ನವದೆಹಲಿ: ಮಕ್ಕಳು, ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್ಗಳ ಎರಡು ನಿಮಿಷಗಳ ಇನ್ಸ್ಟಂಟ್ ಆಹಾರವಾದ ಮ್ಯಾಗಿ ನೂಡಲ್ಸ್ (Maggi noodles) ಬೆಲೆ ಜ.1ರ ನಂತರ ಏರಿಕೆಯಾಗುವ ಸಾಧ್ಯತೆ ಇದೆ.
ಭಾರತವನ್ನು ಅತಿ ನೆಚ್ಚಿನ ದೇಶ (MFN) ಎಂಬ ಪಟ್ಟಿಯ ದ್ವಿಗುಣ ತೆರಿಗೆ ತಪ್ಪಿಸುವ ಒಪ್ಪಂದದಿಂದ ಸ್ವಿಜರ್ಲೆಂಡ್ ಹಿಂದೆ ಸರಿದ ಬೆನ್ನಲ್ಲೇ ಸ್ವಿಸ್ ಬಹುರಾಷ್ಟ್ರೀಯ ಕಂಪನಿ ನೆಸ್ಲೆಗೆ (Nestle) ತೆರಿಗೆ ಬಿಸಿ ತಟ್ಟಿದೆ.
ಇದರಿಂದ ಮ್ಯಾಗಿ, ಕಿಟ್ಕ್ಯಾಟ್ ಸೇರಿದಂತೆ ನೆಸ್ಲೆಯ ಇತರ ಉತ್ಪನ್ನಗಳ ಬೆಲೆ ಭಾರತದಲ್ಲಿ ಜ.1ರ ನಂತರ ಶೇ.10ರಷ್ಟು ದುಬಾರಿ ಆಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ವಿಶ್ವದಲ್ಲೇ ಅತಿ ಹೆಚ್ಚು ಮ್ಯಾಗಿ ಭಾರತದಲ್ಲಿ ಮಾರಾಟವಾಗುತ್ತದೆ.
ಗಮನಾರ್ಹವಾಗಿ, 2023-24 ಹಣಕಾಸು ವರ್ಷದಲ್ಲಿ ಮ್ಯಾಗಿ ಮಾರಾಟವು ಆರು ಶತಕೋಟಿ ಪ್ಯಾಕೆಟ್ ಗಳನ್ನು ತಲುಪಿದೆ ಎಂದು ನೆಸ್ಲೆ ಇಂಡಿಯಾ ಘೋಷಿಸಿತ್ತು. ನೆಸ್ಲೆ ಇಂಡಿಯಾವು ಜನಪ್ರಿಯ ಚಾಕೊಲೇಟ್ ಕಿಟ್ಕ್ಯಾಟ್ ನ 4.2 ಬಿಲಿಯನ್ ಬಾರ್ ಗಳನ್ನು ಮಾರಾಟ ಮಾಡಿದೆ. ಕಿಟ್ ಕ್ಯಾಟ್ ಗೆ ಭಾರತವು ಜಾಗತಿಕವಾಗಿ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.