Advertisement

“PMUY”ಉಚಿತ ಸಿಲಿಂಡರ್‌ ಸೌಲಭ್ಯ

01:38 AM Sep 20, 2020 | mahesh |

ಮಣಿಪಾಲ: ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿ ಕೇಂದ್ರ ಸರಕಾರವು ಉಚಿತ ಸಿಲಿಂಡರ್‌ ನೀಡುತ್ತಿದ್ದು, ಈ ಯೋಜನೆಯ ಫ‌ಲಾನುಭವಿಗಳಾಗಲು ಸೆ. 30 ಕೊನೆಯ ದಿನಾಂಕವಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿ ಮಾಡಿದ ಲಾಕ್‌ಡೌನ್‌ ಕ್ರಮದಿಂದಾಗಿ ಆದಾಯದಲ್ಲಿ ವ್ಯತ್ಯಯವಾಗಿದೆ. ಪರಿಣಾಮ ಮಧ್ಯಮ ಮತ್ತು ಬಡ ವರ್ಗದವರಿಗೆ ಜೀವನ ನಿರ್ವಹಣೆ ಕಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿಯೇ ಪಿಎಂಯುವೈಯಡಿ ಕೇಂದ್ರ ಸರಕಾರವು ಉಚಿತ ಸಿಲಿಂಡರ್‌ ನೀಡುತ್ತಿದೆ. ಈ ಹಿಂದೆ ಯೋಜನೆಗೆ ಅರ್ಜಿ ಸಲ್ಲಿಸಲು ಎಪ್ರಿಲ್‌ನಲ್ಲಿ ಕೊನೆಯ ದಿನಾಂಕ ಇತ್ತು. ಆದರೆ ಕೋವಿಡ್ ಲಾಕ್‌ಡೌನ್‌ ಆದ ಕಾರಣ ಕೊನೆಯ ದಿನಾಂಕವನ್ನು ಸೆ. 30ರ ವರೆಗೆ ವಿಸ್ತರಿಸಲಾಗಿತ್ತು. ಈಗ ಪರಿಷ್ಕೃತ ಕಡೆಯ ದಿನಾಂಕವೂ ಸಮೀಪವಿದ್ದು, ಯೋಜನೆಯ ಫ‌ಲಾನುಭವಿಗಳಾಗದವರು ಇನ್ನು ಹತ್ತು ದಿನದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ, ಅರ್ಹತೆಗಳೇನು, ಏನೆಲ್ಲ ದಾಖಲಾತಿ ಅಗತ್ಯ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Advertisement

ಯಾರು ಅರ್ಹರು?
ಬಿಪಿಎಲ್‌ ಕಾರ್ಡ್‌ ಹೊಂದಿ ರುವ ಕುಟುಂಬ ಪಿಎಂಯುವೈ ಯೋಜನೆ ಫ‌ಲಾನುಭವಿಯಾಗಲು ಅರ್ಹರಾಗಿದ್ದು, ಉಚಿತ ಗ್ಯಾಸ್‌ ಸಂಪರ್ಕ ಪಡೆ ಯಲು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಯ ಹಂತಗಳು
ಮೊದಲಿಗೆ, ಅರ್ಹ ಅರ್ಜಿದಾರರು ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಬೇಕು.

ಬಳಿಕ ಅರ್ಜಿಯ ಕಾಲಂಗಳಲ್ಲಿ ನಿಗದಿತ, ಸೂಕ್ತ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಅರ್ಜಿದಾರನ ಹೆಸರು, ದಿನಾಂಕ, ಸ್ಥಳ ಮೊದಲಾದ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿದ ಅನಂತರ ಸ್ಥಳೀಯ ಎಲ್‌ಪಿಜಿ ಏಜೆನ್ಸಿಗೆ ಸಲ್ಲಿಸ ಬೇಕು. ಈ ಎಲ್ಲ ದಾಖಲೆಗಳ ಪರಿಶೀಲನೆಯಾದ ಬಳಿಕ ಅರ್ಜಿದಾರರಿಗೆ ಎಲ್‌ಪಿಜಿ ಗ್ಯಾಸ್‌ ಸಂಪರ್ಕ ಸಿಗಲಿದೆ.
ಒಂದು ವೇಳೆ, ಗ್ರಾಹಕರು ಈ 3 ತಿಂಗಳುಗಳ ಅವಧಿಯಲ್ಲಿ ರೀಫಿಲ್‌ ಸಿಲಿಂಡರ್‌ ಪಡೆಯ ದಿದ್ದಲ್ಲಿ,ಈ ಮುಂಗಡ ಹಣವನ್ನು 2021ರ ಮಾರ್ಚ್‌ 31ರ ವರೆಗೆ ಸಿಲಿಂಡರ್‌ ಪಡೆಯಲು ಬಳಸಬಹುದು.

ಅರ್ಜಿ ಸಲ್ಲಿಕೆ ಹೇಗೆ?
ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್‌ pmujjwalayojana.com ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು.

ಜನಧನ್‌ ಖಾತೆ ಅಗತ್ಯ
ಅರ್ಜಿ ಸಲ್ಲಿಸುವಾಗ ಜನಧನ್‌ ಬ್ಯಾಂಕ್‌ ಖಾತೆ ಸಂಖ್ಯೆ, ಆಧಾರ್‌ ಸಂಖ್ಯೆ ಅಗತ್ಯವಿದೆ. ಈ ಯೋಜನೆಯಲ್ಲಿ 14.2 ಕೆ.ಜಿ. ಸಿಲಿಂಡರ್‌ ಮತ್ತು 5 ಕೆ.ಜಿ. ಸಿಲಿಂಡರ್‌ ಎಂಬ 2 ವಿಭಾಗಗಳಿವೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಎಷ್ಟು ಕೆ.ಜಿ.ಯ ಸಿಲಿಂಡರ್‌ನ ಅಗತ್ಯವಿದೆ ಎಂದು ತಿಳಿಸಬೇಕು.

Advertisement

ಪಿಎಂಯುವೈ ಯೋಜನೆಯ ಪ್ರಮುಖ ಅಂಶಗಳು
– ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಯೋಜನೆಯ ಮುಂದಾಳತ್ವವನ್ನು ವಹಿಸಿಕೊಂಡಿದೆ. ಪಿಎಂಯುವೈ 2016ರ ಮೇ 1ರಂದು ಅಧಿಕೃತವಾಗಿ ಜಾರಿಯಾಗಿದೆ.
– ಕೇಂದ್ರ ಸರಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಿಪಿಎಲ್‌ ಕುಟುಂಬಗಳಿಗೆ ಗೃಹ ಬಳಕೆಯ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುತ್ತಿದೆ.
– 2011ರ ಜನಗಣತಿಯಲ್ಲಿ ನೋಂದಣಿ ಮಾಡಿಕೊಂಡಿರುವ ಬಿಪಿಎಲ್‌ ಕುಟುಂಬಗಳು ಉಜ್ವಲ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದು, -ಸುಮಾರು 8 ಕೋಟಿ ಕುಟುಂಬಗಳು ಈ ಯೋಜನೆಯ ಫ‌ಲಾನುಭವಿಗಳಾಗಿದ್ದಾರೆ.
– ಉಜ್ವಲ ಯೋಜನೆಯಡಿ ಪ್ರತೀ ಬಡ ಕುಟುಂಬಕ್ಕೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸುವ ಸರಕಾರಿ ಸ್ವಾಮ್ಯದ ಇಂಧನ ಕಂಪೆನಿಗಳಿಗೆ ಸರಕಾರವು ಪ್ರತೀ ಸಿಲಿಂಡರ್‌ಗೆ 1,600 ರೂ. ಸಬ್ಸಿಡಿ ನೀಡುತ್ತದೆ.

ಸೆಪ್ಟಂಬರ್‌ 30 ಅರ್ಜಿ ಸಲ್ಲಿಕೆಗೆ ಕಡೆಯ ದಿನ

Advertisement

Udayavani is now on Telegram. Click here to join our channel and stay updated with the latest news.

Next