Advertisement

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

12:33 AM Dec 27, 2024 | Team Udayavani |

ಮಂಗಳೂರು: ಶಾರ್ಜಾ ಹೆಲ್ತ್‌ಕೇರ್‌ ಸಿಟಿಯಲ್ಲಿ ತುಂಬೆ ಸೈಕಿಯಾಟ್ರಿಕ್‌ ಆ್ಯಂಡ್‌ ರಿಹ್ಯಾಬಿಲಿಟೇಷನ್‌ ಹಾಸ್ಪಿಟಲ್‌ ಅನ್ನು ಸ್ಥಾಪಿಸಲಾಗುವುದು.

Advertisement

ಶಾರ್ಜಾ ಹೆಲ್ತ್‌ ಕೇರ್‌ ಸಿಟಿ, ಶಾರ್ಜಾ ಹೆಲ್ತ್‌ ಅಥಾರಿಟಿ ಸಹಭಾಗಿತ್ವದಲ್ಲಿ ತುಂಬೆ ಸಮೂಹ ಸಂಸ್ಥೆ ಸೇರಿಕೊಂಡು ಈ ಆಸ್ಪತ್ರೆಯನ್ನು ನಿರ್ಮಿಸಲಿದ್ದು, ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಅತ್ಯಾಧುನಿಕ ಚಿಕಿತ್ಸೆ, ಸಮಗ್ರ ಪುನರುಜ್ಜೀವನ ಕಾರ್ಯಕ್ರಮಗಳು, ಸಮಗ್ರ ದೂರ-ಆರೋಗ್ಯ ಪರಿಹಾರ ಹಾಗೂ ನಿಖರ ಚಿಕಿತ್ಸೆಯನ್ನು ಈ ಆಸ್ಪತ್ರೆ ನೀಡಲಿದೆ. ಮನಃಶಾಸ್ತ್ರಜ್ಞರು, ಮನೋಚಿಕಿತ್ಸಕರು, ಸಲಹೆಗಾರರು, ಕುಟುಂಬ ವೈದ್ಯರು, ಔದ್ಯೋಗಿಕ ತಜ್ಞರನ್ನು ಈ ಆಸ್ಪತ್ರೆ ಹೊಂದಿರಲಿದ್ದು, ರೋಗಿಗಳಿಗೆ ವೈಯುಕ್ತಿಕ ಕೇಂದ್ರಿತ ಚಿಕಿತ್ಸೆ ದೊರೆಯಲಿದೆ.

ಮೊದಲ ಹಂತದಲ್ಲಿ 60 ಹಾಸಿಗೆಗಳ ಹಾಗೂ ಒಟ್ಟು 120 ಹಾಸಿಗೆಯ ಆಸ್ಪತ್ರೆ ಇದಾಗಿರಲಿದೆ. ಈ ಕುರಿತ ಒಪ್ಪಂದಕ್ಕೆ ತುಂಬೆ ಸಮೂಹ ಸಂಸ್ಥೆ ಮುಖ್ಯಸ್ಥ ಡಾ| ತುಂಬೆ ಮೊಯ್ದಿàನ್‌ ಹಾಗೂ ಶಾರ್ಜಾ ಹೆಲ್ತ್‌ಕೇರ್‌ ಸಿಟಿಯ ಡಾ| ಆಬ್ಧೆಲಜೀಝ್ ಸಹಿ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next