Advertisement

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

08:34 PM Jan 02, 2025 | Team Udayavani |

ಪಾಟ್ನಾ: ಇತ್ತೀಚೆಗೆ ನಡೆದ ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಬೆನ್ನಲ್ಲೇ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ಜನ ಸುರಾಜ್‌ ಪಕ್ಷದ ಸ್ಥಾಪಕ ಪ್ರಶಾಂತ್‌ ಕಿಶೋರ್‌ ಗುರುವಾರದಿಂದ ಆಮರಣಾಂತ ಉಪವಾಸ ಆರಂಭಿಸಿದ್ದಾರೆ.

Advertisement

ಪರೀಕ್ಷಾ ಮಂಡಳಿ ವಿರುದ್ಧ ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರತಿಭಟಿಸುತ್ತಿರುವ ಆಕಾಂಕ್ಷಿಗಳನ್ನು ಕೂಡಿಕೊಂಡ ಕಿಶೋರ್‌, “ಪರೀಕ್ಷೆ ರದ್ದುಗೊಳಿಸಿ ಮರುಪರೀಕ್ಷೆಗಳನ್ನು ನಡೆಸಿ. ಹಾಗೂ ಪರೀಕ್ಷೆಗಳಿಂದ ಭರ್ತಿ ಮಾಡಬೇಕಾಗಿದ್ದ ಹುದ್ದೆಗಳನ್ನು ಮಾರಾಟಕ್ಕಿಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next