದ್ದಾರೆ. ಸ್ಮಾರಕಗಳ ಭೇಟಿ, ಪದವಿ ಪ್ರದಾನ ಸಮಾರಂಭಗಳು, ವಿಧಾನಸಭೆಯ ಸದಸ್ಯರಿಗೆ ಮಾರ್ಗದರ್ಶನ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿರುತ್ತದೆ. ರಾಷ್ಟ್ರಪತಿಗಳು ಮಂಗಳವಾರ ಪಣಜಿಯ ಆಜಾದ್ ಮೈದಾನಕ್ಕೆ ಭೇಟಿ ನೀಡಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ನಂತರ ಪಣಜಿ ಸಮೀಪದ ದೋನಾಪಾವುಲ್‍ನಲ್ಲಿರುವ ರಾಜಭವನಕ್ಕೆ ತೆರಳಿದ್ದು, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
Related Articles
ಗೋವಾಕ್ಕೆ ರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪಣಜಿಯಲ್ಲಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ರಾಷ್ಟ್ರಪತಿಗಳು ಮೂರು ದಿನಗಳ ಕಾಲ ರಾಜಭವನ ಆವರಣದಲ್ಲಿ ತಂಗಲಿದ್ದಾರೆ. ಹಾಗಾಗಿ ಮಾಂಡವಿ ನದಿ, ಅರಬ್ಬೀ ಸಮುದ್ರ , ಅರಮನೆ ಸಂಕೀರ್ಣ ಹಾಗೂ ಜುವಾರಿ ನದಿಯಲ್ಲಿ ನೀರಿನಲ್ಲಿ ಬೋಟಿಂಗ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
Advertisement
ಗೋವಾ ರಾಜಧಾನಿ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರೋನ್ ಬಳಕೆಯನ್ನು ನಿಷೇಧಿಸಲಾಗಿದೆ.ಡೊನಾ ಪೌಲಾದಲ್ಲಿರುವ ಪ್ರವಾಸಿ ತಾಣಕ್ಕೆ ಪ್ರವಾಸಿಗರು ಭೇಟಿ ನೀಡಲು ಹಲವಾರು ನಿರ್ಬಂಧ ಹೇರಲಾಗಿದೆ.