Advertisement

Udupi: ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ನಾಪತ್ತೆ

12:55 AM Dec 09, 2024 | Team Udayavani |

ಉಡುಪಿ: ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ವಾರ್ಡಿನಿಂದ ಕಾಣೆಯಾದ ಘಟನೆ ನಡೆದಿದೆ.

Advertisement

ಕಮಲಶಿಲೆ ನಿವಾಸಿ ಸುರೇಶ್‌ ಮನೆಯಲ್ಲಿ ಕುಳಿತುಕೊಂಡಿದ್ದವರು ಒಮ್ಮೆಲೆ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಆ್ಯಂಬುಲೆನ್ಸ್‌ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯ ಪುರುಷರ ವಾರ್ಡ್‌ನಲ್ಲಿ ಅವರೊಬ್ಬರೆ ಇದ್ದರು. ಡಿ. 5ರಂದು ಬೆಳಗ್ಗೆ 6ಕ್ಕೆ ಸಂಬಂಧಿಕರು ಆಸ್ಪತ್ರೆಗೆ ಬಂದು ನೋಡುವಾಗ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ ಅಲ್ಲಿರಲಿಲ್ಲ. ಆಸ್ಪತ್ರೆ ಸಿಬಂದಿಗೂ ವಿಷಯ ಗೊತ್ತಿರಲಿಲ್ಲ. ಈ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next