Advertisement

Distribution: ಕೆಎಸ್ಸಾರ್ಟಿಸಿ ನಿವೃತ್ತ ಸಿಬಂದಿಗೆ 224 ಕೋಟಿ ರೂ. ಪಾವತಿ

04:41 AM Dec 22, 2024 | Team Udayavani |

ಬೆಂಗಳೂರು: ಸಾರಿಗೆ ನಿಗಮಗಳ 2020ರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನಿವೃತ್ತ ಸಿಬಂದಿಗೆ ನೀಡಬೇಕಾಗಿದ್ದ ಬಾಕಿ ಹಣವನ್ನು ಶನಿವಾರ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕರಾರಸಾ ನಿಗಮದ ಕೇಂದ್ರ ಕಚೇರಿಯಲ್ಲಿ ಸಾಂಕೇತಿಕವಾಗಿ ಮೂವರಿಗೆ ಬಾಕಿ ಉಪಧನ ಹಾಗೂ ಗಳಿಕೆ ರಜೆ ನಗದೀಕರಣ ಮೊತ್ತದ ಚೆಕ್‌ ವಿತರಿಸಿದರು.

Advertisement

ಚೆಕ್‌ ವಿತರಿಸಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಈ ಹಿಂದೆ ನೌಕರರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಅವರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿ, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿತ್ತು. ಈ ಪೈಕಿ ನಾಲ್ಕು ಸಾರಿಗೆ ನಿಗಮಗಳ 1,308 ಚಾಲನಾ ಮತ್ತು ತಾಂತ್ರಿಕ ಸಿಬಂದಿ ಅಂತರ ನಿಗಮ ವರ್ಗಾವಣೆಯ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಎಲ್ಲ 11,694 ನಿವೃತ್ತ ಸಿಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತವನ್ನು ಅಧಿವೇಶನದ ಅನಂತರ ಬಿಡುಗಡೆಗೊಳಿಸುವುದಾಗಿ ನೀಡಿದ್ದ ಭರವಸೆಯಂತೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.

ಆರ್‌ಟಿಜಿಎಸ್‌, ಚೆಕ್‌ ಮುಖಾಂತರ ವಿತರಣೆ
4 ಸಾರಿಗೆ ನಿಗಮಗಳಲ್ಲಿ 2020ರ ಜ. 1ರಿಂದ 2023ರ ಫೆ. 28ರ ವರೆಗಿನ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತಿ ಹೊಂದಿರುವ ಸುಮಾರು 11,694 ಸಿಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತ 224.05 ಕೋಟಿ ರೂ.ಗಳನ್ನು ಆರ್‌ಟಿಜಿಎಸ್‌ ಹಾಗೂ ಚೆಕ್‌ ಮುಖಾಂತರ ನಿವೃತ್ತಿ ಹೊಂದಿದ ಸಿಬಂದಿಗೆ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.

-ಸಂಸ್ಥೆಗಳು ಹಾಗೂ ಪಾವತಿಸುವ ಮೊತ್ತದ ವಿವರ:
*ಕರಾರಸಾ ನಿಗಮ- 4711 ಸಿಬಂದಿ, 86.55 ಕೋಟಿ ರೂ.
*ಬೆಂಮಸಾ ಸಂಸ್ಥೆ- 1,833 ಸಿಬಂದಿ, 50.25 ಕೋಟಿ ರೂ.
*ವಾಕರಸಾ ಸಂಸ್ಥೆ- 3,116 ಸಿಬಂದಿ, 51.50 ಕೋಟಿ ರೂ.
*ಕಕರಸಾ ಸಂಸ್ಥೆ- 2034 ಸಿಬಂದಿ, 35.75 ಕೋಟಿ ರೂ.
*ಒಟ್ಟು 11,694 ಸಿಬಂದಿ, 224.05 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next