Advertisement

ಸೂಕ್ತವಾದುದನ್ನೇ ಪ್ರಾರ್ಥಿಸಿ: ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ

12:34 AM Mar 07, 2020 | Sriram |

ಉಡುಪಿ: ದೇವರಿಗೆ ಸಮನಾದ ಪ್ರಾರ್ಥನೆಯನ್ನು ಮಾತ್ರ ಸಲ್ಲಿಸ ಬೇಕು ಎಂದು ಶೃಂಗೇರಿ ಶಾರದಾಪೀಠದ ಕಿರಿಯ ಯತಿ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

Advertisement

ಕುಂಜಿಬೆಟ್ಟು ಶ್ರೀ ಶಾರದಾ ದೇವಸ್ಥಾನದಲ್ಲಿ ಶಾರದಾ ದೇವಿಗೆ ಶುಕ್ರವಾರ ಕುಂಭಾಭಿಷೇಕ ನೆರವೇರಿಸಿ ಆಶೀರ್ವ ಚನ ನೀಡಿದ ಅವರು,, ಭಗವದನುಗ್ರಹ ಎಲ್ಲರಿಗೂ ಆವಶ್ಯಕ. ಉಳಿದದ್ದೆಲ್ಲವೂ ಅದರ ಹಿಂದೆ ಬರುತ್ತದೆ. ಹೀಗಾಗಿ ಅದು ಬೇಕು, ಇದು ಬೇಕು ಎಂಬ ಸಣ್ಣತನದ ಪ್ರಾರ್ಥನೆ ಸಲ್ಲಿಸಬಾರದು. ನಾವು ಏನನ್ನು ಪ್ರಾರ್ಥಿಸುತ್ತೇವೋ ಅವುಗಳನ್ನು ದೇವರು ಸಮಯ ಬಂದಾಗ ಅನುಗ್ರಹಿಸುತ್ತಾನೆ. ಪ್ರಾರ್ಥನೆ ಕರ್ತವ್ಯ ಎಂದರು.

ಸಾಮಾನ್ಯ-ವಿಶೇಷ ಧರ್ಮ
ಸಾಮಾನ್ಯ ಧರ್ಮ ಮತ್ತು ವಿಶೇಷಧರ್ಮ ಎಂಬ ಎರಡು ವಿಧಗಳಿವೆ.ಅಹಿಂಸೆ, ಸತ್ಯ, ಅಸ್ತೇಯ, ಶೌಚ, ಇಂದ್ರಿಯ ನಿಗ್ರಹಗಳು ಸಾಮಾನ್ಯ ಧರ್ಮ. ಇವುಗಳನ್ನು ಎಲ್ಲರೂ ಪಾಲಿಸಬೇಕು. ಬ್ರಹ್ಮಚಾರಿ, ಗೃಹಸ್ಥ, ಸನ್ಯಾಸಿಗಳಿಗೆ ಅವರವರ ಪ್ರತ್ಯೇಕ ನಿಯಮಗಳಿದ್ದು, ಇದು ವಿಶೇಷ ಧರ್ಮ ಎಂದು ಸ್ವಾಮೀಜಿ ಹೇಳಿದರು.

ಬಿನ್ನವತ್ತಳೆ ಸಮರ್ಪಣೆ
ಉಡುಪಿ ಸ್ಥಾನಿಕ ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಡಾ| ವೈ. ಸುದರ್ಶನ ರಾವ್‌ ಸ್ವಾಗತಿಸಿ, ನಿರ್ದೇಶಕ ಕೃಷ್ಣಕುಮಾರ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು. ಸಲಹೆಗಾರ ಸಿ.ಎಸ್‌. ರಾವ್‌ ವಂದಿಸಿದರು. ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ್‌ ಅವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಮಂಜುನಾಥ ಹೆಬ್ಟಾರ್‌, ಉಪಾಧ್ಯಕ್ಷ ಕೃಷ್ಣಮೂರ್ತಿ ರಾವ್‌, ಕಾರ್ಯದರ್ಶಿ ಅರವಿಂದ ಕುಮಾರ್‌, ಕೋಶಾಧಿಕಾರಿ ಜಯರಾಮ ರಾವ್‌, ಸ್ವಾಗತ ಸಮಿತಿ ಸಂಚಾಲಕ ವಿಶ್ವನಾಥ ಶ್ಯಾನುಭಾಗ್‌, ಸಲಹೆಗಾರ ಪ್ರಫ‌ುಲ್ಲಚಂದ್ರ ರಾವ್‌, ವಿವಿಧೆಡೆಗಳ ಸ್ಥಾನಿಕ ಬ್ರಾಹ್ಮಣ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಸ್ವಾಮೀಜಿ ಕೇರಳಕ್ಕೆ ತೆರಳಿದರು.

ಜಗತ್ತಿಗೆ ಶಂಕರರ ಸಂದೇಶ
ಶಂಕರಾಚಾರ್ಯರು ಸನಾತನ ಧರ್ಮ ಶಿಥಿಲವಾದಾಗ ನಾಸ್ತಿಕರ ಜತೆ ವಾದ ಮಾಡಿ ಸೂಕ್ತ ಮಾರ್ಗ ತೋರಿಸಿದರು. ಅವರು ಪ್ರಪಂಚಕ್ಕೆ ಬೇಕಾದ ಸಂದೇಶವನ್ನು ನೀಡಿದರು ಎಂದು ಸ್ವಾಮೀಜಿ ಹೇಳಿದರು.

Advertisement

ಧರ್ಮಾಧಿಕಾರಿ ನಿಯುಕ್ತಿ
ಶೃಂಗೇರಿ ಮಠ ಮತ್ತು ಶಿಷ್ಯ ವರ್ಗದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಲು ಹಿರಿಯ ವಿದ್ವಾಂಸ ಪಾವಂಜೆ ವಾಗೀಶ ಶಾಸಿŒಗಳನ್ನು ಉಡುಪಿ ಪ್ರಾಂತ್ಯದ ಧರ್ಮಾಧಿಕಾರಿಯಾಗಿ ಗುರುಗಳು ನಿಯೋಜಿಸಿ ದ್ದಾರೆಂದು ಶ್ರೀವಿಧುಶೇಖರ ಭಾರತೀ ಸ್ವಾಮೀಜಿಯವರು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next