ಬಾರಕೂರು: ವೈಜ್ಞಾನಿಕ ಹಾಗೂ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಕುಲಕಸುಬನ್ನು ಮುಂದಿನ ಪೀಳಿಗೆಯವರಲ್ಲಿ ಬೆಳೆಸುವ ಬಗ್ಗೆ ತರಬೇತಿ ನೀಡಿದರೆ ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಸಾಧ್ಯ. ಈ ಬಗ್ಗೆ ಸಮಾಜ ಬಾಂಧವರು ಚಿಂತನೆ ನಡೆಸಬೇಕಾಗಿದೆ ಎಂದು ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಆವರು ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ರಂಗಪೂಜಾದಿ ದೀಪೋತ್ಸವ, ರಥೋತ್ಸವ ಸಂದರ್ಭದಲ್ಲಿ ಜರಗಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಶಿಲ್ಪ ಹಾಗೂ ಬ್ರಾಹ್ಮಣ್ಯವನ್ನು ಉಳಿಸಿಕೊಂಡು ಬಂದ ಸಮಾಜ ಇದ್ದರೆ ಆದು ವಿಶ್ವ ಬ್ರಾಹ್ಮಣ ಸಮಾಜ ಮಾತ್ರ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಹಿಂದಿನ ಪರಂಪರೆ, ದಿವ್ಯ ಶಿಲ್ಪ ಹಾಗೂ ಬ್ರಾಹ್ಮಣ್ಯವನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.
ದೇವಸ್ಥಾನದ ಆಡಳಿತ ಧರ್ಮದರ್ಶಿ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಆಧ್ಯಕ್ಷತೆ ವಹಿಸಿದ್ದರು.
ಬೆಂಗಳೂರಿನ ಶ್ರೀ ವಿಶ್ಚಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ| ಬಿ.ಎಂ.ಉಮೇಶ್ ಕುಮಾರ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬೆಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ| ಎಸ್. ಆರ್. ಹರೀಶ್ ಆಚಾರ್ಯ ಜಲಕದ ಕಟ್ಟೆ, ದಾನಿ ರಾಘವೇಂದ್ರ ಆಚಾರ್ಯ ಹಂದಟ್ಟು, ದೇವಸ್ಥಾನದ ಮೂರನೇ ಮೊಕ್ತೇಸರ ಎಂ.ಸುಬ್ರಾಯ ಆಚಾರ್ಯ ಮಣೂರು, ಆಡಳಿತ ಸಮಿತಿ ಸದಸ್ಯರಾದ ಪ್ರಭಾಕರ ಆಚಾರ್ಯ ಬಂಡೀಮಠ, ಕೆ.ನಾರಾಯಣ ಆಚಾರ್ಯ ಕೊಂಜಾಡಿ, ರಮಾನಂದ ಆಚಾರ್ಯ ಕುಂದಾಪುರ, ಜಯಕರ ಆಚಾರ್ಯ ಕರಂಬಳ್ಳಿ ಗ್ರಾಮ ಮೊಕ್ತೇಸರರ ಪ್ರತಿನಿಧಿ ವಿಶ್ವನಾಥ ಆಚಾರ್ಯ ಕಲ್ಗೊಳಿ ಬೈದಬೆಟ್ಟು ಮುಖ್ಯ ಅತಿಥಿಗಳಾಗಿದ್ದರು.
ಹಂದಟ್ಟು ರಾಧಿಕಾ ಆಚಾರ್ಯ, ರಾಘವೇಂದ್ರ ಆಚಾರ್ಯ ಕೋಟ ಹಂದಟ್ಟು , ಡಾ| ಎಸ್ .ಆರ್. ಹರೀಶ್ ಆಚಾರ್ಯ ಜಲಕದಕಟ್ಟೆ, ಹಿರಿಯ ಗ್ರಾಮ ಮೊಕ್ತೇಸರರಾದ ಎ.ಪಿ.ಕೇಶವ ಆಚಾರ್ಯ ಆರಳಿಸುರಳಿ, ಮಂಜುನಾಥ ಆಚಾರ್ಯ ಕೊರ್ಗಿ, ಕೃಷ್ಣಯ್ಯ ಆಚಾರ್ಯ ಬೇಳೂರು ಅವರನ್ನು ಸಮ್ಮಾನಿಸಲಾಯಿತು. ಪ್ರಕಾಶ್ ಆಚಾರ್, ನಾರಾಯಣ ಆಚಾರ್ಯ, ವಿಶ್ವನಾಥ ಆಚಾರ್ಯ, ಸುಬ್ರಾಯ ಆಚಾರ್ಯ ಮಣೂರು ಅವರು ಸಮ್ಮಾನಿತರನ್ನು ಪರಿಚಯಿಸಿದರು.
ಪ್ರವೀಣ್ ಆಚಾರ್ಯ ರಂಗನಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾತಿ ಅಂಬಲಪಾಡಿ ನಿರೂಪಿಸಿದರು. ಜಯಕರ ಆಚಾರ್ಯ ವಂದಿಸಿದರು.