Advertisement
ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಈ ಕಾಲಘಟ್ಟದಲ್ಲಿ ಯಾಗ ಯಜ್ಞಾದಿಗಳು ನಡೆಯಬೇಕಾದ ಅಗತ್ಯವಿದೆ. ಆ ಪುಣ್ಯದ ಕೆಲಸ ಕೊಂಡೆವೂರಿನ ಪವಿತ್ರ ನೆಲದಲ್ಲಿ ಸಂಪನ್ನಗೊಳ್ಳುತ್ತಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾ ನಂದ ಸ್ವಾಮೀಜಿಯವರು ನುಡಿದರು.
Related Articles
Advertisement
ಗಗನಕ್ಕೆ ಚಿಮ್ಮಿದ ಪ್ರವಗ್ಯì ಅಗ್ನಿ ವೈಭವಯಾಗದ ಪ್ರವಗ್ಯì ವಿಧಿ ವಿಶಿಷ್ಟವಾಗಿದೆ. ಒಟ್ಟು ಯಾಗ ಪ್ರಕ್ರಿಯೆಯಲ್ಲಿ 8 ಬಾರಿ ಆಚರಿಸಲ್ಪಡುವ ಈ ವಿಧಾನದಲ್ಲಿ ದಿನಕ್ಕೆ ಎರಡು ಬಾರಿಯಂತೆ ಕ್ರಮ ಅನುಸರಿಸಲಾಗುತ್ತಿದೆ. ಶೇ. 50 ಹುತ್ತದ ಮಣ್ಣು, ಶೇ. 15 ಹಂದಿ ತಿವಿದ ಮಣ್ಣು, ಶೇ. 35 ಆವೆ ಮಣ್ಣಿಗೆ ಆಡಿನ ಹಾಲು, ಗರಿಕೆ, ಸೋಮಲತೆ, ಗಂಡು ಆಡಿನ ರೋಮ, ಕೃಷ್ಣ ಮೃಗದ ರೋಮವನ್ನು ಸೇರಿಸಿ ತಯಾರಿಸಿದ ಮೂರು ಪಾತ್ರೆಗಳು ಬಳಸಲಾಗುವುದು. ಇದನ್ನು ಮಹಾವೀರ ಪಾತ್ರೆ ಎನ್ನುತ್ತಾರೆ. ಇದರಲ್ಲಿ ತಯಾರಿಸಿದ ಆಜ್ಯಗಳನ್ನು ಬಳಸಿ ನಡೆಸುವ ಯಾಗ ಪ್ರಕ್ರಿಯೆ ಪ್ರವಗ್ಯì ಎನಿಸಿಕೊಂಡಿದ್ದು, ಚತುರ್ವೇದಗಳ ಮಂತ್ರೋಚ್ಚಾರಗಳೊಂದಿಗೆ 20 ನಿಮಿಷಗಳ ವಿಧಿವಿಧಾನದಲ್ಲಿ ಮೂರು ಬಾರಿ ನ್ಪೋಟ ಸಂಭವಿಸಿ ಅಗ್ನಿಯ ಕೆನ್ನಾಲಿಗೆ 5-6 ಅಡಿ ಎತ್ತರಕ್ಕೆ ಚಿಮ್ಮಿತು. ಯಾಗ ಪರಿಸರದಲ್ಲಿ ಕಟ್ಟಿದ ಗಿಡ್ಡ ತಳಿಯ ಹಸುವಿನ ಹಾಲನ್ನು ಕರೆದು ಬಳಸಲಾಯಿತು. ಅಗ್ನಿಹೋತ್ರಿಗಳ ಸಾನ್ನಿಧ್ಯ
ಸೋಮಯಾಗದ ಯಜಮಾನರಾದ ಮುಂಬಯಿ ರತ್ನಗಿರಿಯ ಅಗ್ನಿಹೋತ್ರಿಗಳಾದ ಅನಿರುದ್ಧ ವಾಜಪೇಯಿ ದಂಪತಿ ಸಾನ್ನಿಧ್ಯ ಮಹತ್ವ ಪಡೆದಿದೆ. ಭರತ ಖಂಡದಲ್ಲಿ ಒಟ್ಟು 26 ಅಗ್ನಿಹೋತ್ರಿಗಳು ಮಾತ್ರವಿದ್ದಾರೆ. ಕೊಂಡೆವೂರು ಶ್ರೀ ಕ್ಷೇತ್ರದ ಸೋಮಯಾಗಕ್ಕೆ ಅನಿರುದ್ಧ ವಾಜಪೇಯಿ ದಂಪತಿಯೇ ಯಜಮಾನತ್ವ ವಹಿಸಿದ್ದಾರೆ. ಸೋಮಯಾಗ ಭೂಮಿಗೆ ಸೋಮರಾಜನ ಆಗಮನ!
ಬುಧವಾರ ಬೆಳಗ್ಗೆ ಪಾರಂಪರಿಕ ಜೋಡು ಎತ್ತಿನಗಾಡಿಯಲ್ಲಿ ಸೋಮರಾಜನನ್ನು ಯಾಗ ಭೂಮಿಗೆ ಕರೆತರುವ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಸೋಮಯಾಗದ ಪ್ರಧಾನ ದೇವತೆಯಾದ ಸೋಮರಾಜನ ಉಪಸ್ಥಿತಿಯಲ್ಲಿ ವಿಧಿವಿಧಾನ ಗಳು ಏರ್ಪಡುವುದು ಇದರ ಹಿನ್ನೆಲೆಯಾಗಿದೆ. ಸುಬ್ರಹ್ಮಣ್ಯ ನಾಮಕರಾದ ಋತ್ವಿಜರು ಸೋಮ ರಾಜರ ಪೋಷಾಕಿನಲ್ಲಿ ಜೋಡಿ ಎತ್ತುಗಳು ಎಳೆದ ಗಾಡಿಯಲ್ಲಿ ಋಕ್, ಯಜುರ್, ಸಾಮ ಹಾಗೂ ಅಥರ್ವ ವೇದೋಕ್ತ ಮಂತ್ರೋಚ್ಚಾರಗಳೊಂದಿಗೆ ಸ್ವಾಗತಿಸಲಾಯಿತು.