Advertisement

ಮಾಲಿನ್ಯ ಪತ್ತೆಗೆ ತಂಡ ರಚಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ: ಬಾವಾ

05:00 AM Jul 21, 2017 | Team Udayavani |

ಸುರತ್ಕಲ್‌: ಸುರತ್ಕಲ್‌ ಸುತ್ತಮುತ್ತ  ಬೃಹತ್‌  ಕೈಗಾರಿಕೆಗಳಿಂದಾಗಿ ವಾಯು ಮಾಲಿನ್ಯ ಉಂಟಾಗಿರುವ ಹಿನ್ನೆಲೆಯಲ್ಲಿ ಶಾಸಕ ಮೊದಿನ್‌ ಬಾವಾ ನೇತೃತ್ವದಲ್ಲಿ ಗುರುವಾರ  ಬೈಕಂಪಾಡಿ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಸಭೆ ಜರಗಿತು. 

Advertisement

ಜನ ವಸತಿ ಪ್ರದೇಶದಲ್ಲಿ ಮುಂಜಾನೆ ದುರ್ವಾಸನೆ ಹರಡುತ್ತಿದ್ದು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ. ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಕಂಪೆನಿಗಳ ಪತ್ತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅ ಧಿಕಾರಿಗಳು ಮತ್ತು ಸುತ್ತಮುತ್ತಲಿನ ಕಂಪೆನಿ ಅ ಧಿಕಾರಿ ಗಳಿರುವ ತಂಡ ರಚಿಸಿ  ಕ್ಷಿಪ್ರವಾಗಿ ಕಾರ್ಯಾಚರಿಸಬೇಕು. ತಂಡದ ದೂರವಾಣಿ ಸಂಖ್ಯೆಯನ್ನು  ಸಾರ್ವಜನಿಕರಿಗೆ ನೀಡಬೇಕು  ಎಂದರು.

ಪೆಟ್‌ ಕೋಕ್‌ ನಿಷೇಧಿಸಿ
ಮಂಗಳೂರು ಭಾಗದಲ್ಲಿ ಎರಡು ಕಂಪೆನಿಗಳು ಪೆಟ್‌ ಕೋಕ್‌ ಬಳಸುತ್ತಿದ್ದು, ಇದನ್ನು ತತ್‌ಕ್ಷಣ ನಿಷೇ ಧಿಸಬೇಕು. ಇದರ ವಿರುದ್ಧ  ಮಾಲಿನ್ಯ ನಿಯಂತ್ರಣ ಮಂಡಳಿ ಅಧಿ ಕಾರಿಗಳು ಸೂಕ್ತ ಕ್ರಮ  ಕೈಗೊಳ್ಳ ಬೇಕಾಗಿದೆ ಎಂದರು.

ಕೆಐಎಡಿಬಿ ಅ ಧೀನದಲ್ಲಿರುವ  ಬೈಕಂಪಾಡಿ  ಕೈಗಾರಿಕೆ ವಲಯದ ರಸ್ತೆ ಡಾಮರು ಕಾಮಗಾರಿಗೆ 12 ಕೋ.ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭವಾಗಲಿದೆ. ಘನ ವಾಹನಗಳ ಸಂಚಾರದಿಂದ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಎಸ್‌ಟಿಪಿ ಘಟಕ ಸ್ಥಾಪಿಸಲು ಸುಮಾರು 80 ಕೋ. ರೂ. ಯೋಜನೆ ರೂಪಿಸಿದ್ದು, ಇದಕ್ಕಾಗಿ ನಿವೇಶನವನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಸ್‌ಟಿಪಿ ಘಟಕ ನಿರ್ಮಾಣವಾದಲ್ಲಿ ಬಗ್ಗುಂಡಿ ಕೆರೆಯ ಸ್ವತ್ಛತೆ ಸಾಧ್ಯವಾಗುತ್ತದೆ. ಸ್ಥಳೀಯ ಸಂಸ್ಥೆಗಳು ತಮ್ಮ ಸಿಎಸ್‌ಆರ್‌ ನಿಧಿಯನ್ನು ಸ್ಥಳೀಯ ಪ್ರದೇಶಾಭಿವೃದ್ಧಿಗೆ ಬಳಸಿಕೊಳ್ಳಬೇಕು  ಎಂದರು.

Advertisement

ಎನ್‌ಐಟಿಕೆಯ  ಪ್ರೊಫೆಸರ್‌, ದ.ಕ. ಪ್ರಕೃತಿ ವಿಕೋಪ ತಡೆ ಸಮಿತಿ  ತಜ್ಞರಾದ  ಶ್ರೀನಿಕೇತನ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜಶೇಖರ ಪುರಾಣಿಕ್‌, ಎಂಆರ್‌ಪಿಎಲ್‌,  ಬಿಎಎಸ್‌ಎಫ್‌, ಎಂಎಸ್‌ಇಝಡ್‌, ಎಂಸಿಎಫ್‌, ಕೆಐಒಸಿಎಲ್‌, ಎಚ್‌ಪಿಸಿಎಲ್‌ ಮತ್ತಿತರ ಸಂಸ್ಥೆಯ ಅ ಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯರಿಗೆ ಉದ್ಯೋಗ ನೀಡಿ
ಸ್ಥಳೀಯ ಕಂಪೆನಿಗಳು ಗುತ್ತಿಗೆ ಆಧಾರದಲ್ಲಿ ಉದ್ಯೋಗಾವಕಾಶ ನೀಡುತ್ತಿರುವ ಕಾರಣ ಉತ್ತರ ಭಾರತದ ಕಾರ್ಮಿಕರೇ ಹೆಚ್ಚಿದ್ದಾರೆ. ಸಣ್ಣ ಪುಟ್ಟ ಗುತ್ತಿಗೆ ಸ್ಥಳೀಯರಿಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಈ ಬಗ್ಗೆ ಕಂಪೆನಿಗಳು ತಮ್ಮ ನೀತಿಯನ್ನು  ಪುನರ್‌ ವಿಮರ್ಶಿಸಿ ಸ್ಥಳೀಯ ಪ್ರತಿಭಾವಂತರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಬೇಕು.
– ಮೊದಿನ್‌ ಬಾವಾ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next