Advertisement

ಆಸ್ಪತ್ರೆಗೆ ಗರ್ಭಿಣಿ ದಾಖಲು

11:08 PM Mar 16, 2020 | Lakshmi GovindaRaj |

ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಶಂಕಿತ ಕೊರೊನಾ ವೈರಸ್‌ ಬಾಧಿತ ಗರ್ಭಿಣಿಯೊಬ್ಬರು ದಾಖಲಾಗಿದ್ದಾರೆ. ಮಾ.13ರಂದು ದುಬೈಯಿಂದ ಆಗಮಿಸಿದ ಮಹಿಳೆ (26) ಕೆಮ್ಮು, ಶೀತ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದರು. ಶಿವಮೊಗ್ಗಕ್ಕೆ ಮಹಿಳೆಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

Advertisement

ಮಣಿಪಾಲದ ವಿಶೇಷ ವಾರ್ಡ್‌ನಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. ಕೊರೊನಾ ಶಂಕೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಕಾಪು ವ್ಯಕ್ತಿ ಬಿಡುಗಡೆಗೊಂಡಿದ್ದಾರೆ. ಶಿರ್ವದವರಿಗೆ ಇದ್ದ ಹೊಟ್ಟೆ ನೋವು, ಭೇದಿಗೆ ಸಂಬಂಧಿಸಿ ಚಿಕಿತ್ಸೆ ನೀಡಿ ಗುಣಮುಖರಾದ ಕಾರಣ ಬಿಡುಗಡೆಗೊಂಡರು. ಸಾಗರದ ಮಹಿಳೆಗೆ ಇತರ ಸಮಸ್ಯೆ ಇರುವುದರಿಂದ ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next