Advertisement
ಇವರು ಹೀಗೆ ತಿರುಗಾಡುತ್ತಿರುವುದು ಕೋವಿಡ್‌ಗೆ ಹೆದರಿಯಲ್ಲ. ಬದಲಿಗೆ ಕೋವಿಂಡ್ ಸೋಂಕಿತರು ದಾಖಲಾಗಿರುವ ಆಸ್ಪತ್ರೆಗಳಿಗೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಧಾರ್ಮಿಕ, ಅಧ್ಯಾತ್ಮಿಕ, ಜೀವನ ಸಂದೇಶಗಳನ್ನು ತಿಳಿಸುತ್ತಿದ್ದಾರೆ. ಈ ಮೂಲಕ ರೋಗಿಗಳು ಶೀಘ್ರ ಚೇತರಿಕೆಯಾಗುವುದರೊಂದಿಗೆ ಚಿಕಿತ್ಸೆ ಪಡೆಯುವ ವೇಳೆ ಉಲ್ಲಸಿತರಾಗಿರುತ್ತಾರೆ ಎಂದು ಹೇಳುತ್ತಾರೆ. ಮೇ 22ರಿಂದ ಇವರು ಈ ಧಾರ್ಮಿಕ ಕೆಲಸ ಶುರುಮಾಡಿದ್ದು, ರೋಗಿಗಳನ್ನು ಭೇಟಿ ಮಾಡುತ್ತಾರೆ. ರೋಗಿಗಳಿಗೆ ಪ್ರಾರ್ಥನೆ ಅಗತ್ಯವಿದೆ. ಅವರೊಂದಿಗೆ ಮಾತುಕತೆ ನಡೆಸುವವರು ಯಾರೂ ಇಲ್ಲ. ರೋಕ್ಮನ್ ಅವರು ಕೈಯಲ್ಲಿ ಶಿಲುಬೆ ಹಿಡಿದು ರೋಗಿಗಳೊಂದಿಗೆ ಮಾತುಕತೆ ನಡೆಸಿ, ಸಂದೇಶಗಳನ್ನು ನೀಡುತ್ತಾರೆ. ಇದು ಹಲವಾರು ರೋಗಿಗಳಿಗೆ ಖುಷಿ ತಂದಿದೆ. ರೋಕ್ಮನ್ ಅವರು ಉಕ್ರೇನ್‌ನ ಗ್ರೀಕ್ ಕ್ಯಾಥೋಲಿಕ್ ಚರ್ಚ್ ಸಮೂಹಗಳಿಗೆ ಸೇರಿದವರಾಗಿದ್ದು, ಈ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. Advertisement
ಮಾಸ್ಕ್, ಪಿಪಿಇ ಕಿಟ್ ಧರಿಸಿ ಬಂದ ಪಾದ್ರಿ
04:48 PM May 31, 2020 | Sriram |
Advertisement
Udayavani is now on Telegram. Click here to join our channel and stay updated with the latest news.