Advertisement

Pratham; ‘ಕರ್ನಾಟಕದ ಅಳಿಯ’ನ ಹಾಡು ಬಂತು

06:03 PM Sep 22, 2023 | Team Udayavani |

ನಟ ಪ್ರಥಮ್‌ ನಾಯಕನಾಗಿ ಅಭಿನಯಿಸಿ ಮತ್ತು ನಿರ್ದೇಶಿಸಿರುವ “ಕರ್ನಾಟಕದ ಅಳಿಯ’ ಸಿನಿಮಾದ ಹಾಡು ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. “ಮುದ್ದಿನ ಅಳಿಯ’ ಸಿನಿಮಾದ ಖ್ಯಾತಿಯ ನಟ ಶಶಿಕುಮಾರ್‌ “ಕರ್ನಾಟಕದ ಅಳಿಯ’ ಸಿನಿಮಾದ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

Advertisement

“ಮನಸಿಗೆ ಹಿಡಿಸಿದನು ಇವನು…’ ಎಂಬ ಸಾಲುಗಳಿಂದ ಶುರುವಾಗುವ ಈ ರೊಮ್ಯಾಂಟಿಕ್‌ ಗೀತೆ ಪ್ರದ್ಯೋತನ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದು, ಕೆ. ರಾಮ ನಾರಾಯಣ್‌ ಸಾಹಿತ್ಯವಿದ್ದು, ಅದಿತಿ ಸಾಗರ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಇದೇ ವೇಳೆ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ ಪ್ರಥಮ್, “ಸಿನಿಮಾದ ಪ್ರಚಾರದ ಭಾಗವಾಗಿ ವಿದೇಶದಲ್ಲಿ ಚಿತ್ರೀಕರಿಸಲಾದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ವಾಮಾಚಾರ ಕಥಾಹಂದರದ ಕುರಿತಾದ ಸಿನಿಮಾವಾಗಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಇಂಥದ್ದೇ ವಿಷಯದ ಮೇಲೆ “ತುಳಸಿದಳ’ ಎಂಬ ಸಿನಿಮಾ ಬಂದಿತ್ತು. ಬಹುಶಃ ಅದಾದ ನಂತರ ವಾಮಾಚಾರದ ಕುರಿತು ಸುದೀರ್ಘ‌ವಾಗಿ ಮೂಡಿ ಬಂದಿರುವ ಸಿನಿಮಾ ಇದೇ ಇರಬಹುದು. ಸದ್ಯ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಆದಷ್ಟು ಬೇಗ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದ್ದೇವೆ’ ಎಂದು ವಿವರಣೆ ನೀಡಿದರು.

“ಕರ್ನಾಟಕದ ಅಳಿಯ’ ಸಿನಿಮಾದಲ್ಲಿ ನಟ ಪ್ರಥಮ್‌ಗೆ ಅಕ್ಷಿತಾ ಬೋಪಯ್ಯ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್‌, ಜ್ಯೋತಿ, ಸ್ಪರ್ಶ ರೇಖಾ, ಆದ್ಯಾ ಪೂಜಾರಿ, ಓಂ ಪ್ರಕಾಶ್‌ ರಾವ್‌, ರಾಮಕೃಷ್ಣ, ಕೋಟೆ ಪ್ರಭಾಕರ್‌, ಶ್ರೀಧರ್‌, ವಿ. ಮನೋಹರ್‌, ರಮೇಶ್‌ ಭಟ್‌ ಮತ್ತಿತರರು ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next