ಬ್ರಿಜ್ಟೌನ್ (ಬಾಬೇಡಾಸ್): ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಪ್ರವಾಸಿ ಭಾರತ ತಂಡ ಬ್ರಿಜ್ಟೌನ್ನ “ಕೆನ್ನಿಂಗ್ಸ್ ಟನ್ ಓವಲ್’ನಲ್ಲಿ ಅಭ್ಯಾಸ ಪಂದ್ಯ ಆರಂಭಿಸಿದೆ. ತನ್ನದೇ ಆಟಗಾರರನ್ನು ಹಾಗೂ ಸ್ಥಳೀಯ ಕ್ರಿಕೆಟಿಗರನ್ನು ಒಳಗೊಂಡಿರುವ ಈ ತಂಡಗಳೆಂದರೆ ರೋಹಿತ್ ಶರ್ಮ ಇಲೆವೆನ್ ಮತ್ತು ರವಿಚಂದ್ರನ್ ಅಶ್ವಿನ್ ಇಲೆವೆನ್.
ಮೊದಲ ದಿನದಾಟದ ಅಂತ್ಯಕ್ಕೆ ರೋಹಿತ್ ತಂಡ 43.4 ಓವರ್ಗಳಲ್ಲಿ 3 ವಿಕೆಟಿಗೆ 123 ರನ್ ಗಳಿಸಿದೆ. ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ.
ಆರಂಭಿಕನಾಗಿ ಇಳಿದ ಯಶಸ್ವಿ ಜೈಸ್ವಾಲ್ ಅರ್ಧ ಶತಕ ಬಾರಿಸಿ ಗಮನ ಸೆಳೆದರು. 57 ಎಸೆತಗಳಿಂದ 54 ರನ್ ಬಾರಿಸಿದ ಅವರು ಸ್ವಯಂ ನಿವೃತ್ತರಾದರು (7 ಬೌಂಡರಿ, 2 ಸಿಕ್ಸರ್). ರೋಹಿತ್ ಶರ್ಮ (24) ಕೂಡ ಬ್ಯಾಟಿಂಗ್ ಬಿಟ್ಟುಕೊಟ್ಟರು. ಔಟಾದವರೆಂದರೆ ಶುಭಮನ್ ಗಿಲ್ (27), ವಿರಾಟ್ ಕೊಹ್ಲಿ (3) ಮತ್ತು ಅಜಿಂಕ್ಯ ರಹಾನೆ (1).
ಕೆ.ಎಸ್. ಭರತ್ (1) ಮತ್ತು ಅಕ್ಷರ್ ಪಟೇಲ್ (3) ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ.