Advertisement

ರಾಜ್ಯದ ರೈತರಿಗೂ ಶಕ್ತಿ ತುಂಬಿದ ಅಭಿಯಾನ

03:01 PM Aug 22, 2021 | Team Udayavani |

ಬೆಂಗಳೂರು: ಮಳೆ ನೀರು ಸಂಗ್ರಹ,ಅಂತರ್ಜಲವೃದ್ಧಿ, ಕೆರೆ-ಕಲ್ಯಾಣಿ ಪುನಶ್ಚೇತನದ ಉದ್ದೇಶದೊಂದಿಗೆ ಆರಂಭವಾದ ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್‌ ಇಲಾಖೆಯ ಮಹತ್ವಾಕಾಂಕ್ಷಿ “ಜಲಶಕ್ತಿ ಅಭಿಯಾನ’ ರೈತರ ಪಾಲಿಗೂ ವರದಾನವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು “ಕ್ಯಾಚ್‌ದ ರೈನ್‌’ ಕರೆಯೊಂದಿಗೆ ರಾಜ್ಯದಲ್ಲಿ ಜಲಶಕ್ತಿ ಹೆಸರಿನಲ್ಲಿ ಆರಂಭವಾದ ಅಭಿಯಾನದಡಿ72,411 ಕೃಷಿ ಹೊಂಡ ಹಾಗೂ ರೈತರ ಜಮೀನು ಗಳಲ್ಲಿ 90,946 ಬದು ನಿರ್ಮಾಣಗೊಂಡಿದ್ದು ರೈತರಿಗೆ ಅನುಕೂಲವಾಗಿದೆ.

ಇಷ್ಟೇ ಅಲ್ಲದೆ 10 ಸಾವಿರಕ್ಕೂ ಹೆಚ್ಚು ಗೋಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದ್ದು,ಪ್ರತಿ ಗ್ರಾಮದಲ್ಲೂ ಕೃಷಿ, ಹೊಂಡ, ಬದು ಹಾಗೂ ಗೋ ಕಟ್ಟೆಗಳ ನಿರ್ಮಾಣಕ್ಕೆ ಡಿಮ್ಯಾಂಡ್‌ ಸಹ ಸೃಷ್ಟಿಯಾಗಿತ್ತು. ಜಲಶಕ್ತಿ ಅಭಿಯಾನದಡಿ ರೈತರು ತಮ್ಮ ಹೊಲಗಳಲ್ಲಿ ಕೃಷಿ ಹೊಂಡ ಹಾಗೂ ಬದು
ಮತ್ತು ಗೋಕಟ್ಟೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದ ರೈತರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಇಲಾಖೆಯ
ಯೋಜನೆ ಸದುಪಯೋಗಪಡಿಸಿಕೊಂಡಿದ್ದಾರೆ.

ಜಲಶಕ್ತಿ ಅಭಿಯಾನದಡಿ ರಾಜ್ಯದಲ್ಲಿ 4.87 ಜಲ ಸಂರಕ್ಷಣೆಕಾಮಗಾರಿ ಕೈಗೊಂಡು2.38 ಲಕ್ಷ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣ
ಗೊಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ನರೇಗಾಯೋಜನೆಯಡಿರಾಜ್ಯದಲ್ಲಿ 2934.32 ಕೋಟಿ ರೂ. ವೆಚ್ಚ ಮಾಡಿದ್ದು ಆ ಪೈಕಿ ಶೇ.82 ರಷ್ಟು 2408.50 ಕೋಟಿ ರೂ.ಜಲಶಕ್ತಿ ಅಭಿಯಾನಕ್ಕೆ ವೆಚ್ಚ ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.

ಇದನ್ನೂ ಓದಿ:ಆಫ್ಘಾನ್‌ ಅರಾಜಕತೆಯಿಂದ ಗಗನಕ್ಕೇರಿದ ಡ್ರೈ ಫ್ರೂಟ್ಸ್ ಬೆಲೆ

Advertisement

ಹೊಸ ಕೆರೆ: ಜಲಶಕ್ತಿ ಅಭಿಯಾನದಡಿ ಹೊಸಕೆರೆ ನಿರ್ಮಾಣ, ಹಾಲಿ ಇರುವ ಕೆರೆಗಳಲ್ಲಿ ಹೂಳೆತ್ತುವಿಕೆ ಸೇರಿ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನೂ ಕೈಗೊಂಡಿದ್ದು ಬೆಳಗಾವಿ ಜಿಲ್ಲೆಯೊಂದರಲ್ಲೇ 240 ಹೊಸ ಕೆರೆಗಳನ್ನು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಲಬುರಗಿ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ವಿಶೇಷವಾಗಿ 286 ಕಲ್ಯಾಣಿಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ 4082 ತೆರೆದ ಬಾವಿ ಅಭಿವೃದ್ಧಿ ಕಾಮಗಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 1.12 ಲಕ್ಷ ಅರಣ್ಯೀಕರಣ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ತುಮಕೂರು ರಾಮನಗರ, ಕಲಬುರಗಿ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ಅತಿ ಹೆಚ್ಚು 1,36,596 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನರೇಗಾದಡಿ ರೈತರು ತಮ್ಮ ಹೊಲ ಮತ್ತು ತೋಟಗಳಲ್ಲಿ ಹಣ್ಣು ಹಾಗೂ ಇತರೆ ಸಸಿ ನೆಡಲು ಸಹ ಅವಕಾಶ ಕಲ್ಪಿಸಿಕೊಡಲಾಗಿದ್ದು,ಕೋವಿಡ್‌ ಮೊದಲ ಹಾಗೂ 2ನೇ ಅಲೆ ಸಂದರ್ಭದಲ್ಲಿ1ಲಕ್ಷಕ್ಕೂ ಹೆಚ್ಚು ರೈತರು ಯೋಜನೆಯ ಉಪಯೋಗ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಜಲಶಕ್ತಿ ಅಭಿಯಾನದ ಮಾದರಿಯಲ್ಲೇ ಈ ವರ್ಷ ಕೇಂದ್ರ ಸರ್ಕಾರದ ಪುರಸ್ಕೃತ ಜಲಜೀವನ್‌ ಮಿಷನ್‌ನ “ಮನೆ ಮನೆಗೆ ಗಂಗೆ’ಯೋಜನೆಅನುಷ್ಠಾನಕ್ಕೆಅಧಿಕಾರಿಗಳಿಗೆ ಸೂಚಿಸಲಾಗಿದೆ.23.57ಲಕ್ಷಮನೆಗಳಿಗೆ
ನಲ್ಲಿ ಮೂಲಕ ನೀರು ಪೂರೈಕೆ ಗುರಿ ಹೊಂದಿದ್ದು ತಿಂಗಳಿಗೆ 5 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ನೀಡಲಾಗಿದೆ ಎಂದು ಹೇಳಲಾಗಿದೆ.

ಜಲಶಕ್ತಿ ಅಭಿಯಾನದಿಂದ ಗ್ರಾಮೀಣ ಭಾಗದಲ್ಲಿ ಕೆರೆ-ಕಲ್ಯಾಣಿ ಪುನಶ್ಚೇತನ, ಅಂತರ್ಜಲ ವೃದ್ಧಿಯ ಜತೆಗೆ 72,411 ಕೃಷಿ ಹೊಂಡ ಹಾಗೂ ರೈತರ ಜಮೀನುಗಳಲ್ಲಿ 90,946 ಬದು ಮತ್ತು ಸಾವಿರಾರು ಗೋಕಟ್ಟೆಗಳ ನಿರ್ಮಾಣದ ಮೂಲಕ ಕೃಷಿಕರಿಗೆ ನೆರವಾಗಿರುವುದು ಸಂತೋಷದ ಸಂಗತಿ. ಇಡೀ ಇಲಾಖೆಯ ಅಧಿಕಾರಿಗಳು-ಸಿಬ್ಬಂದಿ ದೃಢ ಸಂಕಲ್ಪ ತೊಟ್ಟು ಯಜ್ಞದಂತೆ ಅಭಿಯಾನದಯಶಸ್ವಿಗೆ ದುಡಿಯುತ್ತಿದ್ದಾರೆ.
– ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

-ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next