Advertisement

“ಆವಾಸ’ದ ಕನಸಿಗೆ ಸಾಕಾರದ ವಿಶ್ವಾಸ

12:33 AM Feb 02, 2023 | Team Udayavani |

“ಸ್ವಂತ ಮನೆ ಹೊಂದುವ ಕನಸು ಈಡೇರಿದರೆ ಸಾಕಪ್ಪ’ ಎಂದು ಹೇಳುವ ಅನೇಕರು ನಮ್ಮ ಸುತ್ತಮುತ್ತ ಸಿಗುತ್ತಾರೆ. ಅದರಲ್ಲೂ ಬಡ, ಮಧ್ಯಮ ವರ್ಗದವರಂತೂ ಈ ಕನಸನ್ನು ಸಾಕಾರಗೊಳಿಸಲು ಜೀವಮಾನವಿಡೀ ದುಡಿ ಯು ತ್ತಾರೆ. ಈ ವರ್ಗಕ್ಕೆ ನೆರವಾಗುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ “ಆವಾಸ್‌ ಯೋಜನೆ’ಯನ್ನು ಜಾರಿಗೆ ತಂದಿತ್ತು.

Advertisement

ಈಗ ಸರ್ಕಾರ “ಪ್ರಧಾನಮಂತ್ರಿ ಆವಾಸ್‌ ಯೋಜನೆ’ಗೆ ನೀಡಲಾಗುವ ಅನುದಾನವನ್ನು ಶೇ.66ರಷ್ಟು ಹೆಚ್ಚಿಸಿದ್ದು, 79,000 ಸಾವಿರ ಕೋಟಿ ರೂ.ಗೆ ಏರಿಸಿದೆ. 2022-23ರ ಆಯವ್ಯಯದಲ್ಲಿ ಈ ಯೋಜನೆಗೆ 48,000 ಸಾವಿರ ಕೋಟಿ ನೀಡಲಾಗಿತ್ತು.

ಶಾಶ್ವತ ಮನೆ ಇಲ್ಲದವರಿಗೆ ಮನೆ ಒದಗಿಸುವುದು ಹಾಗೂ ದೇಶದ ಎಲ್ಲಾ ಜನರು ಮನೆ ಹೊಂದಬೇಕೆಂಬುದು ಈ ಯೋಜನೆಯ ಉದ್ದೇಶವಾಗಿದೆ. ಇದುವರೆಗೆ ಈ ಯೋಜನೆಯಡಿ ಕೋಟ್ಯಂತರ ಜನರು ಲಾಭ ಪಡೆದಿದ್ದಾರೆ.

ಈ ಯೋಜನೆಯಡಿ ಗುಡ್ಡಗಾಡು ಪ್ರದೇಶದ ಫ‌ಲಾನು ಭವಿಗಳಿಗೆ 1.30 ಲಕ್ಷ ರೂ. ನೀಡಿದರೆ, ಬಯಲುಸೀಮೆಯ ವರಿಗೆ 1.20 ಲಕ್ಷ ರೂ. ನೀಡಲಾಗುತ್ತದೆ. ಈ ಯೋಜನೆಗೆ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು ಇನ್ನಿತರರನ್ನು ಪರಿಗಣಿಸಲಾಗುತ್ತದೆ.

ಮೂಲಸೌಕರ್ಯ ಅಭಿವೃದ್ಧಿ ನಿಧಿ: ಇದೇ ವೇಳೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಮಾದರಿಯಲ್ಲೇ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸುವುದಾಗಿಯೂ ಘೋಷಿಸಲಾಗಿದೆ. ಈ ನಿಧಿಯನ್ನು ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌ ನಿರ್ವಹಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next