ಮುಂಬಯಿ: ಕೊ*ಲೆ ಪ್ರಕರಣವೊಂದರಲ್ಲಿ ಖ್ಯಾತ ಬಾಲಿವುಡ್ ನಟಿ (Bollywood Actress)ಯ ಸಹೋದರಿಯನ್ನು ಬಂಧಿಸಿರುವ ಘಟನೆ ಕುರಿತು ವರದಿಯಾಗಿದೆ.
ಬಾಲಿವುಡ್ನ ಖ್ಯಾತ ನಟಿಯಾಗಿರುವ ನರ್ಗೀಸ್ ಫಕ್ರಿ (Nargis Fakhri) ಅವರ ಕಿರಿಯ ಸಹೋದರಿಯನ್ನು ಕೊಲೆ ಪ್ರಕರಣವೊಂದರಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.
ಏನಿದು ಘಟನೆ?: ನರ್ಗೀಸ್ ಫಕ್ರಿ ಅವರ ಕಿರಿಯ ಸಹೋರಿ ಆಲಿಯಾ ಫಕ್ರಿ (Aliya Fakhri) ಅವರು ನ್ಯೂಯಾರ್ಕ್ ಮೂಲದ ಎಡ್ವರ್ಡ್ ಜೇಕಬ್ಸ್ (35) ನನ್ನು ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ನಡುವೆ ಅನಸ್ತಾಸಿಯಾ ಎಟಿಯೆನ್ನೆ(33) ಎನ್ನುವ ಯುವತಿ ಎಂಟ್ರಿ ಆಗಿದ್ದಳು. ಈ ಕಾರಣದಿಂದ ಆಲಿಯಾಳಿಂದ ಜೇಕಬ್ಸ್ ಅಂತರ ಕಾಯ್ದುಕೊಂಡಿದ್ದ. ಈ ವಿಚಾರವಾಗಿ ಆಲಿಯಾ – ಜೇಕಬ್ಸ್ ನಡುವೆ ಹಲವು ಬಾರಿ ಮಾತುಕತೆ ನಡೆದಿದೆ. ಆಲಿಯಾ ಜೇಕಬ್ಸ್ ನನ್ನು ಬಿಟ್ಟುಕೊಡಲು ಸಿದ್ದರಿಲಿಲ್ಲ. ಜೇಕಬ್ಸ್ ಆಲಿಯಾನಿಂದ ದೂರವಾಗಿದ್ದರೂ, ಆಲಿಯಾ ಜೇಕಬ್ಸ್ ಬೆನ್ನ ಹಿಂದೆಯೇ ಬಿದ್ದಿದ್ದಳು ಎಂದು ಹೇಳಲಾಗಿದೆ.
ಇತ್ತೀಚೆಗೆ ಜೇಕಬ್ಸ್ ಅವರ ಎರಡು ಅಂತಸ್ತಿನ ಗ್ಯಾರೇಜ್ ಗೆ ಬಂದಿದ್ದ ಆಲಿಯಾ, ಒಳಗಿದ್ದ ಜೇಕಬ್ಸ್ ಮತ್ತು ಆತನ ಗೆಳತಿಗೆ “ನೀವು ಸಾಯಲಿದ್ದೀರಿ” ಎಂದು ಹೇಳಿ ಕೆಳಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ್ದಾಳೆ. ಪರಿಣಾಮ ಗ್ಯಾರೇಜ್ ಒಳಗಿದ್ದ ಜೇಕಬ್ಸ್ ಮತ್ತು ಆತನ ಗೆಳತಿ ಸುಟ್ಟ ಗಾಯದಿಂದ, ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Sandalwood: ಉಪೇಂದ್ರ ʼಯು-ಐʼ ಜತೆ ʼಮ್ಯಾಕ್ಸ್ʼ ಕ್ಲ್ಯಾಶ್: ಕಿಚ್ಚ ಹೇಳಿದ್ದೇನು?
ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಆಲಿಯಾ ಫ್ರಕ್ರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇಬ್ಬರನ್ನು ಕೊಲೆ ಮಾಡಿದ ಆರೋಪ ಇರುವುದರಿಂದ ಕೋರ್ಟ್ ಅಲಿಯಾ ಫಕ್ರಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಜೇಕಬ್ಸ್ ತಾಯಿ ಪ್ರತಿಕ್ರಿಯೆ ನೀಡಿದ್ದು, ಆಲಿಯಾ – ಜೇಕಬ್ಸ್ ಒಂದು ವರ್ಷದ ಹಿಂದೆಯೇ ಬ್ರೇಕಪ್ ಮಾಡಿಕೊಂಡಿದ್ದರು. ಅವಳಿಂದ ಜೇಕಬ್ಸ್ ದೂರವಾಗಿದ್ದ. ಅದನ್ನು ಆತ ಆಕೆಯ ಬಳಿಯೂ ಹೇಳಿದ್ದ ಆದರೆ ಆಲಿಯಾ ಆತನನ್ನು ಫಾಲೋ ಮಾಡುತ್ತಿದ್ದಳು ಎಂದಿದ್ದಾರೆ.
:ನನ್ನ ಮಗಳು ಕೊಲ್ಲುವ ಮನಸ್ಥಿತಿ ಇರುವ ಹುಡುಗಿಯಲ್ಲ. ಅವಳು ಎಲ್ಲರ ಬಗ್ಗೆ ಕಾಳಜಿ ವಹಿಸುವ ವ್ಯಕ್ತಿ” ಎಂದು ಆಲಿಯಾ ಅವರ ತಾಯಿ ಹೇಳಿದ್ದಾರೆ.
ಆಲಿಯಾಳನ್ನು ಸದ್ಯ ನ್ಯೂಯಾರ್ಕ್ ನಗರದ ಅತಿದೊಡ್ಡ ಜೈಲು ರೈಕರ್ಸ್ ದ್ವೀಪದಲ್ಲಿ ಬಂಧನದಲ್ಲಿಡಲಾಗಿದೆ. ಆರೋಪಗಳು ಇನ್ನು ಸಾಬೀತಾಗಿಲ್ಲ. ಒಂದು ವೇಳೆ ಆರೋಪ ಸಾಬೀತಾದರೆ ಆಕೆಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದೆಂದು ವರದಿ ತಿಳಿಸಿದೆ.
ಸದ್ಯ ಈ ಬಗ್ಗೆ ನಟಿ ನರ್ಗೀಸ್ ಫಕ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ʼರಾಕ್ಸ್ಟಾರ್ʼ ಮೂಲಕ ಬಿಟೌನ್ಗೆ ಎಂಟ್ರಿ ಕೊಟ್ಟ ನಟಿ ನರ್ಗಿಸ್ ಫಕ್ರಿ , ಸದ್ಯ ಹೌಸ್ ಫುಲ್ -5 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.