Advertisement
ದೆಹಲಿಯ ಕಚೇರಿಯಲ್ಲಿ ಮುಖ್ಯಮಂತ್ರಿ ಅತಿಷಿ ಜೊತೆ ಸಭೆ ನಡೆಸಿದ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಹೇಳಿದ ಕೇಜ್ರಿವಾಲ್ ಈ ಹಿಂದೆ ಮಹಿಳೆಯರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ ಮಂದಿನ ಚುನಾವಣೆಯಲ್ಲಿ ನಮ್ಮದೇ ಸರಕಾರ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿರುವ ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಹಿಳೆಯರ ಖಾತೆಗೆ 2100 ರೂಪಾಯಿ ಖಾತೆಗೆ ಜಮೆ ಮಾಡುವುದಾಗಿ ಹೇಳಿದ್ದಾರೆ.
Related Articles
ಹದಿನೆಂಟು ವರ್ಷ ಮೇಲ್ಪಟ್ಟ ಮಹಿಳೆಯರ ಖಾತೆಗೆ ಹಣ ಜಮೆಯಾಗಬೇಕಾದರೆ ಮಹಿಳಾ ಸಮ್ಮಾನ್ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು, ನೋಂದಣಿ ಮಾಡಿದರೆ ಮಾತ್ರ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದರು. ಶುಕ್ರವಾರದಿಂದ ನೋಂದಣಿ ಆರಂಭಗೊಳ್ಳಲಿದ್ದು ಮಹಿಳೆಯರು ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಿ ಎಂದು ವಿನಂತಿಸಿದ್ದಾರೆ.
Advertisement
ಬಿಜೆಪಿ ಟೀಕೆಗೆ ಕೇಜ್ರಿವಾಲ್ ಪ್ರತ್ಯುತ್ತರ:ದೆಹಲಿ ಜನತೆಗೆ ಕೇಜ್ರಿವಾಲ್ ಸುಳ್ಳು ಭರವಸೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಮಹಿಳೆಯರ ಖಾತೆಗೆ ಹಣ ಹಾಕಲು ಕೇಜ್ರಿವಾಲ್ ಜಾದೂ ಮಾಡಬೇಕು ಇಲ್ಲದಿದ್ದರೆ ದೆಹಲಿ ಸರಕಾರದ ಬಳಿ ಅಷ್ಟೊಂದು ಹಣ ಎಲ್ಲಿದೆ ಎಂದು ಬಿಜೆಪಿ ಕಿಡಿಕಾರಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಹೌದು ದೆಹಲಿ ಜನತೆಗೆ ನಾನು ಜಾದೂಗಾರನೇ ನಾನು ಏನು ಹೇಳಿದ್ದೇನೋ ಅದನ್ನು ಮಾಡೇ ಮಾಡುತ್ತೇನೆ ಹಣ ಎಲ್ಲಿಂದ ಉಳಿಸಬೇಕು ಎಲ್ಲಿ ಖರ್ಚು ಮಾಡಬೇಕು ಎಂಬುದು ತನಗೆ ಗೊತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Rewind: 2024ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು? ಓದಿ ವರದಿ