Advertisement

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

01:30 AM Nov 26, 2024 | Team Udayavani |

ಹೊಸದಿಲ್ಲಿ: ಭಾರತದ ಸಂವಿಧಾನಕ್ಕೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಹಳೆಯ ಸಂಸತ್‌ ಭವನದಲ್ಲಿ ಮಂಗಳವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಮುಂದಾಳತ್ವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಹಿಸಿಕೊಳ್ಳಲಿದ್ದು, ಅಲ್ಲೇ ಜಂಟಿ ಸದನವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

Advertisement

1949ರಲ್ಲಿ ಸಂವಿಧಾನ ಸಭೆಯು ಭಾರತೀಯ ಸಂವಿಧಾನ ಅಳವಡಿಸಿಕೊಂಡ ಸ್ಮರಣೆಗಾಗಿ 2015 ರಿಂದ ನ.26ರಂದು ಸಂವಿಧಾನ ದಿನ ಆಚರಿಸಲಾಗುತ್ತಿದೆ. ವರ್ಷವಿಡೀ ಸಂವಿಧಾನ ದಿನ ಆಚರಿಸಲು ವೆಬ್‌ಸೈಟ್‌ ರೂಪಿಸಲಾಗಿದೆ. ವಿಶೇಷ ಅಂಚೆ ಚೀಟಿ, ನಾಣ್ಯ ಬಿಡುಗಡೆ ಮಾಡಲಾಗುತ್ತದೆ ಎಂದು ಸರಕಾರತಿ ಳಿಸಿದೆ.

ನಮ್ಮ ಸಂವಿಧಾನ, ನಮ್ಮ  ಸ್ವಾಭಿಮಾನ ಪಾದಯಾತ್ರೆ
ಸಂವಿಧಾನ ಅಳವಡಿಕೆಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಮೈ ಭಾರತ್‌ ಆಯೋಜಿಸಿದ್ದ ನಮ್ಮ ಸಂವಿಧಾನ ನಮ್ಮ ಸ್ವಾಭಿಮಾನ 6 ಕಿ.ಮೀ. ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಡಾ|ಮನಸುಖ್‌ ಮಾಂಡವೀಯಾ ಸೇರಿ ಹಲವರು ಪಾಲ್ಗೊಂಡಿದ್ದರು. 10 ಸಾವಿರ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next