ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ತಮ್ಮ ಚೊಚ್ಚಲ ಫೈಟರ್ ಜೆಟ್ ಹಾರಾಟ ನಡೆಸಿದರು. ವಾಯುನೆಲೆಯಾದ ಅಸ್ಸಾಂನ ತೇಜ್ ಪುರ್ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಸುಖೋಯ್ 30 ಎಂಕೆಎಲ್ ಯುದ್ಧ ವಿಮಾನಕ್ಕೆ ಕಾಲಿಡುವ ಮೊದಲು ಅವರು ಗುರುತ್ವಾಕರ್ಷಣೆ ವಿರೋಧಿ ಸೂಟ್ ಧರಿಸಿ ಕಾಣಿಸಿಕೊಂಡರು.
ಪ್ರಸ್ತುತ ಅಸ್ಸಾಂ ಪ್ರವಾಸದಲ್ಲಿರುವ ರಾಷ್ಟ್ರಪತಿಗಳು ಮೂರು ಸೇನೆಗಳ ಸರ್ವೋಚ್ಚ ಕಮಾಂಡರ್ ಆಗಿದ್ದಾರೆ.
2009ರಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.
ಇದನ್ನೂ ಓದಿ:IPL 2023 ಸತತ ಸೋಲನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟು ತವರಿಗೆ ಹೊರಟ ಆಸೀಸ್ ಆಲ್ ರೌಂಡರ್
ಸುಖೋಯ್-30 ಎಂಕೆಎಲ್ ಟ್ವಿನ್-ಸೀಟರ್ ಮಲ್ಟಿರೋಲ್ ಫೈಟರ್ ಜೆಟ್ ಆಗಿದ್ದು, ಇದನ್ನು ರಷ್ಯಾದ ಸುಖೋಯ್ ಅಭಿವೃದ್ಧಿಪಡಿಸಿದೆ. ಭಾರತದ ಏರೋಸ್ಪೇಸ್ ದೈತ್ಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿಂದ ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ.